Kannada News Photo gallery Flipkart Year End Sale to end tomorrow Here is a look at some of the best Phone with huge discounts Kaannad News
Flipkart Year End Sale: ಫ್ಲಿಪ್‌ಕಾರ್ಟ್ ಇಯರ್ ಎಂಡ್ ಸೇಲ್ ಆಫರ್ ಮಾಡಬೇಡಿ: ಈ ಸ್ಮಾರ್ಟ್ಫೋನ್ಗಳಿಗೆ ಬಂಪರ್ ಡಿಸ್ಕೌಂಟ್
TV9 Web | Updated By: Vinay Bhat
Updated on:
Dec 30, 2022 | 2:32 PM
Year End Sale: ಫ್ಲಿಪ್ಕಾರ್ಟ್ನಲ್ಲಿ ಈಯರ್ ಎಂಡ್ ಸೇಲ್ ನಡೆಯುತ್ತಿದೆ. ಆ್ಯಪಲ್, ಸ್ಯಾಮ್ಸಂಗ್, ಗೂಗಲ್, ರಿಯಲ್ ಮಿ, ಒನ್ಪ್ಲಸ್ ಸೇರಿದಂತೆ ಅನೇಕ ಸ್ಮಾರ್ಟ್‌ಫೋನ್ ಬ್ರ್ಯಾಂಡ್ಗಳ ಮೇಲೆ ಆಕರ್ಷಕ ರಿಯಾಯಿತಿ ದರದಲ್ಲಿ ಮಾರಾಟ ಆಗುತ್ತಿದೆ. ಮುಖ್ಯವಾಗಿ ಐಫೋನ್ 12 ಮಿನಿ ಭಾರೀ ಡಿಸ್ಕೌಂಟ್ ಬೆಲೆಯಲ್ಲಿ ಕಾಣಿಸಿದೆ.
1 / 7
ವಾಲ್ಮಾರ್ಟ್ ಒಡೆತನದ ಪ್ರಸಿದ್ಧ ಇ ಕಾಮರ್ಸ್ ತಾಣ ಫ್ಲಿಪ್ಕಾರ್ಟ್ನಲ್ಲಿ ಇಯರ್ ಎಂಡ್ ಸೇಲ್ ನಡೆಯುತ್ತಿದೆ. ಈ ಮೇಳದಲ್ಲಿ ಸ್ಮಾರ್ಟ್ಫೋನ್ಗಳು ಸೇರಿದಂತೆ ಲ್ಯಾಪ್ಟಾಪ್, ಬಟ್ಟೆಗಳು ಬಹುತೇಕ ಎಲ್ಲ ಎಲೆಕ್ಟ್ರಾನ್ ವಸ್ತುಗಳು ಬಂಪರ್ ಡಿಸ್ಕೌಂಟ್ನಲ್ಲಿ ಮಾರಾಟ ಆಗುತ್ತಿದೆ.
2 / 7
ಆ್ಯಪಲ್, ಸ್ಯಾಮ್ಸಂಗ್, ಗೂಗಲ್, ರಿಯಲ್ ಮಿ, ಒನ್ಪ್ಲಸ್ ಸೇರಿದಂತೆ ಅನೇಕ ಸ್ಮಾರ್ಟ್‌ಫೋನ್ ಬ್ರ್ಯಾಂಡ್ಗಳ ಮೇಲೆ ಆಕರ್ಷಕ ರಿಯಾಯಿತಿ ದರದಲ್ಲಿ ಮಾರಾಟ ಆಗುತ್ತಿದೆ. ಮುಖ್ಯವಾಗಿ ಐಫೋನ್ 12 ಮಿನಿ ಭಾರೀ ಡಿಸ್ಕೌಂಟ್ ಬೆಲೆಯಲ್ಲಿ ಕಾಣಿಸಿದೆ.
