Tech Tips: ಸ್ಮಾರ್ಟ್​ಫೋನ್ ಅತ್ಯಂತ ವೇಗವಾಗಿ ಚಾರ್ಜ್ ಆಗಲು ಇಲ್ಲಿದೆ ನೋಡಿ ಕೆಲ ಟಿಪ್ಸ್

|

Updated on: Jul 03, 2023 | 3:04 PM

ನಿಮ್ಮ ಸ್ಮಾರ್ಟ್‌ಫೋನ್ ಸಾಮಾನ್ಯಕ್ಕಿಂತ ವೇಗವಾಗಿ ಚಾರ್ಜ್ ಆಗಬೇಕಾದ ಸಂದರ್ಭದಲ್ಲಿ ನಿಮ್ಮ ಫೋನಿನಲ್ಲಿ ಫ್ಲೈಟ್ ಮೋಡ್ ಆನ್‌ ಮಾಡಿ. ಇದರಿಂದಾಗಿ ನಿಮ್ಮ ಫೋನ್ ಅತೀ ವೇಗವಾಗಿ ಚಾರ್ಜ್ ಆಗಲು ಶುರುವಾಗುತ್ತದೆ.

1 / 7
ಸಾಮಾನ್ಯವಾಗಿ ಸ್ಮಾರ್ಟ್‌ಫೋನ್​ಗಳ ಬ್ಯಾಟರಿ ನಮಗೆ ತೀರಾ ಅವಶ್ಯವಾಗಿರುವಾಗಲೇ ಖಾಲಿಯಾಗುತ್ತದೆ. ಇಂತಹ ಸಂದರ್ಭದಲ್ಲಿ ಮೊಬೈಲ್‌ ಫೋನ್‌ ಅನ್ನು ವೇಗವಾಗಿ ಚಾರ್ಜ್ ಮಾಡಿಕೊಳ್ಳುವ ಅಗತ್ಯ ಇರುತ್ತದೆ. ಹೀಗೆ ತುರ್ತು ಸಂದರ್ಭದಲ್ಲಿ ಮೊಬೈಲ್ ವೇಗವಾಗಿ ಚಾರ್ಜ್ ಆಗಲು ಕೆಲ ಟಿಪ್ಸ್ ಇಲ್ಲಿದೆ.

2 / 7
ನಿಮ್ಮ ಸ್ಮಾರ್ಟ್‌ಫೋನ್ ಸಾಮಾನ್ಯಕ್ಕಿಂತ ವೇಗವಾಗಿ ಚಾರ್ಜ್ ಆಗಬೇಕಾದ ಸಂದರ್ಭದಲ್ಲಿ ನಿಮ್ಮ ಫೋನಿನಲ್ಲಿ ಫ್ಲೈಟ್ ಮೋಡ್ ಆನ್‌ ಮಾಡಿ. ಇದರಿಂದಾಗಿ ನಿಮ್ಮ ಫೋನ್ ಅತೀ ವೇಗವಾಗಿ ಚಾರ್ಜ್ ಆಗಲು ಶುರುವಾಗುತ್ತದೆ.

ನಿಮ್ಮ ಸ್ಮಾರ್ಟ್‌ಫೋನ್ ಸಾಮಾನ್ಯಕ್ಕಿಂತ ವೇಗವಾಗಿ ಚಾರ್ಜ್ ಆಗಬೇಕಾದ ಸಂದರ್ಭದಲ್ಲಿ ನಿಮ್ಮ ಫೋನಿನಲ್ಲಿ ಫ್ಲೈಟ್ ಮೋಡ್ ಆನ್‌ ಮಾಡಿ. ಇದರಿಂದಾಗಿ ನಿಮ್ಮ ಫೋನ್ ಅತೀ ವೇಗವಾಗಿ ಚಾರ್ಜ್ ಆಗಲು ಶುರುವಾಗುತ್ತದೆ.

3 / 7
ತುರ್ತು ಸಂದರ್ಭದಲ್ಲಿ ಹೆಚ್ಚಿನ ವೇಗವಾಗಿ ಮೊಬೈಲ್ ಫೋನ್ ಚಾರ್ಜ್ ಆಗಬೇಕು ಎಂದು ಬಯಸಿದರೆ ನೀವು ಈ ಮಾದರಿಯಲ್ಲಿ ಮೊಬೈಲ್‌ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಆದರೆ ಈ ರೀತಿಯಲ್ಲಿ ಮಾಡುವುದರಿಂದ ನಿಮ್ಮ ಫೋನಿಗೆ ಯಾವುದೇ ಕರೆಗಳು, ಮೇಸೆಜ್‌ಗಳು ಬರುವುದಿಲ್ಲ ಎಂಬುದು ನೆನಪಿರಲಿ.

