Updated on: Jun 29, 2023 | 6:55 AM
ಬಕ್ರೀದ್ ಅಥವಾ ಈದ್ ಉಲ್ ಅಧಾ 'ತ್ಯಾಗದ ಹಬ್ಬ'. ಇದು ಇಸ್ಲಾಮಿಕ್ ಸಮುದಾಯವು ಆಚರಿಸುವ ಎರಡನೇ ಪ್ರಮುಖ ಹಬ್ಬವಾಗಿದೆ. ಈ ವರ್ಷ, ಭಾರತದಲ್ಲಿ ಈದ್ ಉಲ್ ಅಧಾ ಜೂನ್ 29 ರಂದು ಆಚರಿಸಲಾಗುತ್ತದೆ. ಈ ದಿನವನ್ನು ಪ್ರವಾದಿ ಇಬ್ರಾಹಿಂ ಅವರು ತಮ್ಮ ಮಗನ ತ್ಯಾಗವನ್ನು ಸ್ಮರಿಸುವ ಸಲುವಾಗಿ ಪ್ರತಿವರ್ಷ ಈದ್ ಉಲ್ ಅಧಾವನ್ನು ಆಚರಿಸಲಾಗುತ್ತದೆ. ಪ್ರವಾದಿಯವರು ತಮ್ಮ ಮಗನ ತಲೆಯನ್ನು ಅಲ್ಲಾಹುನಿಗೆ ಅರ್ಪಿಸಿದಾಗ, ಅಲ್ಲಾ ಅವರ ಭಕ್ತಿಗೆ ಮೆಚ್ಚಿ ಅದರ ಪ್ರತಿಫಲವಾಗಿ ಆ ಮಗುವಿನ ತಲೆಯ ಬದಲು ಕುರಿಮರಿಯ ತಲೆಯನ್ನಾಗಿ ಪರಿವರ್ತಿಸಿದರು. ಅದಕ್ಕಾಗಿಯೇ ಬಕ್ರೀದ್ ಹಬ್ಬದಂದು ಮುಸ್ಲಿಂ ಕುಟುಂಬಗಳು ಗಂಡು ಮೇಕೆಯನ್ನು ದೇವರಿಗೆ ಬಲಿ ನೀಡುವ ಮೂಲಕ ಆಚರಣೆ ಮಾಡಲಾಗುತ್ತದೆ.
ಈ ಹಬ್ಬವನ್ನು ಆಚರಿಸುವ ಜನರು ಹೊಸ ಬಟ್ಟೆಗಳನ್ನು ಧರಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಸ್ನೇಹಿತರು ಮತ್ತು ಕುಟುಂಬಗಳೊಂದಿಗೆ ಈ ಸಂತೋಷದ ದಿನದಂದು ಉಡುಗೊರೆಗಳು ಮತ್ತು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ. ಬಕ್ರೀದ್ ಹಬ್ಬಕ್ಕೆ ಸಂಬಂಧಿಸಿದಂತೆ ಶುಭಾಶಯಗಳು, ಕೋಟ್ಸ್ ಮತ್ತು ಚಿತ್ರಗಳು ಇಲ್ಲಿವೆ. ಈ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಬಕ್ರೀದ್ ಶುಭಾಶಯ ತಿಳಿಸಬಹುದು.
ತ್ಯಾಗ ಬಲಿದಾನದ ಜೊತೆಗೆ ವಿಶ್ವ ಭ್ರಾತೃತ್ವವನ್ನು ಸಾರುವ ಪವಿತ್ರ ಹಬ್ಬವು ನಾಡಿನಲ್ಲಿ ಸ್ನೇಹ-ಸೌಹಾರ್ದತೆಯನ್ನು ಬೆಳೆಸಲು ಪ್ರೇರಣೆ ನೀಡಲಿ. ಬಕ್ರೀದ್ ಹಬ್ಬದ ಶುಭಾಶಯಗಳು.
