HS Prannoy: ಸೆಮಿಫೈನಲ್‌ನಲ್ಲಿ ಸೋತು ಕಂಚಿಗೆ ಕೊರಳೊಡ್ಡಿದ ಎಚ್‌ಎಸ್ ಪ್ರಣಯ್
BWF World Championships 2023: BWF ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಭಾರತದ ಆಟಗಾರ ಎಚ್‌ಎಸ್ ಪ್ರಣಯ್ ಹಿನ್ನಡೆ ಅನುಭವಿಸಿದ್ದಾರೆ. ಆಗಸ್ಟ್ 26ರ ಶನಿವಾರ ನಡೆದ ಈ ಪಂದ್ಯದಲ್ಲಿ ಥಾಯ್ಲೆಂಡ್ನ ಕುನ್ಲವುಟ್ ವಿಟಿಡ್ಸರ್ನ್ ವಿರುದ್ಧ ಸೋತ ಪ್ರಣಯ್ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.
1 / 6
BWF ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಭಾರತದ ಆಟಗಾರ ಎಚ್‌ಎಸ್ ಪ್ರಣಯ್ ಹಿನ್ನಡೆ ಅನುಭವಿಸಿದ್ದಾರೆ. ಆಗಸ್ಟ್ 26ರ ಶನಿವಾರ ನಡೆದ ಈ ಪಂದ್ಯದಲ್ಲಿ ಥಾಯ್ಲೆಂಡ್ನ ಕುನ್ಲವುಟ್ ವಿಟಿಡ್ಸರ್ನ್ ವಿರುದ್ಧ ಸೋತ ಪ್ರಣಯ್ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.
2 / 6
ಈ ಮೂಲಕ BWF ವಿಶ್ವ ಚಾಂಪಿಯನ್‌ಶಿಪ್ 2023ರಲ್ಲಿ ಚಿನ್ನದ ಪದಕ ಗೆಲ್ಲುವ ಎಚ್‌ಎಸ್ ಪ್ರಣಯ್ ಅವರ ಕನಸು ಭಗ್ನಗೊಂಡಿದೆ. ಸೆಮಿಫೈನಲ್‌ನಲ್ಲಿ ಪ್ರಣಯ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಮೂರು ಬಾರಿಯ ಮಾಜಿ ವಿಶ್ವ ಜೂನಿಯರ್ ಚಾಂಪಿಯನ್ ಕುನ್ಲವುಟ್ ವಿಟಿಡ್ಸರ್ನ್ 18-21, 21-13, 21-14 ರಲ್ಲಿ ಗೆದ್ದು ಫೈನಲ್ ಪ್ರವೇಶಿಸಿದರು.
3 / 6
ಈ ಸೋಲಿನ ನಡುವೆಯೂ ಭಾರತದ ಪರ ದಾಖಲೆ ಬರೆದ ಪ್ರಣಯ್, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ 5ನೇ ಭಾರತೀಯ ಪುರುಷರ ಸಿಂಗಲ್ಸ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
4 / 6
ಈ ಅನುಕ್ರಮದಲ್ಲಿ ಪದಕಗಳ ಬೇಟೆಯಲ್ಲಿ ಭಾರತ ನಿರ್ವಿವಾದ ದಾಖಲೆ ಬರೆದಿದೆ. ಪ್ರಣಯ್ಗಿಂತ ಮೊದಲು, ಪುರುಷರ ಸಿಂಗಲ್ಸ್‌ನಲ್ಲಿ ಕಿಡಂಬಿ ಶ್ರೀಕಾಂತ್ (ಬೆಳ್ಳಿ), ಲಕ್ಷ್ಯ ಸೇನ್ (ಕಂಚಿನ), ಬಿಸಾಯಿ ಪ್ರಣೀತ್ (ಕಂಚಿನ) ಮತ್ತು ಪ್ರಕಾಶ್ ಪಡುಕೋಣೆ (ಕಂಚಿನ) ಪದಕ ಗೆದ್ದಿದ್ದರು.
5 / 6
ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಒಂದು ಚಿನ್ನ (2019) ಸೇರಿದಂತೆ 5 ಸಿಂಗಲ್ಸ್ ಪದಕಗಳನ್ನು ಗೆದ್ದಿದ್ದಾರೆ. ಸೈನಾ ನೆಹ್ವಾಲ್ (ಬೆಳ್ಳಿ, ಕಂಚು) ಎರಡು ಪದಕ ಗೆದ್ದರೆ, ಮಹಿಳೆಯರ ