ದುಬಾರಿ ಕಾರುಗಳ ಒಡೆಯ ರಿಷಬ್​ ಪಂತ್​ಗೆ ಕಡಿಮೆ ಬೆಲೆಯ ಈ ಕಾರೆಂದರೆ ಬಲು ಅಚ್ಚುಮೆಚ್ಚು!

Rishabh Pant accident: ಪಂತ್ ಬಳಿ ಪ್ರಸ್ತುತ ರೂ 60 ಲಕ್ಷ ಮೌಲ್ಯದ ಮರ್ಸಿಡಿಸ್-ಬೆನ್ಜ್ ಸಿ-ಕ್ಲಾಸ್, ರೂ 74 ಲಕ್ಷ ಮೌಲ್ಯದ ಫೋರ್ಡ್ ಮುಶ್ಟಾಂಗ್ ಮತ್ತು ರೂ 1 ಕೋಟಿ ಮೌಲ್ಯದ ಮರ್ಸಿಡಿಸ್-ಬೆನ್ಜ್ ಜಿಎಲ್‌ಇ ಕಾರುಗಳಿವೆ.

TV9 Web
| Updated By: ಪೃಥ್ವಿಶಂಕರ

Updated on:Dec 30, 2022 | 6:18 PM

ಬಹುತೇಕ ಸ್ಟಾರ್ ಕ್ರಿಕೆಟಿಗರು ಐಷಾರಾಮಿ ಕಾರುಗಳನ್ನು ಇಷ್ಟಪಡುತ್ತಾರೆ. ಇದಕ್ಕೆ ಪಂತ್ ಕೂಡ ಭಿನ್ನವಾಗಿಲ್ಲ. ಅವರ ಕಾರು ಸಂಗ್ರಹದಲ್ಲಿ ಹಲವು ಐಷಾರಾಮಿ ಕಾರುಗಳಿವೆ. ಶುಕ್ರವಾರ ಬೆಳಗ್ಗೆ ಅಪಘಾತಕ್ಕೀಡಾಗಿದ್ದ ಪಂತ್, ಆ ಸಮಯದಲ್ಲಿ ತಮ್ಮ ಐಷಾರಾಮಿ ಕಾರುಗಳಲ್ಲಿ ಒಂದಾದ ಮರ್ಸಿಡಿಸ್ ಬೆಂಜ್ ಜಿಎಲ್​ಇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎಂಬುದು ತಿಳಿದುಬಂದಿದೆ.

1 / 5
2016ರ ಐಪಿಎಲ್ ಹರಾಜಿನಲ್ಲಿ 1.9 ಕೋಟಿ ರೂ.ಗೆ ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿತ್ತು. ಆ ಸಮಯದಲ್ಲಿ ಪಂತ್​ಗೆ ಕೇವಲ 19 ವರ್ಷ ವಯಸ್ಸಾಗಿತ್ತು. ಇಷ್ಟು ದೊಡ್ಡ ಮೊತ್ತವನ್ನು ಏನು ಮಾಡುತ್ತೀರಿ ಎಂದು ಸಂದರ್ಶನವೊಂದರಲ್ಲಿ ಕೇಳಿದಾಗ, ಇದಕ್ಕೆ ಉತ್ತರಿಸಿದ್ದ ಪಂತ್ ಐಷಾರಾಮಿ ಕಾರು ಖರೀದಿಸುವುದಾಗಿ ಹೇಳಿದ್ದರು.

2 / 5
ಆದರೆ, ಪಂತ್ ಅವರ ಮೊದಲ ಆಯ್ಕೆ ಐಷಾರಾಮಿ ವಾಹನವಾಗಿರಲಿಲ್ಲ. ಪಂತ್ ಯಾವಾಗಲೂ ಐ20 ಕಾರನ್ನು ಖರೀದಿಸಲು ಬಯಸುತ್ತಿದ್ದರು. ಆದರೆ ಈ ಕಾರನ್ನು ಯಾಕೆ ಇಷ್ಟ ಪಡುತ್ತೇನೋ ಗೊತ್ತಿಲ್ಲ ಎಂದು ಪಂತ್​ ಹೇಳಿಕೊಂಡಿದ್ದರು. ಅಲ್ಲದೆ ನನ್ನ ಬಳಿ 100 ಕೋಟಿ ಹಣವಿದ್ದರೂ ನಾನು ಐ20 ಕಾರನ್ನೇ ಖರೀದಿಸುವುದಾಗಿ ಆಗ ಹೇಳಿದ್ದರು.

3 / 5
ಐ20 ಕಾರನ್ನು ಖರೀದಿಸುವ ಕನಸು ಹೊತ್ತಿದ್ದ ಪಂತ್ ಬಳಿ ಇಂದು ಕೋಟಿಗಟ್ಟಲೆ ಬೆಲೆ ಬಾಳುವ ವಾಹನಗಳ ಒಡೆಯರಾಗಿದ್ದಾರೆ. 2017 ರಲ್ಲಿ ರೂ. 1.9 ಕೋಟಿ ನೀಡಿ ತಮ್ಮ ಮೊದಲ ಕಾರಾದ ಮರ್ಸಿಡಿಸ್-ಬೆನ್ಜ್ ಸಿ-ಕ್ಲಾಸ್ ಅನ್ನು ಖರೀದಿಸಿದ್ದರು. ಇದರ ನಂತರ, ಕ್ರಿಕೆಟ್ ಜಗತ್ತಿನಲ್ಲಿ ಹೇಗೆ ಪಂತ್ ಬೇಡಿಕೆ ಹೆಚ್ಚಾಗುತ್ತಾ ಸಾಗಿತೋ, ಹಾಗೆಯೇ ಅವರ ಐಷಾರಾಮಿ ಕಾರುಗಳ ಸಂಖ್ಯೆಯೂ ಹೆಚ್ಚಾಯಿತು.

4 / 5
ಪಂತ್ ಬಳಿ ಪ್ರಸ್ತುತ ರೂ 60 ಲಕ್ಷ ಮೌಲ್ಯದ ಮರ್ಸಿಡಿಸ್-ಬೆನ್ಜ್ ಸಿ-ಕ್ಲಾಸ್, ರೂ 74 ಲಕ್ಷ ಮೌಲ್ಯದ ಫೋರ್ಡ್ ಮುಶ್ಟಾಂಗ್ ಮತ್ತು ರೂ 1 ಕೋಟಿ ಮೌಲ್ಯದ ಮರ್ಸಿಡಿಸ್-ಬೆನ್ಜ್ ಜಿಎಲ್‌ಇ ಕಾರುಗಳಿವೆ. ಕೆಲವು ವರದಿಗಳ ಪ್ರಕಾರ, ಪಂತ್ 1.9 ಕೋಟಿ ಮೌಲ್ಯದ ಆಡಿ A8 ಅನ್ನು ಸಹ ಹೊಂದಿದ್ದಾರೆ. ಪಂತ್ ಅವರ ವಾಹನಗಳ ಒಟ್ಟು ಬೆಲೆ ಐದು ಕೋಟಿ ರೂಪಾಯಿಗೂ ಹೆಚ್ಚಿದೆ ಎಂದು ವರದಿಯಲ್ಲಿ ತಿಳಿದುಬಂದಿದೆ.

5 / 5

Published On - 6:12 pm, Fri, 30 December 22

Follow us
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ

ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?

ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