ಚಿಕ್ಕಬಳ್ಳಾಪುರ ಉತ್ಸವದಲ್ಲಿ ಭೂಮಿಗಿಳಿದ ಬಣ್ಣ ಬಣ್ಣದ ಚಿತ್ತಾರ, ಇಲ್ಲಿದೆ ನೋಡಿ ಅದರ ಝಲಕ್
TV9 Web | Updated By: ಕಿರಣ್ ಹನುಮಂತ್ ಮಾದಾರ್
Updated on:
Jan 15, 2023 | 11:00 AM
ಚಿಕ್ಕಬಳ್ಳಾಪುರ ಉತ್ಸವದಲ್ಲಿ ಎಲ್ಲಿ ನೋಡಿದರಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿತ್ತು. ಎಲ್ಲಿ ನೋಡಿದರೂ ಹೆಂಗಳೆಯರು ಬಣ್ಣವವನ್ನ ಹಿಡಿದು ರಂಗೋಲಿ ಮುಖಾಂತರ ಒಂದು ಲೋಕವನ್ನೆ ಸೃಷ್ಟಿಸಿದ್ದರು.
1 / 6
ಚಿಕ್ಕಬಳ್ಳಾಪುರ ಉತ್ಸವದ ಪ್ರಯುಕ್ತ ನಿನ್ನೆ(ಜ.14) ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಗರ ಪಟ್ಟಣ ಹಾಗೂ ಗ್ರಾಮ ಗ್ರಾಮಗಳಲ್ಲಿ ರಂಗೋಲಿ ಸ್ಪರ್ಧೆಯನ್ನ ಆಯೋಜನೆ ಮಾಡಲಾಗಿತ್ತು. ಸ್ಪರ್ಧೆಯಲ್ಲಿ ಮಹಿಳೆಯರು ಮುಗಿಬಿದ್ದು ಒಂದಕ್ಕಿಂತಾ ಒಂದು ಬಣ್ಣ ಬಣ್ಣದ ರಂಗೋಲಿ ಚಿತ್ತಾರ ಬಿಡಿಸಿ ಸೈ ಎನಿಸಿಕೊಂಡರು.
2 / 6
ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಹಿಳೆಯರಿಗೆ ಸಂಭ್ರಮವೋ ಸಂಭ್ರಮ. ಬಣ್ಣ ಬಣ್ಣದ ರಂಗೋಲಿ ಚಿತ್ತಾರಗಳು, ಮೈದಾನದಲ್ಲಿ ಹರಡಿಕೊಂಡಿತ್ತು. ನೋಡೋರ ಕಣ್ಣಿಗೆ ಬಣ್ಣದ ಹಬ್ಬವಾಗಿದ್ದಂತು ಸುಳ್ಳಲ್ಲ.
3 / 6
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಬಹುಮಾನ ಒಂದೆಡೆಯಾದರೆ. ವಾರ್ಡ್ ಗ್ರಾಮವಾರು ಪ್ರಥಮ ದ್ವೀತಿಯ ತೃತಿಯ ಬಂದವರಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಬಹುಮಾನ ಘೋಷಣೆ ಮಾಡಲಾಗಿತ್ತು ಇದರಿಂದ ಮಹಿಳೆಯರು, ಮಕ್ಕಳು, ಯುವತಿಯರು ರಂಗೋಲಿ ಹಾಕುವುದಕ್ಕೆ ನಾಮುಂದು ತಾಮುಂದು ಎಂದು ಮುಗಿ ಬಿದ್ದಿದ್ದರು.
4 / 6
ಕಲರ್ ಟಿವಿ, ಪ್ರೀಡ್ಜ್, ವಾಸಿಂಗ್ ಮಷೀನ್, ಕುಕ್ಕರ್ ಸೇರಿದಂತೆ ಎಲ್ಲರಿಗೂ ಸಮಧಾನಕರ ಬಹುಮಾನಗಳನ್ನು ನೀಡಲಾಗಿತ್ತು. ಇದರಿಂದ ಎಲ್ಲ ಹೆಂಗಳೆಯರು ಆಸಕ್ತಿಯಿಂದ ರಂಗೋಲಿ ಬೀಡಿಸಿ ಬಹುಮಾನಕ್ಕಾಗಿ ಕಾಯುತ್ತಿದ್ದರು.
5 / 6
ಸಂಕ್ರಾಂತಿ ಸಂಭ್ರಮಕ್ಕೂ ರಂಗೋಲಿ ಚಂದಕ್ಕೂ ಬಿಡಿಸಲಾಗದ ಬಂಧ. ಇಂಥದರಲ್ಲಿ ಚಿಕ್ಕಬಳ್ಳಾಪುರ ಉತ್ಸವ ಪ್ರಯುಕ್ತ ಆಯೋಜನೆ ಮಾಡಿದ್ದ ರಂಗೋಲಿ ಸ್ಪರ್ಧೆಯಲ್ಲಿ ಹೆಣ್ಣುಮಕ್ಕಳು ಭಾಗವಹಿಸುವ ಮೂಲಕ ಉತ್ಸವಕ್ಕೆ ಮೆರೆಗು ತಂದರು.
6 / 6
ಚಿಕ್ಕಬಳ್ಳಾಪುರ ಉತ್ಸವದಲ್ಲಿ ಅನೇಕ ಸಾಂಸ್ಕೃತೀಕ ಕಾರ್ಯಕ್ರಮಗಳನ್ನು ಆಯೋಸಿದ್ದು, ರಂಗೋಲಿ ಸ್ಪರ್ಧೆಯು ಎಲ್ಲದರ ಆಕರ್ಷಣೀಯ ಕೇಂದ್ರವಾಗಿದ್ದಂತು ಸುಳ್ಳಲ್ಲ, ಅನೇಕ ಕಡೆಗಳಿಂದ ಬಂದ ಹೆಣ್ಣುಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿ ಸೈ ಎನಿಸಿಕೊಂಡರು.