ಪ್ರತಿಯೊಂದು ಹಂತದಲ್ಲೂ ನಿಮಗೆ ಸಹಾಯ ಮಾಡಲು ಅಲ್ಲಾಹನು ಯಾವಾಗಲೂ ನಿಮ್ಮೊಂದಿಗಿದ್ದಾನೆ ಎಂದು ತಿಳಿಯಿರಿ. ಆತ ನಿಮಗೆ ಸರ್ವವನ್ನೂ ಕರುಣಿಸಲಿ. ಬಕ್ರೀದ್ ಹಬ್ಬದ ಶುಭಾಶಯಗಳು.
ಈಗಲೇ ಬದುಕಲು ಪ್ರಾರಂಭಿಸಿ ಮತ್ತು ನಾಳೆಯ ಬಗ್ಗೆ ಚಿಂತೆ ಮಾಡುವುದನ್ನು ನಿಲ್ಲಿಸಿ. ಏಕೆಂದರೆ ಜೀವನವು ತುಂಬಾ ಚಿಕ್ಕದಾಗಿದೆ. ಪ್ರತಿ ದಿನದ ಪ್ರತಿಯೊಂದು ಕ್ಷಣವನ್ನು ಆನಂದಿಸಿ. ಈ ಹಬ್ಬ ನಿಮಗೆ ಶುಭ ತರಲಿ. ಈದ್ ಮುಬಾರಕ್.
ಈದ್ ಮುಬಾರಕ್! ಈ ಕ್ಷಣವನ್ನು ಸದುಪಯೋಗಪಡಿಸಿಕೊಳ್ಳಿ ಮತ್ತು ಸಂತೋಷವಾಗಿರಿ. ಏಕೆಂದರೆ, ಸಂತೋಷದ ಜೀವನವನ್ನು ಮಾಡಲು ಬಹಳ ಕಡಿಮೆ ಸಮಯವಿದೆ. ಯಾವಾಗಲೂ ನಿಮಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ.
ಅಲ್ಲಾಹ್ ಯಾವಾಗಲೂ ನಿಮಗೆ ಮಾರ್ಗದರ್ಶನ ನೀಡಲಿ ಮತ್ತು ಸರಿಯಾದ ಮಾರ್ಗವನ್ನು ತೋರಿಸಲಿ. ಬಕ್ರೀದ್ ಹಬ್ಬದ ಶುಭಾಶಯಗಳು.
ಈ ಈದ್ ನಿಮಗೆ ಅಪರಿಮಿತ ಸಂತೋಷವನ್ನು ತರಲಿ, ಈ ಪವಿತ್ರ ದಿನದಂದು ನಿಮ್ಮ ಎಲ್ಲಾ ಆಸೆಗಳು ಈಡೇರಲಿ ಮತ್ತು ನೀವು ಮತ್ತು ನಿಮ್ಮ ಕುಟುಂಬವು ಅಲ್ಲಾಹನ ಕೃಪೆಯಿಂದ ಆಶೀರ್ವದಿಸಲ್ಪಡಲಿ. ಈದ್ ಮುಬಾರಕ್!
ಅಲ್ಲಾ, ತ್ಯಾಗ ಬಲಿದಾನವನ್ನು ಸ್ವೀಕರಿಸಿ ನಿಮ್ಮೆಲ್ಲಾ ಕೋರಿಕೆಗಳನ್ನು ಈಡೇರಿಸಲಿ. ಬದುಕಿನ ಆಸೆಗಳನ್ನು ಪೂರೈಸುವಂತಾಗಲಿ. ನೀವು ಮತ್ತು ನಿಮ್ಮ ಕುಟುಂಬ ಸದಾ ಸಂತೋಷದಿಂದಿರಲಿ. ಈದ್ ಮುಬಾರಕ್!
ಒತ್ತಡದಲ್ಲಿ ಜೀವಿಸುವುದನ್ನು ಬಿಟ್ಟು ವಿರಾಮ ತೆಗೆದುಕೊಳ್ಳಿ ಮತ್ತು ಈದ್ ಆಚರಿಸಿ! ನಮ್ಮೊಂದಿಗೆ ಸೇರಲು ನಿಮಗೆ ಸ್ವಾಗತವಿದೆ. ಜೀವನವು ಅಂತ್ಯವಿಲ್ಲದಷ್ಟು ರುಚಿಕರವಾಗಿದೆ. ಹ್ಯಾಪಿ ಈದ್ ಡೇ!