
ಜಗತ್ತು ಡಿಜಿಟಲ್ ಆಗುತ್ತಿದ್ದಂತೆಯೇ ಎಲ್ಲವೂ ಆನ್‌ಲೈನ್ ಮಯವಾಗಿದೆ. ಊಟ, ಶಾಪಿಂಗ್ ಹೀಗೆ ಎಲ್ಲವೂ ಆನ್‌ಲೈನ್‌ನಲ್ಲೇ ಆರ್ಡರ್ ಮಾಡುವ ಕಾಲವಿದು. ಇದು ಇಷ್ಟಕ್ಕೆ ಸೀಮಿತವಾಗದೇ ನಿಶ್ಚಿತಾರ್ಥ, ಮದುವೆಯೂ ಆನ್ಲೈನ್‌ಗೆ ಕಾಲಿಟ್ಟಿದೆ. ಮಾಗಡಿ (Magadi) ಮೂಲದ ಯುವಕ ಹಾಗೂ ಉಡುಪಿ ಮೂಲದ ಯುವತಿ ಆನ್ಲೈನ್‌ನಲ್ಲಿ ಎಂಗೇಜ್‌ಮೆಂಟ್ (Online Engagement) ಮಾಡಿಕೊಂಡಿರೋದು ಇದಕ್ಕೆ ಸಾಕ್ಷಿಯಾಗಿದೆ.

ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿನ ಚಕ್ರಬಾವಿ ಗ್ರಾಮದ ನಿವಾಸಿ ಸುಹಾಸ್ ಹಾಗೂ ಉಡುಪಿ ಮೂಲದ ಮೇಘನ ಆನ್‌ಲೈನ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಉಡುಪಿಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಈ ನಿಶ್ಚಿತಾರ್ಥ ನಡೆದಿದ್ದು, ವರನ ಅನುಪಸ್ಥಿತಿಯಲ್ಲಿ ಎರಡೂ ಕುಟುಂಬಗಳು ಈ ಕಾರ್ಯಕ್ರಮ ನೆರವೇರಿಸಿವೆ.

ಅಂದಹಾಗೆ ಬ್ಯಾಹ್ಮಣ ಸಂಪ್ರದಾಯದಂತೆ ನಿಶ್ಚಿತಾರ್ಥ ನೆರವೇರಿದೆ. ಆನ್ ಲೈನ್ ವಿಡಿಯೋ ಮೂಲಕವೇ ಯುವಕ-ಯುವತಿ ಇಬ್ಬರು ಉಂಗುರವನ್ನ ಕ್ಯಾಮೆರಾಗಳಿಗೆ ತೋರಿಸಿ ಎಂಗೇಜ್ಮೇಟ್ ಮಾಡಿಕೊಂಡಿದ್ದಾರೆ.

ಕ್ಯಾಮರಾಗೆ ಆರತಿ ಬೆಳಗಿ ಮಂತ್ರಾಕ್ಷತೆ ಹಾಕಿ ನೆರೆದಿದ್ದವರು ಶುಭ ಹಾರೈಸಿದ್ರು. ಇನ್ನು ಕೆನಡಾದ ಕಾಲಮಾನ 12 ಗಂಟೆ ವ್ಯತ್ಯಾಸವಿದ್ದು ಉಡುಪಿಯಲ್ಲಿ ಹಗಲು ಹಾಗೂ ಕೆನಡಾದಲ್ಲಿ ಮಧ್ಯರಾತ್ರಿ ವೇಳೆ ನಿಶ್ಚಿತಾರ್ಥ ನೆರವೇರಿದೆ.

ಇಬ್ಬರ ವಿವಾಹ ಜನವರಿ 7 ಮತ್ತು 8 ರಂದು ಫಿಕ್ಸ್ ಆಗಿದೆ. ಹೀಗಾಗಿ ಇಬ್ಬರು ಮೊದಲಿಗೆ ನಿಶ್ಚಿತಾರ್ಥ ಮಾಡಿಕೊಳ್ಳಲು ಮುಂದಾಗಿದ್ರು. ಆದರೆ ನಿಶ್ಚಿತಾರ್ಥಕ್ಕೆ ರಜೆ ಸಿಗದ ಹಿನ್ನೆಲೆಯಲ್ಲಿ ಇಬ್ಬರು ಸಹಾ ಆನ್ ಲೈನ್ ವಿಡಿಯೋ ಮೂಲಕವೇ ಉಡುಪಿಯ ಸರಸ್ವತಿ ಸಭಾಭವನದಲ್ಲಿ ನೆರವೇರಿದೆ.

ಅಂದಹಾಗೆ ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿನ ಚಕ್ರಭಾವಿ ಗ್ರಾಮದ ಶ್ರೀಧರ್ ಮೂರ್ತಿ ಹಾಗೂ ಗೌರಿ ಅವರ ಜೇಷ್ಠ ಪುತ್ರ ಸುಹಾಸ್, ಬೆಂಗಳೂರಿನಲ್ಲಿ ವ್ಯಾಸಂಗ ಮುಗಿಸಿ ಕಳೆದ ಕೆಲ ತಿಂಗಳಿಂದ ಕೆನಡಾದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಅಪ್ಲಿಕೇಶನ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಇನ್ನು ಉಡುಪಿ ನಿವಾಸಿ ರವೀಂದ್ರ ರಾವ್ ಹಾಗಯು ಕಾತ್ಯಾಯಿನಿ ದಂಪತಿಗಳ ಜೇಷ್ಠ ಪುತ್ರು ಮೇಘಾ, ಮುಂಬೈನಾ ಬ್ಯಾಂಕ್ ವೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಇನ್ನು ಇಬ್ಬರು ಆನ್‌ಲೈನ್ ನಿಶ್ವಿತಾರ್ಥಕ್ಕೆ ಸಂಬಂಧಿಗಳು ಶುಭ ಹಾರೈಸಿದರು.