ಫಿಫಾ ವಿಶ್ವಕಪ್ ಟ್ರೋಫಿ ಅನಾವರಣಗೊಳಿಸಿದ ದೀಪಿಕಾ; ಕಾರ್ಯಕ್ರಮ ನೀಡಿದ ನೋರಾ ಫತೇಹಿ; ಫೋಟೋ

Edited By:

Updated on: Dec 18, 2022 | 10:15 PM

FIFA World Cup 2022: ಫಿಫಾ ವಿಶ್ವಕಪ್ ಟ್ರೋಫಿಯನ್ನು ಮೈದಾನದಲ್ಲಿ ಅನಾವರಣಗೊಳಿಸಿದಾಗ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೂಡ ಟ್ರೋಫಿಯೊಂದಿಗೆ ಕಾಣಿಸಿಕೊಂಡರು.

1 / 5
2022 ರ ಫಿಫಾ ವಿಶ್ವಕಪ್ ಹೇಗೆ ಅದ್ಧೂರಿಯಾಗಿ ಆರಂಭವಾಯಿತೋ, ಅದೇ ರೀತಿಯ ಅಂತ್ಯವನ್ನು ಕಾಣುತ್ತಿದೆ. ಫ್ರಾನ್ಸ್ ಮತ್ತು ಅರ್ಜೆಂಟೀನಾ ನಡುವಿನ ಪ್ರಶಸ್ತಿ ಪಂದ್ಯಕ್ಕೂ ಮುನ್ನ ಸಮಾರೋಪ ಸಮಾರಂಭವನ್ನು ತಾರೆಗಳಿಂದ ಅಲಂಕರಿಸಿದ ವರ್ಣರಂಜಿತ ಕಾರ್ಯಕ್ರಮದೊಂದಿಗೆ ನಡೆಸಲಾಯಿತು. ಈ ಸಮಾರಂಭದಲ್ಲಿ ಬಾಲಿವುಡ್​ನ ಚೆಲುವು ಕೂಡ ಕಂಡು ಬಂತು.

2 / 5

ಫಿಫಾ ವಿಶ್ವಕಪ್ ಟ್ರೋಫಿಯನ್ನು ಮೈದಾನದಲ್ಲಿ ಅನಾವರಣಗೊಳಿಸಿದಾಗ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೂಡ ಟ್ರೋಫಿಯೊಂದಿಗೆ ಕಾಣಿಸಿಕೊಂಡರು. ಅವರೊಂದಿಗೆ ಸ್ಪೇನ್‌ನ ಮಾಜಿ ನಾಯಕ ಐಕರ್ ಕ್ಯಾಸಿಯಸ್ ಕೂಡ ಉಪಸ್ಥಿತರಿದ್ದರು.

3 / 5

ಇದಲ್ಲದೇ ಸಮಾರೋಪ ಸಮಾರಂಭದಲ್ಲಿ ಬಾಲಿವುಡ್ ನಟಿ ನೋರಾ ಫತೇಹಿ ಕೂಡ ಕಾರ್ಯಕ್ರಮ ನೀಡಿದರು. ಅವರು ಇತರ ದೇಶಗಳ ತಾರೆಗಳೊಂದಿಗೆ 'ನೈಟ್ ಟು ರಿಮೆಂಬರ್' ಹಾಡಿಗೆ ಪ್ರದರ್ಶನ ನೀಡಿದರು. ಇದಕ್ಕೂ ಮುನ್ನ ನೋರಾ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲೂ ಪ್ರದರ್ಶನ ನೀಡಿದ್ದರು.

4 / 5

ನೈಜೀರಿಯನ್-ಅಮೇರಿಕನ್ ಸಂಗೀತಗಾರ ಡೇವಿಡೊ ಈ ವಿಶ್ವಕಪ್​ನ ಥೀಮ್ ಸಾಂಗ್​ಗೆ ಪ್ರದರ್ಶನ ನೀಡಿದರೆ, ಈ ಕಾರ್ಯಕ್ರಮದಲ್ಲಿ ಪೋರ್ಟೊ ರಿಕನ್ ಗಾಯಕ ಓಜುನಾ ಮತ್ತು ಕಾಂಗೋಲೀಸ್-ಫ್ರೆಂಚ್ ರಾಪರ್ ಗಿಮ್ಮಸ್ ಕೂಡ ಕಾಣಿಸಿಕೊಂಡರು.

5 / 5

ಇದಲ್ಲದೇ ತಮ್ಮ ಚಿತ್ರದ ಪ್ರಚಾರಕ್ಕೆ ಬಂದಿದ್ದ ಹಿರಿಯ ನಟ ಶಾರುಖ್ ಕೂಡ ಫೈನಲ್ ಪಂದ್ಯದ ಪ್ರೀ ಮ್ಯಾಚ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆಗೆ ವೇಯ್ನ್ ರೂನಿಯಂತಹ ಅನುಭವಿ ಆಟಗಾರರೂ ಈ ಶೋನಲ್ಲಿ ಭಾಗಿಯಾಗಿದ್ದರು.

Published On - 10:15 pm, Sun, 18 December 22

TV9 Web

TV9 Kannada

Read More
Loading...
Unable to load recommendations.
Follow Us