ಹುಡುಗರು ಮೊದಲ ಬಾರಿಗೆ ಹುಡುಗಿಯನ್ನು ಭೇಟಿಯಾದಾಗ ಈ ವಿಷಯಗಳನ್ನು ಗಮನಿಸುತ್ತಾರಂತೆ

Updated on: May 15, 2025 | 8:27 PM

ಯುವಕ ಯುವತಿಯರು ಡೇಟಿಂಗ್‌ ಹೋಗೋದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ತಾವು ಇಷ್ಟಪಟ್ಟ ಜೀವದೊಂದಿಗೆ ಒಂದೊಳ್ಳೆ ಕ್ಷಣವನ್ನು ಕಳೆಯಲು ಎಲ್ಲರು ಡೇಟಿಂಗ್‌ ಹೋಗ್ತಾರೆ. ಅದರಲ್ಲೂ ಮೊದಲ ಭೇಟಿ ಎಲ್ಲರ ಜೀವನದಲ್ಲೂ ತುಂಬಾನೇ ಸ್ಪೆಷಲ್‌ ಆಗಿರುತ್ತೆ. ಹೀಗೆ ಹುಡುಗನೊಬ್ಬ ಒಂದು ಹುಡುಗಿಯ ಜೊತೆ ಫಸ್ಟ್‌ ಟೈಂ ಡೇಟಿಂಗ್‌ಗೆ ಹೋದಾಗ, ಆತ ಮೊದಲ ಭೇಟಿಯಲ್ಲಿ ತನ್ನ ಹುಡುಗಿಯಲ್ಲಿ ಯಾವ ವಿಷಯವನ್ನು ಗಮನಿಸುತ್ತಾನೆ, ನೋಡುತ್ತಾನೆ ಗೊತ್ತಾ? ಮೊದಲ ಭೇಟಿಯಲ್ಲಿ ಈ ಕೆಲವೊಂದನ್ನು ಹುಡುಗರು ಸೂಕ್ಷ್ಮವಾಗಿ ನೋಡುತ್ತಾರಂತೆ. ಅದು ಏನೆಂಬುದನ್ನು ನೋಡೋಣ ಬನ್ನಿ.

1 / 6
ಡೇಟಿಂಗ್‌ ಹೋದಾಗ, ಹುಡುಗರು ಮೊದಲ ಭೇಟಿಯಲ್ಲಿ ತಮ್ಮ ಹುಡುಗಿಯಲ್ಲಿ ಈ ಕೆಲವೊಂದನ್ನು ಸೂಕ್ಷ್ಮವಾಗಿ ನೋಡುತ್ತಾರಂತೆ. ಅದರಲ್ಲಿ ಮೊದಲನೆಯದು ನಗು. ನಗು ಸ್ನೇಹಪರತೆಯ ಸಂಕೇತವಾಗಿದೆ. ಹಾಗಾಗಿ ಪುರುಷರು ಮಹಿಳೆಯ ನಗುವನ್ನು ಮೊದಲು ಗಮನಿಸುತ್ತಾರೆ. ನಿಷ್ಕಲ್ಮಶ ನಗು ಇಬ್ಬರ ಮಧ್ಯೆ ಉತ್ತಮ ಸಂಪರ್ಕವನ್ನು ಬೆಸೆಯುತ್ತದೆ.

2 / 6
ಕಣ್ಣುಗಳು: ಹುಡುಗರು ತಾವು  ಯಾವುದೇ ಹುಡುಗಿಯನ್ನು ಭೇಟಿಯಾದಾಗ,  ಮೊದಲು ಅವರ ಕಣ್ಣುಗಳನ್ನು ನೋಡುತ್ತಾರೆ. ಏಕೆಂದರೆ ಹುಡುಗರಿಗೆ, ಹುಡುಗಿಯರ ಕಣ್ಣುಗಳು ಹೆಚ್ಚಾಗಿ ಇಷ್ಟವಾಗುತ್ತದೆ. ಜೊತೆಗೆ ಇವರು  ಹುಡುಗಿಯ ಕಣ್ಣುಗಳನ್ನು ನೋಡುವ ಮೂಲಕವೇ ಅವಳ ಸ್ವಭಾವ ಹೇಗೆಂದು ತಿಳಿಯುತ್ತಾರೆ.