4 / 7
ಚಾರ್ಜರ್‌ ವಾಲ್‌ ಮತ್ತು ಕಾರ್‌ ಚಾರ್ಜರ್‌ನಂತೆ ಪೊರ್ಟೆಬಲ್‌ ಚಾರ್ಜರ್‌ಗಳು ಕ್ವಿಕ್‌ ಚಾರ್ಜ್‌ ಸಾಮರ್ಥ್ಯ ಹೊಂದಿದ್ದು, ವೈಯರ್‌ ಅಥವಾ ವೈಯರ್‌ಲೆಸ್‌ ಸಾಧನಗಳಿಗೆ ವೇಗದ ಚಾರ್ಜಿಂಗ್‌ ಅವಕಾಶ ನೀಡುತ್ತವೆ.

5 / 7
ಕ್ವಿಕ್ ಚಾರ್ಜ್‌ 3.0 ಮತ್ತು Qi 7.5 ವ್ಯಾಟ್‌ನಷ್ಟು ವೇಗದ ಚಾರ್ಜಿಂಗ್‌ ನೀಡುವ ಸಾಧನಗಳನ್ನು ಈ ಪ್ರಕಾರಗಳಲ್ಲಿ ಕಾಣಬಹುದು. ಗುಣಮಟ್ಟದ ಯುಎಸ್‌ವಿ 3.0 ಚಾರ್ಜರ್‌ಗಳು 1.5 ಆಂಪ್‌ಗಳಷ್ಟು ವಿದ್ಯುತ್ ಪ್ರವಹಿಸಲು ಸಹಾಯ ಮಾಡುತ್ತವೆ. ಯುಎಸ್‌ಬಿ 3.0 ಪೋರ್ಟ್‌ಗೆ ಯುಎಸ್‌ಬಿ 3.0 ಕೇಬಲ್‌ ಬಳಸಿದರೆ ಸ್ಮಾರ್ಟ್‌ಫೋನ್‌ ವೇಗವಾಗಿ ಚಾರ್ಜಿಂಗ್‌ ಆಗುತ್ತದೆ.

6 / 7
ನಿಮ್ಮ ಐಪೋನ್‌ 6 ಮತ್ತು ಇತ್ತೀಚಿನ ಐಫೋನ್‌ಗಳಿಗೆ ಐಪ್ಯಾಡ್‌ ಚಾರ್ಜರ್‌ ಬಳಸಿ. ಈ ಚಾರ್ಜರ್‌ಗಳು 1 ಆ್ಯಂಪ್ ಕ್ಕಿಂತ ಹೆಚ್ಚಿನ ವಿದ್ಯುತ್‌ ಪ್ರವಹಿಸುವುದರಿಂದ ಸ್ಮಾರ್ಟ್‌ಫೋನ್‌ ವೇಗವಾಗಿ ಚಾರ್ಜ್‌ ಆಗುತ್ತದೆ.

7 / 7
ನಿಮ್ಮ ಮೊಬೈಲ್‌ ವೇಗವಾಗಿ ಚಾರ್ಜಿಂಗ್‌ ಆಗಬೇಕೆಂದರೆ ಚಾರ್ಜಿಂಗ್‌ ಸಮಯದಲ್ಲಿ ಸ್ಮಾರ್ಟ್‌ಫೋನ್‌ ಅನ್ನು ಸ್ವಿಚ್‌ ಆಫ್‌ ಮಾಡಿ. ಸ್ವಿಚ್‌ ಆಫ್‌ ಮಾಡುವುದರಿಂದ ಬ್ಯಾಕ್‌ಗ್ರೌಂಡ್‌ನಲ್ಲಿ ಆ್ಯಪ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಈ ಮೂಲಕ ನಿಗದಿಗಿಂತ ಮೊದಲೇ ನಿಮ್ಮ ಮೊಬೈಲ್ ಚಾರ್ಜ್ ಫುಲ್ ಆಗುತ್ತದೆ.