50 ವರ್ಷಕ್ಕಿಂತ ಮೇಲ್ಪಟ್ಟವರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಇದನ್ನು ತಪ್ಪದೆ ಸೇವನೆ ಮಾಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 24, 2025 | 5:46 PM

ಅಣಬೆಯಲ್ಲಿ ಟಮಿನ್- ಬಿ1, ಬಿ2, ಬಿ9, ಬಿ12, ವಿಟಮಿನ್- ಸಿ ಮತ್ತು ವಿಟಮಿನ್- ಡಿ2 ಅಂಶಗಳು ಅಡಕವಾಗಿದೆ. ಅದಲ್ಲದೆ ಅಣಬೆಗಳಲ್ಲಿ ಕೊಬ್ಬಿನಾಂಶ ಇರುವುದಿಲ್ಲ. ಕಡಿಮೆ- ಸೋಡಿಯಂ, ಕಡಿಮೆ ಕ್ಯಾಲೋರಿ ಮತ್ತು ಕೊಲೆಸ್ಟ್ರಾಲ್- ಮುಕ್ತ, ಹಾಗೆಯೇ ಫೈಬರ್, ವಿಟಮಿನ್‌ಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ. ಹಾಗಾದರೆ ಇದರ ಸೇವನೆಯಿಂದ ಯಾವ ರೀತಿಯ ಪ್ರಯೋಜನಗಳಿವೆ ತಿಳಿದುಕೊಳ್ಳಿ.

1 / 5
ಅಣಬೆಯನ್ನು ಆಹಾರವಾಗಿಯೂ ಔಷಧಿಯಾಗಿಯೂ ಹಿಂದಿನಿಂದಲೂ ಬಳಸಲಾಗುತ್ತಿದೆ. ಏಕೆಂದರೆ ಇದರಲ್ಲಿ ಅನೇಕ ರೀತಿಯ ಜೀವಸತ್ವಗಳು ಸಮೃದ್ಧವಾಗಿದೆ. ಇದರಲ್ಲಿ ವಿಟಮಿನ್- ಬಿ1, ಬಿ2, ಬಿ9, ಬಿ12, ವಿಟಮಿನ್- ಸಿ ಮತ್ತು ವಿಟಮಿನ್- ಡಿ2 ಅಂಶಗಳು ಅಡಕವಾಗಿದೆ. ಅದಲ್ಲದೆ ಅಣಬೆಗಳಲ್ಲಿ(Mushrooms) ಕೊಬ್ಬಿನಾಂಶ ಇರುವುದಿಲ್ಲ. ಕಡಿಮೆ- ಸೋಡಿಯಂ, ಕಡಿಮೆ ಕ್ಯಾಲೋರಿ ಮತ್ತು ಕೊಲೆಸ್ಟ್ರಾಲ್- ಮುಕ್ತ, ಹಾಗೆಯೇ ಫೈಬರ್, ವಿಟಮಿನ್‌ಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ. ಹಾಗಾದರೆ ಇದರ ಸೇವನೆಯಿಂದ ಯಾವ ರೀತಿಯ ಪ್ರಯೋಜನಗಳಿವೆ ತಿಳಿದುಕೊಳ್ಳಿ.

2 / 5
ಅಣಬೆಗಳಲ್ಲಿ ಸಮೃದ್ಧ ಪೊಟ್ಯಾಸಿಯಮ್ ಜೊತೆಗೆ ಕಡಿಮೆ ಸೋಡಿಯಂ ಇರುವುದರಿಂದ ಉಪ್ಪಿನ ಸಮತೋಲನವನ್ನು ಕಾಪಾಡುತ್ತದೆ. ಇದರಿಂದ ದೇಹದಲ್ಲಿ ರಕ್ತ ಪರಿಚಲನೆಯನ್ನು ಉತ್ತಮವಾಗಿಸುತ್ತದೆ. ಆದ್ದರಿಂದ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಜನರಿಗೆ ಅಣಬೆಗಳನ್ನು ಸೂಕ್ತವೆಂದು ಪರಿಗಣಿಸಲಾಗುತ್ತದೆ.

3 / 5
50 ವರ್ಷಕ್ಕಿಂತ ಮೇಲ್ಪಟ್ಟವರು, ತಮ್ಮ ಆಹಾರದಲ್ಲಿ ಸಾಧ್ಯವಾದಷ್ಟು ಅಣಬೆ ಸೇರಿಸಿದ ಆಹಾರಗಳನ್ನು ಸೇವನೆ ಮಾಡುವುದು ಒಳ್ಳೆಯದು.  ಇದು ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೊತೆಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ ದೇಹದಲ್ಲಿನ ಅನಗತ್ಯ ಕೊಬ್ಬನ್ನು ಕಡಿಮೆ ಮಾಡಲು ಅಣಬೆಗಳನ್ನು ನಿಯಮಿತವಾಗಿ ಸೇವಿಸುವುದು ಪ್ರಯೋಜನಕಾರಿಯಾಗಿದೆ.

4 / 5
ವಿಟಮಿನ್ ಡಿ ಕೊರತೆಯು ಆಸ್ಟಿಯೊಪೊರೋಸಿಸ್ ಗೆ ಕಾರಣವಾಗಬಹುದು. ಇವುಗಳನ್ನು ಪರಿಹರಿಸಲು ಅಣಬೆಗಳು ಒಳ್ಳೆಯದು. ಜೊತೆಗೆ ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಜ್ವರ ಮತ್ತು ಶೀತದಿಂದ ರಕ್ಷಿಸುತ್ತವೆ. ಅಲ್ಲದೆ ಅಣಬೆ ಫೈಬರ್ ಸಮೃದ್ಧವಾಗಿರುವುದರಿಂದ, ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಚಯಾಪಚಯ ಕ್ರಿಯೆಗಳನ್ನು ನಿಯಂತ್ರಿಸಲು ಸಹಕಾರಿಯಾಗಿದೆ.

5 / 5
ಅಣಬೆಗಳು ಚರ್ಮ ಸುಕ್ಕುಗಟ್ಟುವುದು, ವಯಸ್ಸಾಗುವುದನ್ನು ತಡೆಯುವ ಗುಣಗಳನ್ನು ಹೊಂದಿವೆ. ಇದರಲ್ಲಿರುವ ಪಾಲಿಸ್ಯಾಕರೈಡ್ ಸೂಪರ್ಆಕ್ಸೈಡ್ನ ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ಚರ್ಮವನ್ನು ರಕ್ಷಿಸುತ್ತದೆ. ಮತ್ತು ವಯಸ್ಸಾದ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.