ಇನ್ಷೂರೆನ್ಸ್ ಪಾಲಿಸಿ ಮೇಲೆ ಎಷ್ಟಿದೆ ಜಿಎಸ್​ಟಿ? ಹೆಲ್ತ್ ಇನ್ಷೂರೆನ್ಸ್, ಟರ್ಮ್ ಇನ್ಷೂರೆನ್ಸ್, ಯುಲಿಪ್​ಗಳಿಗೆಷ್ಟು ತೆರಿಗೆ? ಇಲ್ಲಿದೆ ವಿವರ

|

Updated on: Aug 12, 2024 | 1:23 PM

GST on insurance policies: ಹೆಲ್ತ್ ಇನ್ಷೂರೆನ್ಸ್ ಮತ್ತು ಟರ್ಮ್ ಇನ್ಷೂರೆನ್ಸ್ ಪಾಲಿಸಿಗಳ ಮೇಲೆ ವಿಧಿಸಲಾಗುತ್ತಿರುವ ಹೆಚ್ಚಿನ ತೆರಿಗೆಯನ್ನು ಹಿಂಪಡೆಯುವಂತೆ ಸಲಹೆಗಳು ಕೇಳಿಬರುತ್ತಿವೆ. ಇಲ್ಲಿ ಹೆಲ್ತ್ ಇನ್ಷೂರೆನ್ಸ್, ಟರ್ಮ್ ಇನ್ಷೂರೆನ್ಸ್, ಸಾಂಪ್ರದಾಯಿಕ ಜೀವ ವಿಮೆ ಮತ್ತು ಯೂನಿಟ್ ಲಿಂಕ್ಡ್ ಇನ್ಷೂರೆನ್ಸ್ ಪಾಲಿಸಿಗಳ ಮೇಲೆ ಯಾವ್ಯಾವ ರೀತಿಯಲ್ಲಿ ಜಿಎಸ್​ಟಿ ಹಾಕಲಾಗುತ್ತಿದೆ ಎನ್ನುವ ವಿವರ ಈ ಫೋಟೋ ಸ್ಟೋರಿಯಲ್ಲಿದೆ.

1 / 6
ಭಾರತದ ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಜಿಎಸ್​ಟಿ ಪದ್ಧತಿ ತರಲಾಗಿದೆ. ಹಿಂದೆ ಇದ್ದ ವಿವಿಧ ರೀತಿಯ ತೆರಿಗೆಗಳ ಬದಲು ಏಕೀಕೃತವಾದ ಜಿಎಸ್​ಟಿಯನ್ನು ಅಳವಡಿಸಲಾಗಿದೆ. ತೀರಾ ಅಗತ್ಯ ವಸ್ತು ಮತ್ತು ಸೇವೆಗಳಿಗೆ ಕಡಿಮೆ ತೆರಿಗೆ ಇದೆ. ತೀರಾ ಐಷಾರಾಮಿ ಮತ್ತು ಅನವಶ್ಯಕ ವಸ್ತುಗಳಿಗೆ ಹೆಚ್ಚಿನ ಜಿಎಸ್​ಟಿ ವಿಧಿಸುವ ವಿಧಾನವನ್ನು ಸರ್ಕಾರ ಅನುಸರಿಸುತ್ತಿದೆ.

2 / 6
ಜೀವ ವಿಮೆ ಅಥವಾ ಲೈಫ್ ಇನ್ಷೂರೆನ್ಸ್ ಮತ್ತು ಹೆಲ್ತ್ ಇನ್ಷೂರೆನ್ಸ್ ಪ್ರೀಮಿಯಮ್​ಗಳ ಮೇಲೆ ವಿಧಿಸಲಾಗುವ ಜಿಎಸ್​ಟಿಯನ್ನು ಹಿಂಪಡೆಯಬೇಕು ಎನ್ನುವ ಬಗ್ಗೆ ಸಲಹೆಗಳು ಕೇಳಿಬರುತ್ತಿವೆ. ಕೇಂದ್ರ ಸಚಿವರೇ ಆದ ನಿತಿನ್ ಗಡ್ಕರಿ ಅವರೇ ಸ್ವತಃ ಈ ಸಲಹೆ ನೀಡಿದ್ದಾರೆ. ಜೀವನದ ಅನಿಶ್ಚಿತತೆಯ ಮೇಲೆ ಹೆಚ್ಚು ತೆರಿಗೆ ವಿಧಿಸುವುದು ಸರಿಯಲ್ಲ. ಹಾಗೆಯೇ ಇನ್ಷೂರೆನ್ಸ್ ವಲಯಕ್ಕೂ ಇದು ಮಾರಕ ಎನ್ನುವುದು ಅವರ ಅಭಿಪ್ರಾಯ.