3 / 6
ಧ್ವನಿ: ಹುಡುಗಿಯರ ಧ್ವನಿ ಹುಡುಗರನ್ನು ಹೆಚ್ಚು ಆಕರ್ಷಿಸುತ್ತದಂತೆ. ಹಾಗಾಗಿ ಹೆಚ್ಚಿನ ಹುಡುಗರು ತಮ್ಮ ಮೊದಲ ಭೇಟಿಯಲ್ಲಿ ಹುಡುಗಿಯ ಧ್ವನಿ ಹೇಗಿದೆಯೆಂದು ಗಮನಿಸುತ್ತಾರೆ.  ನ್ಯೂಜಿಲೆಂಡ್‌ನಲ್ಲಿ ನಡೆಸಿದ ಸಮೀಕ್ಷೆಯೊಂದರಲ್ಲಿ, ಹುಡುಗರು ಮೊದಲು ಹುಡುಗಿಯರ ಧ್ವನಿಯನ್ನು ಕೇಳಿದ ನಂತರ ಅವರತ್ತ ಹೆಚ್ಚು ಆಕರ್ಷಿತರಾಗುತ್ತಾರೆ ಎಂಬುದು ತಿಳಿದು ಬಂದಿದೆ.

4 / 6
ಡ್ರೆಸ್ಸಿಂಗ್‌ ಸೆನ್ಸ್: ಹುಡುಗರು ಹುಡುಗಿಯರ ಫ್ಯಾಷನ್ ಸೆನ್ಸ್, ಡ್ರೆಸ್‌ ಸೆನ್ಸ್‌ ಹೇಗಿದೆ ಎಂಬುದನ್ನು ಸಹ ನೋಡುತ್ತಾರೆ. ಹುಡುಗರಿಗೆ  ಹುಡುಗಿಯರ ಫ್ಯಾಷನ್ ಬಗ್ಗೆ ಅಷ್ಟಾಗಿ ತಿಳಿದಿಲ್ಲದಿದ್ದರೂ ಸಹ ಆಕೆಗೆ ಈ ಬಟ್ಟೆ ಮ್ಯಾಚ್‌ ಆಗುತ್ತಾ, ಆಕೆ ನೈಲ್‌ ಪಾಲಿಶ್‌ ಹಾಕಿದ್ದಾಳಾ, ಆಕೆಯ ಚಪ್ಪಲಿ ಹೇಗಿದೆ ಇವೆಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ.

5 / 6
ಮೇಕಪ್:‌ ಮೇಕಪ್‌ ಹಚ್ಚಿಕೊಂಡರೆ ಚೆನ್ನಾಗಿ ಕಾಣುತ್ತೇವೆ ಎಂದು ಹುಡುಗಿಯರು ಡೇಟಿಂಗ್‌ ಹೋಗುವಾಗ ಹೆಚ್ಚು ಮೇಕಪ್‌ ಮಾಡಿ ಹೋಗುತ್ತಾರೆ. ಆದರೆ ಹುಡುಗರು ಇದನ್ನು ಇಷ್ಟಪಡುವುದಿಲ್ಲ. ಅವರು ಸಹಜ ಸುಂದರಿಯನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಹಾಗಾಗಿ ಹುಡುಗಿ ಮೇಕಪ್‌ ಹಾಕಿದ್ದಾಳೋ ಇಲ್ಲವೋ ಎಂಬ ವಿಚಾರವನ್ನು ಹುಡುಗರು ಸೂಕ್ಷ್ಮವಾಗಿ ಗಮನಿಸುತ್ತಾರೆ.

6 / 6
ನಡವಳಿಕೆ: ಪುರುಷರು ತಾವು ಯಾವುದೇ ಹುಡುಗಿಯನ್ನು ಮೊದಲು ಭೇಟಿಯಾದಾಗ ಆಕೆಯ ನಡವಳಿಕೆ ಹೇಗಿದೆ ಎಂಬುದನ್ನು ಗಮನಿಸುತ್ತಾರೆ. ಆಕೆ ಹೇಗೆ ಮಾತನಾಡುತ್ತಾಳೆ, ಇತರರರೊಂದಿಗೆ ಹೇಗೆ ವರ್ತಿಸುತ್ತಾಳೆ ಎಂಬುದನ್ನು ಸಹ ಗಮನಿಸುತ್ತಾರೆ. ಇದಲ್ಲದೆ ಹುಡುಗಿಯ ಕೂದಲು, ಆಕೆಯ ಆತ್ಮವಿಶ್ವಾಸ, ದೇಹ ಭಾಷೆ ಇವೆಲ್ಲವನ್ನು ಗಮನಿಸುತ್ತಾರೆ.