Father’s Day 2023: ನಿಮ್ಮ ತಂದೆಗೆ ಈ ವಿಶೇಷ ಉಡುಗೊರೆ ಕೊಡಲು ಮರೆಯದಿರಿ
ನಿಮ್ಮ ತಂದೆಗೆ ಹೆಚ್ಚು ಓದುವ ಆಸಕ್ತಿಯಿದ್ದರೆ ಇ-ರೀಡರ್ ಇಷ್ಟ ಆಗುತ್ತದೆ. 7-ಇಂಚಿನ Kindle Oasis (10th Gen) ಅಮೆಜಾನ್‌ನಲ್ಲಿ 23,999 ರೂ. ಗೆ ಲಭ್ಯವಿದೆ. ಇದು 8 GB ಅಥವಾ 32 GB ಸಂಗ್ರಹಣೆ ಮತ್ತು E ಇಂಕ್ ಡಿಸ್‌ಪ್ಲೇ ಹೊಂದಿದೆ.
1 / 6
ಈ ಭಾರಿ ಅಂದರೆ 2023 ರಲ್ಲಿ ತಂದೆಯ ದಿನವನ್ನು ಜೂನ್ 18 ರ ಭಾನುವಾರದಂದು ಆಚರಿಸಲಾಗುತ್ತದೆ. ಈ ಸಂದರ್ಭ ನೀವು ನಿಮ್ಮ ತಂದೆಗೆ ಟೆಕ್ಗೆ ಸಂಬಂಧಿಸಿದ ವಿಶೇಷ ಉಡುಗೊರೆ ಕೊಡುವ ಯೋಜನೆಯಲ್ಲಿದ್ದರೆ ಇಲ್ಲಿದೆ ನೋಡಿ ಕೆಲ ಅತ್ಯುತ್ತಮ ಆಯ್ಕೆಗಳು.
2 / 6
ಆಪಲ್ ವಾಚ್ ಸರಣಿ 8: ನಿಮ್ಮ ತಂದೆ ಐಫೋನ್ ಬಳಸುತ್ತಿದ್ದರೆ ಆಪಲ್ ವಾಚ್ ಸರಣಿ 8 ಅತ್ಯುತ್ತಮ ಉಡುಗೊರೆ ಎನ್ನಬಹುದು. ಇದು ನೋಡಲು ಕೂಡ ಸ್ಟೈಲಿಶ್ ಆಗಿದ್ದು ಅತ್ಯುತ್ತಮ ಫೀಚರ್ಗಳನ್ನು ಹೊಂಡಿದೆ. ಇದು ಫಿಟ್‌ನೆಸ್ ಮತ್ತು ಹೆಲ್ತ್ ಟ್ರ್ಯಾಕಿಂಗ್, ಸೆಲ್ಯುಲಾರ್ ರೋಮಿಂಗ್, ಕ್ರ್ಯಾಶ್ ಡಿಟೆಕ್ಷನ್ ಮತ್ತು 36 ಗಂಟೆಗಳ ಬ್ಯಾಟರಿ ಅವಧಿಯಂತಹ ಪ್ರಯೋಜನಕಾರಿ ವೈಶಿಷ್ಟ್ಯಗಳನ್ನು ಹೊಂದಿದೆ.
3 / 6
OnePlus ಪ್ಯಾಡ್: ಟ್ಯಾಬ್ಲೆಟ್ ವಿಚಾರಕ್ಕೆ ಬಂದರೆ, OnePlus ಪ್ಯಾಡ್ ಉತ್ತಮ ಆಯ್ಕೆ. ಇದು 11.6-ಇಂಚಿನ IPS LCD ಡಿಸ್ ಪ್ಲೇ ಹೊಂದಿದ್ದು, HDR10+ ಅನ್ನು ಬೆಂಬಲಿಸುತ್ತದೆ. ವಿಡಿಯೋ ವಿಷಯವನ್ನು ಹೆಚ್ಚು ವೀಕ್ಷಿಸಲು ಸೂಕ್ತವಾಗಿದೆ. ಇದರಲ್ಲಿ ನಾಲ್ಕು ಸ್ಪೀಕರ್‌ಗನ್ನು ನೀಡಲಾಗಿದೆ. MediaTek ಡೈಮೆನ್ಸಿಟಿ 9000 SoC ಮೂಲಕ ಕಾರ್ಯ ನಿರ್ವಹಿಸುತ್ತದೆ.
4 / 6
ನಥಿಂಗ್ ಇಯರ್ 2: ನಥಿಂಗ್‌ನ ಹೊಸ ಇಯರ್ 2 11.6mm ನ ಡ್ಯುಯಲ್ ಚೇಂಬರ್ ವಿನ್ಯಾಸ ಮತ್ತು ಆಕರ್ಷಕವಾದ ಔಟ್‌ಪುಟ್ ಸೌಂಡ್‌ಸ್ಟೇಜ್ ಅನ್ನು ಹೊಂದಿದೆ. ಇದು ಹೊರಗಿನ ಶಬ್ದವನ್ನು ಮ್ಯೂಟ್ ಮಾಡುತ್ತದೆ. 36-ಗಂಟೆಗಳ ಬ್ಯಾಟರಿ ಅವಧಿಯನ್ನು ಮತ್ತು 2.5W Qi- ಪ್ರಮಾಣೀಕೃತ ವೈರ್‌ಲೆಸ್ ಚಾರ್ಜಿಂಗ್ ನೀಡಲಾಗಿದೆ.
5 / 6
ಕಿಂಡಲ್ ಓಯಸಿಸ್: ನಿಮ್ಮ ತಂದೆಗೆ ಹೆಚ್ಚು ಓದುವ ಆಸಕ್ತಿಯಿದ್ದರೆ ಇ-ರೀಡರ್ ಇಷ್ಟ ಆಗುತ್ತದೆ. 7-ಇಂಚಿನ Kindle Oasis (10th Gen) ಅಮೆಜಾನ್‌ನಲ್ಲಿ 23,999 ರೂ. ಗೆ ಲಭ್ಯವಿದೆ. ಇದು 8 GB ಅಥವಾ 32 GB ಸಂಗ್ರಹಣೆ ಮತ್ತು E ಇಂಕ್ ಡಿಸ್‌ಪ್ಲೇ ಹೊಂದಿದೆ.
6 / 6
ಸ್ಯಾಮ್ಸಂಗ್ ಗ್ಯಾಲಕ್ಸಿ Watch 5: ಈ ವಾಚ್ ಎಲ್ಲಾ Android ಸ್ಮಾರ್ಟ್‌ಫೋನ್‌ಗಳೊಂದಿಗೆ ಕಾರ್ಯನಿರ್ವಹಿಸುವ 44mm ಬ್ಲೂಟೂತ್ ಆವೃತ್ತಿಯಲ್ಲಿ ಲಭ್ಯವಿದೆ. ಈ ಕೈಗಡಿಯಾರವು ವ್ಯಾಯಾಮ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುತ್ತದೆ ಹಾಗೂ ದೇಹದ ಸಂಯೋಜನೆಯನ್ನು ವಿಶ್ಲೇಷಿಸುತ್ತದೆ. ಹೃದಯ ಬಡಿತ ಮತ್ತು ಹೃದಯರಕ್ತನಾಳದ ಆರೋಗ್ಯದ ಬಗ್ಗೆ ಮಾಹಿತಿ ನೀಡುವ ಜೊತೆಗೆ ಅನೇಕ ಆರೋಗ್ಯಕರ ಪ್ರಯೋಜನ ನೀಡುತ್ತದೆ.