3 / 6
ಬೇರೆ ಬೇರೆ ಇನ್ಷೂರೆನ್ಸ್ ಪ್ರಾಕಾರಗಳಿಗೆ ವಿಭಿನ್ನ ಜಿಎಸ್​ಟಿ ದರ ಇದೆ. ಹೆಲ್ತ್ ಇನ್ಷೂರೆನ್ಸ್​ನಲ್ಲಿ ಪ್ರೀಮಿಯಮ್ ಮೇಲೆ ಶೇ. 18ರಷ್ಟು ಜಿಎಸ್​ಟಿ ದರ ಹಾಕಲಾಗುತ್ತಿದೆ. ಇತರ ವಿಮೆಗಳ ಮೇಲೆ ಎಷ್ಟು ತೆರಿಗೆ ಇದೆ ಎನ್ನುವ ವಿವರ ಮುಂದಿದೆ.

4 / 6
ಟರ್ಮ್ ಇನ್ಷೂರೆನ್ಸ್ ಅಥವಾ ಅವಧಿ ವಿಮಾ ಪಾಲಿಸಿಗೂ ಕೂಡ ಶೇ. 18ರಷ್ಟು ಜಿಎಸ್​ಟಿ ತೆರಿಗೆ ಇದೆ. ಈ ಟರ್ಮ್ ಪ್ಲಾನ್​ಗಳು ರಿಸ್ಕ್ ಕವರೇಜ್ ಮಾತ್ರ ಹೊಂದಿರುತ್ತವೆ. ನಿರ್ದಿಷ್ಟ ಅವಧಿಯವರೆಗೆ ಮಾತ್ರವೇ ಸೀಮಿತವಾಗಿರುವ ಇವುಗಳ ಪ್ರೀಮಿಯಮ್ ಹಣ ಬಹಳ ಕಡಿಮೆ ಇರುತ್ತದೆ. ಈ ಟರ್ಮ್ ಇನ್ಷೂರೆನ್ಸ್ ಮತ್ತು ಹೆಲ್ತ್ ಇನ್ಷೂರೆನ್ಸ್ ಮೇಲೆ ಶೇ. 18ರಷ್ಟು ಜಿಎಸ್​ಟಿ ಇರುವುದು ಈಗ ಅಸಮಾಧಾನಕ್ಕೆ ಕಾರಣವಾಗಿದೆ.

5 / 6
ಇನ್ನು, ಮಾಮೂಲಿಯ ಜೀವ ವಿಮಾ ಯೋಜನೆಗಳಿಗೆ ಬೇರೆ ರೀತಿಯ ಜಿಎಸ್​ಟಿ ಅನ್ವಯ ಆಗುತ್ತದೆ. ಈ ಲೈಫ್ ಇನ್ಷೂರೆನ್ಸ್ ಪಾಲಿಸಿ ಮಾಡಿಸಿದ ವರ್ಷ ಪ್ರೀಮಿಯಮ್ ಹಣಕ್ಕೆ ಶೇ. 4.5ರಷ್ಟು ಜಿಎಸ್​ಟಿ ಇರುತ್ತದೆ. ನಂತರದ ವರ್ಷಗಳಲ್ಲಿ ಶೇ. 2.25 ತೆರಿಗೆ ಮಾತ್ರವೇ ಇರುತ್ತದೆ.

6 / 6
ಯುಲಿಪ್ ಅಥವಾ ಮಾರುಕಟ್ಟೆ ಜೋಡಿತ ಇನ್ಷೂರೆನ್ಸ್ ಪ್ಲಾನ್​ಗಳಲ್ಲಿ ಪಾಲಿಸಿದಾರ ತನ್ನ ಲೈಫ್ ರಿಸ್ಕ್ ಕವರೇಜ್​ಗೆ ಪಾವತಿಸುವ ಹಣ ಮತ್ತಿತರ ಶುಲ್ಕಕ್ಕೆ ತೆರಿಗೆ ಇರುತ್ತದೆ. ಇದರಲ್ಲಿ ಪಾವತಿಸಲಾಗುವ ಪ್ರೀಮಿಯಮ್ ಹಣದಲ್ಲಿ ಶೇ. 18ರಷ್ಟು ಜಿಎಸ್​ಟಿ ಮುರಿದುಕೊಂಡು, ಉಳಿದ ಹಣವನ್ನು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗುತ್ತದೆ.