ತುಂಗಾತಟದಲ್ಲಿ ‘ಲೋಕ’ಕಲ್ಯಾಣಾರ್ಥ ಸಂಘ ಪರಿವಾರದಿಂದ ನಾಲ್ಕು ದಿನ ಮಹಾ ಯಾಗ
ನಿನ್ನೆ ಶುಕ್ರವಾರದಿಂದ ನಾಲ್ಕು ದಿನಗಳ ಕಾಲ ಲೋಕಕಲ್ಯಾಣಕ್ಕಾಗಿ ಅತಿರುದ್ರ ಮಹಾಯಾಗ ನಡೆಯುತ್ತಿದೆ. ವಿಶ್ವದೆಲ್ಲಡೆ ಶಾಂತಿ ಮರುಸ್ಥಾಪನೆ. ದೇಶದ ರಕ್ಷಣೆಗಾಗಿ ಸಾವಿರಾರು ನಾಯಕರು, ಅಸಂಖ್ಯಾತ ಕಾರ್ಯಕರ್ತರು ಹಗಲು ಇರಳು ದುಡಿಯುತ್ತಿದ್ದಾರೆ. ಅವರ ಆಯುಷ್ಯ ಮತ್ತು ಆರೋಗ್ಯ ಮತ್ತು ಜೀವ ಸಂರಕ್ಷಣೆಗಾಗಿ ಈ ಮಹಾಯಾಗ ಆರಂಭಗೊಂಡಿದೆ.
1 / 12
ಶಿವಮೊಗ್ಗ ಮತ್ತೂರಿನ ತುಂಗಾ ನದಿ ತಟದಲ್ಲಿ ದೊಡ್ಡ ಮಟ್ಟದಲ್ಲಿ ಯಾಗ ಮತ್ತು ಹೋಮ ನಡೆಯುತ್ತಿದೆ. ನೂರಾರು ವೈದಿಕರು ಸೇರಿಕೊಂಡು ಈ ಯಾಗ ಮತ್ತು ಹೋಮವನ್ನು ನೆರವೇರಿಸುತ್ತಿದ್ದಾರೆ. ಲೋಕ ಕಲ್ಯಾಣಕ್ಕಾಗಿ ಈ ಹೋಮ ಹವನ ನಡೆಯುತ್ತಿದೆ. ಆದ್ರೆ ಸಂಘ ಪರಿವಾರದವರು ಈ ಹೋಮ ಹವನ ನಡೆಸುತ್ತಿರುವುದು ಸದ್ಯ ಸಾಕಷ್ಟು ವಿಶೇಷತೆ ಪಡೆದುಕೊಂಡಿದೆ.. ಲೋಕಸಭೆ ಚುನಾವಣೆ ಮೊದಲು ಸಂಘ ಪರಿವಾರ ಹೋಮ ಹವನ ಕುರಿತು ಒಂದು ವರದಿ ಇಲ್ಲಿದೆ.
2 / 12
ಇನ್ನೇನು ಕೆಲವೇ ತಿಂಗಳಲ್ಲಿ ದೇಶದ ಭವಿಷ್ಯ ನಿರ್ಧರಿಸುವ ಮಹತ್ವದ ಲೋಕಸಭೆ ಚುನಾವಣೆ ನಡೆಯಲಿದೆ. ಮೊನ್ನೆಯಷ್ಟೆ ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಯ ಜೋಶ್ ನಲ್ಲಿ ಸದ್ಯ ಬಿಜೆಪಿ ಮತ್ತು ಸಂಘ ಪರಿಹಾರ ಇದೆ. ಆರ್ ಎಸ್ ಎಸ್ ನ ಪ್ರಮುಖ ಆಗಿರುವ ಪಟ್ಟಾಭಿರಾಮ್ ಅವರ ನೇತೃತ್ವದಲ್ಲಿ ಮತ್ತೂರು ಗ್ರಾಮದಲ್ಲಿ ಹೋಮ ಹವನ ನಡೆಯುತ್ತಿದೆ.