3 / 7
ಈ ಮಾರಾಟ ಮೇಳದಲ್ಲಿ ಆಪಲ್ ಐಫೋನ್ 12 ಮಿನಿ ಫೋನ್ 36,999ರೂ. ಗಳ ಪ್ರೈಸ್ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ಗ್ರಾಹಕರು ಹೆಚ್ಚುವರಿಯಾಗಿ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ನಲ್ಲಿ 5% ಕ್ಯಾಶ್‌ಬ್ಯಾಕ್ ಪಡೆಯಬಹುದು. ಹಾಗೆಯೇ ಸುಮಾರು 21,900ರೂ. ವರೆಗೆ ಎಕ್ಸ್‌ಚೇಂಜ್ ಕೊಡುಗೆಯನ್ನು ಪಡಯಲು ಅವಕಾಶವಿದೆ.
4 / 7
ಇನ್ನು ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್‌ಫೋನ್ 29,999 ರೂ. ಗೆ ಸೇಲ್ ಆಗುತ್ತಿದೆ. ಈ ಫೋನ್ ಮೇಲೆ 14,000 ರೂ. ಗಳ ರಿಯಯಿತಿ ನೀಡಲಾಗಿದೆ. ಇದರ ಜೊತೆಗೆ ಫೆಡರಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ದಾರರು 5,000 ರೂ. ಗಳ ಮೇಲಿನ ಆರ್ಡರ್ಗೆ 3,000 ರೂ. ವರೆಗಿನ ಡಿಸ್ಕೌಂಟ್ ಪಡೆಯಬಹುದು. ಇಷ್ಟೇ ಅಲ್ಲದೆ 21,900 ರೂ. ವರೆಗೆದಿನ ಎಕ್ಸ್‌ಚೇಂಜ್ ಆಫರ್ ಕೂಡ ಘೋಷಿಸಲಾಗಿದೆ.
5 / 7
ಐಫೋನ್ 13 5ಜಿ ಸ್ಮಾರ್ಟ್‌ಫೋನ್ ಕೂಡ 61,999 ರೂ. ಗೆ ಸೇಲ್ ಆಗುತ್ತಿದೆ. ಇದರ 128GB ಸ್ಟೋರೇಜ್ ಆಯ್ಕೆಯ ಮೂಲ ಬೆಲೆ 69,990 ರೂ. ಆಗಿದೆ. ಈ ಫೋನ್ ಮೇಲೆ 7,991 ರೂ. ಗಳ ರಿಯಾಯಿತಿ ಘೋಷಿಸಲಾಗಿದೆ.
6 / 7
ಅಂತೆಯೆ ಮೋಟೋ ಎಡ್ಜ್ 30 ಫೋನನ್ನು ನೀವು ಕೇವಲ 22,999 ರೂ. ಗೆ ಖರೀದಿಸಬಹುದು. ಇದರ ಮೂಲಬೆಲೆ 30,000 ರೂ. ಆಗಿದೆ. ಇನ್ನು ನೀವು ಕಡಿಮೆ ಬೆಲೆಯ 5ಜಿ ಫೋನ್ ಹುಡುಕುತ್ತಿದ್ದರೆ ಸ್ಯಾಮ್ಸಂಗ್ ಗ್ಯಾಲಕ್ಸಿ F23 ಉತ್ತಮ ಆಯ್ಕೆ ಆಗಿದೆ. ಇದರ ಬೆಲೆ ಈಗ 14,999 ರೂ. ಆಗಿದೆ.
7 / 7
ಇತ್ತ ಮತ್ತೊಂದು ಜನಪ್ರಿಯ ಅಮೆಜಾನ್ ಪ್ಲಾಟ್‌ಫಾರ್ಮ್ ತಾಣದಲ್ಲಿ ಶವೋಮಿ ಎಮ್ಐ 11 ಲೈಟ್ NE 5G (8GB RAM, 128GB) ಸ್ಮಾರ್ಟ್‌ಫೋನ್ 25,999ರೂ. ಆಫರ್ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ಐಸಿಐಸಿಐ ಬ್ಯಾಂಕ್‌ನಿಂದಲೂ ಕೊಡುಗೆ ಲಭ್ಯವಿದ್ದು, ಜೊತೆಗೆ ಆಕರ್ಷಕ ಎಕ್ಸ್‌ಚೇಂಜ್ ರಿಯಾಯಿತಿ ಕೊಡುಗೆ ಸಹ ಪಡೆದಿದೆ.