- Kannada News Photo gallery Cricket photos Rishabh Pant Accident Rishabh Pant wants to surprise his mother and celebrate new year with family
Rishabh Pant Accident: ಅಮ್ಮನಿಗೆ ಸರ್ಪ್ರೈಸ್ ನೀಡಲು ಹೊರಟ್ಟಿದ್ದ ರಿಷಬ್ ಪಂತ್..!
Rishabh Pant Accident: ಪಂತ್ ತನ್ನ ತಾಯಿ ಮತ್ತು ತನ್ನ ಕುಟುಂಬದೊಂದಿಗೆ ಹೊಸ ವರ್ಷವನ್ನು ಆಚರಿಸಲು ಬಯಸಿದ್ದರು. ಹೀಗಾಗಿ ಇದಕ್ಕಿದ್ದಂತೆ ಮನೆ ಕಡೆ ಹೊರಡಲು ಪ್ಲಾನ್ ಮಾಡಿದ ಪಂತ್, ದಿಡೀರ್ ಎಂಟ್ರಿಕೊಡುವುದರೊಂದಿಗೆ ತನ್ನ ತಾಯಿಗೆ ಸರ್ಪ್ರೈಸ್ ನೀಡಲು ಮುಂದಾಗಿದ್ದರು ಎಂದು ತಿಳಿದುಬಂದಿದೆ.
Updated on:Dec 30, 2022 | 12:45 PM

ರೂರ್ಕಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ (Rishabh Pant) ಗಂಭೀರವಾಗಿ ಗಾಯಗೊಂಡಿದ್ದಾರೆ. ಪಂತ್ ದೆಹಲಿಯಿಂದ ರೂರ್ಕಿಯಲ್ಲಿರುವ ತಮ್ಮ ನಿವಾಸಕ್ಕೆ ಬರುತ್ತಿದ್ದಾಗ ಅವರ ಕಾರು ಅಪಘಾತಕ್ಕೀಡಾಗಿದೆ. ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಸುಟ್ಟು ಕರಕಲಾಗಿದೆ. ವಾಸ್ತವವಾಗಿ ಪಂತ್, ತನ್ನ ತಾಯಿಗೆ ಸರ್ಪ್ರೈಸ್ ನೀಡಲು ತೆರಳುವ ವೇಳೆ ಈ ಅವಘಡಕ್ಕೆ ತುತ್ತಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 58ರಲ್ಲಿ ಈ ಅಪಘಾತ ಸಂಭವಿಸಿದ್ದು, ಮೂಲಗಳ ಪ್ರಕಾರ ಈ ಘಟನೆಯಲ್ಲಿ ಪಂತ್ ಅವರ ಕಾಲು ಮುರಿತಕ್ಕೊಳಗಾಗಿದೆ ಎಂದು ವರದಿಯಾಗಿದೆ. ಅಪಘಾತದ ನಂತರ ಪಂತ್ ಅವರನ್ನು ತಕ್ಷಣ ಆಂಬುಲೆನ್ಸ್ನಲ್ಲಿ ರೂರ್ಕಿ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಪಂತ್ ತನ್ನ ತಾಯಿ ಮತ್ತು ತನ್ನ ಕುಟುಂಬದೊಂದಿಗೆ ಹೊಸ ವರ್ಷವನ್ನು ಆಚರಿಸಲು ಬಯಸಿದ್ದರು. ಹೀಗಾಗಿ ಇದಕ್ಕಿದ್ದಂತೆ ಮನೆ ಕಡೆ ಹೊರಡಲು ಪ್ಲಾನ್ ಮಾಡಿದ ಪಂತ್, ದಿಡೀರ್ ಎಂಟ್ರಿಕೊಡುವುದರೊಂದಿಗೆ ತನ್ನ ತಾಯಿಗೆ ಸರ್ಪ್ರೈಸ್ ನೀಡಲು ಮುಂದಾಗಿದ್ದರು ಎಂದು ತಿಳಿದುಬಂದಿದೆ.

ಕಷ್ಟಕಾಲದಲ್ಲಿ ಜೊತೆಯಾಗಿ ನಿಂತು ಸದಾ ಧೈರ್ಯ ತುಂಬುತ್ತಿದ್ದ ಅಮ್ಮನ ಮುಖದಲ್ಲಿ ಆ ಸಂತಸ ಕಾಣಬೇಕು ಎಂದು ನಿರ್ಧರಿಸಿದ ಪಂತ್, ಈಗ ಅವರ ಕಣ್ಣಲ್ಲಿ ನೀರು ಜಿನುಗುವಂತೆ ಮಾಡಿದ್ದಾರೆ.

ಪಂತ್ ಇಂದು ಭಾರತೀಯ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರು ಮಾಡಲು ಅವರ ತಾಯಿಯ ತ್ಯಾಗ ಸಾಕಷ್ಟಿದೆ. ಕ್ರಿಕೆಟ್ಗಾಗಿ ಗುರುದ್ವಾರದಲ್ಲಿ ನೆಲೆಸಿದ್ದ ಪಂತ್ ಅವರ ಜೊತೆ ಅವರ ತಾಯಿಯೂ ನೆಲೆಸಿದ್ದರು. ಮಗನ ಕನಸನ್ನು ನನಸಾಗಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು.

ತಾರಕ್ ಸಿನ್ಹಾ ಅವರಿಂದ ತರಬೇತಿ ಪಡೆಯಲು ವಾರಾಂತ್ಯದಲ್ಲಿ ದೆಹಲಿಗೆ ಬರುತ್ತಿದ್ದ ಪಂತ್ ಜೊತೆಗೆ ಅವರ ತಾಯಿಯೂ ದೆಹಲಿಗೆ ಬರುತ್ತಿದ್ದರು. ಆ ಸಮಯದಲ್ಲಿ ಅವರಿಗೆ ದೆಹಲಿಯಲ್ಲಿ ಉಳಿಯಲು ಸ್ಥಳವಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇಬ್ಬರೂ ಮೋತಿ ಬಾಗ್‌ನ ಗುರುದ್ವಾರದಲ್ಲಿ ತಂಗುತ್ತಿದ್ದರು. 2017 ರಲ್ಲಿ ತಂದೆ ನಿಧನರಾದ ಬಳಿಕ ಪಂತ್ ಅವರ ಸಂಪೂರ್ಣ ಜವಬ್ದಾರಿಯನ್ನು ಅವರ ತಾಯಿಯೇ ಹೊತ್ತುಕೊಂಡಿದ್ದರು.
Published On - 12:42 pm, Fri, 30 December 22