3 / 12
ನಿನ್ನೆ ಶುಕ್ರವಾರದಿಂದ ನಾಲ್ಕು ದಿನಗಳ ಕಾಲ ಲೋಕಕಲ್ಯಾಣಕ್ಕಾಗಿ ಅತಿರುದ್ರ ಮಹಾಯಾಗ ನಡೆಯುತ್ತಿದೆ. ವಿಶ್ವದೆಲ್ಲಡೆ ಶಾಂತಿ ಮರುಸ್ಥಾಪನೆ. ದೇಶದ ರಕ್ಷಣೆಗಾಗಿ ಸಾವಿರಾರು ನಾಯಕರು, ಅಸಂಖ್ಯಾತ ಕಾರ್ಯಕರ್ತರು ಹಗಲು ಇರಳು ದುಡಿಯುತ್ತಿದ್ದಾರೆ. ಅವರ ಆಯುಷ್ಯ ಮತ್ತು ಆರೋಗ್ಯ ಮತ್ತು ಜೀವ ಸಂರಕ್ಷಣೆಗಾಗಿ ಈ ಮಹಾಯಾಗ ಆರಂಭಗೊಂಡಿದೆ.
4 / 12
ನೂರಾರು ಅಗ್ನಿಕುಂಡಗಳು, ನೂರಾರು ವೈದಿಕರು ಸೇರಿ ಯಾಗ ಹೋಮ ಹವನ ನಡೆಸುತ್ತಿದ್ದಾರೆ. ಶುಕ್ರವಾರ ಮೊದಲ ದಿನ ಗಣಪತಿ ಹೋಮ, ಚಂಡಿಕಾ ಹೋಮ ಮತ್ತು ದುರ್ಗಾ ಹೋಮಗಳನ್ನು ವೈದಿಕರು ಪೂರೈಸಿದ್ದಾರೆ. ಇನ್ನೂ ನಾಲ್ಕು ದಿನಗಳ ಕಾಲ ವಿವಿಧ ಹೋಮ ಹವನಗಳು ನಿರಂತರವಾಗಿ ನಡೆಯಲಿವೆ. ಈ ಹೋಮದಲ್ಲಿ ಅನೇಕ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ.
5 / 12
ಮೊದಲ ದಿನ ರಾಜ್ಯ ಬಿಜೆಪಿಯ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಅವರು ಭಾಗವಹಿಸಿದ್ದರು. ಯಾಗದ ಕುರಿತು ರಾಜ್ಯಾಧ್ಯಕ್ಷರು ಸಂತಸ ವ್ಯಕ್ತಪಡಿಸಿದರು. ಇನ್ನು ರಾಜ್ಯ ಮತ್ತು ದೇಶವು ಸುಭಿಕ್ಷೆಯಿಂದ ಇರಬೇಕು. ಬರದಲ್ಲಿ ಜನರು ತತ್ತರಿಸಿದ್ದಾರೆ. ಮತ್ತೆ ಉತ್ತಮ ಮಳೆ ಬೆಳೆಯಾಗಿ ರಾಜ್ಯ ಮತ್ತು ದೇಶವು ಸಮೃದ್ಧಿಯಾಗಿರಬೇಕೆಂದು ಬಿ. ವೈ ವಿಜಯೇಂದ್ರ ಪ್ರಾರ್ಥಿಸಿಕೊಂಡಿದ್ದಾರೆ.
6 / 12
ನಾಲ್ಕು ದಿನಗಳ ಕಾಲ ನಡೆಯುವ ಅತಿರುದ್ರ ಯಾಗಕ್ಕೆ ಕಳೆದ ಒಂದು ವಾರದಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಯಾಗದಲ್ಲಿ ಸ್ಥಳೀಯರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಗಣ್ಯರು ಭಾಗವಹಿಸುತ್ತಿದ್ದಾರೆ.
7 / 12
ಯಾಗದಿಂದ ಉತ್ತಮ ಫಲಗಳು ಸಿಗುತ್ತವೆ ಎನ್ನುವ ನಂಬಿಕೆ ಇನ್ನೂ ಅಚಲವಾಗಿದೆ. ಈ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆ ಮೊದಲು ದೊಡ್ಡ ಯಾಗ ಮತ್ತು ಹೋಮ ಹವನ ನಡೆಯುತ್ತಿದೆ. ಮೊದಲು ಭಕ್ತರಿಂದ ಶಿವನಿಗೆ ಅಭಿಷೇಕ ನಡೆಯುತ್ತಿದೆ. ಬಳಿಕ ಭಕ್ತರು ಯಾಗ ಮತ್ತು ಹೋಮದಲ್ಲಿ ಭಾಗವಹಿಸುತ್ತಾರೆ.
8 / 12
ಮೊದಲು ಭಕ್ತರಿಂದ ಶಿವನಿಗೆ ಅಭಿಷೇಕ ನಡೆಯುತ್ತಿದೆ. ಬಳಿಕ ಭಕ್ತರು ಯಾಗ ಮತ್ತು ಹೋಮದಲ್ಲಿ ಭಾಗವಹಿಸುತ್ತಾರೆ.
9 / 12
ಲಕ್ಷಾಂತರ ರೂಪಾಯಿ ಖರ್ಚು ವೆಚ್ಚನಲ್ಲಿ ಇಂತಹ ದೊಡ್ಡ ಯಾಗ ನಡೆಯುತ್ತಿದೆ. ಎರಡು ದೊಡ್ಡ ಅಗ್ನಿಕುಂಡದಲ್ಲಿ ಯಾಗ ನಡೆಯುತ್ತಿದೆ. ಯಾಗದ ಅಗ್ನಿಕುಂಡದ ಮುಂದೆ ನೂರಾರು ವೈದಿಕರಿಂದ ಮಂತ್ರಗಳ ಪಠಣೆ ನಡೆಯುತ್ತಿವೆ.
10 / 12
ನಿತ್ಯ ಶ್ರೀರಾಮತಾರಕ ಹೋಮ,ನವಗ್ರಹ ಹೋಮ ಹಾಗೂ ರುದ್ರ ಹೋಮ, ಪುರುಷಸೂಕ್ತ ಹೋಮ ಸೇರಿದಂತೆ ಇತರೆ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಯಾಗ ಮತ್ತು ಹೋಮ ನಡೆಯುತ್ತಿರುವುದಕ್ಕೆ ಭಕ್ತರು ಕೂಡಾ ಖುಷಿ ಪಟ್ಟಿದ್ದಾರೆ.
11 / 12
ತುಂಗಾ ನದಿ ತಟದಲ್ಲಿ ಹೋಮ ಹವನ ಯಾಗಗಳು ಶುರುವಾಗಿವೆ. ಲೋಕಸಭೆ ಚುನಾವಣೆ ಮೊದಲು ಸಂಘ ಪರಿಹಾರದ ಪ್ರಮುಖರು ಹೋಮ ಹವನದ ಮೊರೆ ಹೋಗಿದ್ದಾರೆ. ದೊಡ್ಡ ದೊಡ್ಡ ಸಂಕಲ್ಪಗಳೊಂದಿಗೆ ಮತ್ತೂರಿನಲ್ಲಿ ಯಾಗ ನಡೆಯುತ್ತಿರುವುದು ಗಮನಾರ್ಹ.
12 / 12
ನಿನ್ನೆ ಶುಕ್ರವಾರದಿಂದ ನಾಲ್ಕು ದಿನಗಳ ಕಾಲ ಲೋಕಕಲ್ಯಾಣಕ್ಕಾಗಿ ಅತಿರುದ್ರ ಮಹಾಯಾಗ ನಡೆಯುತ್ತಿದೆ. ವಿಶ್ವದೆಲ್ಲಡೆ ಶಾಂತಿ ಮರುಸ್ಥಾಪನೆ. ದೇಶದ ರಕ್ಷಣೆಗಾಗಿ ಸಾವಿರಾರು ನಾಯಕರು, ಅಸಂಖ್ಯಾತ ಕಾರ್ಯಕರ್ತರು ಹಗಲು ಇರಳು ದುಡಿಯುತ್ತಿದ್ದಾರೆ.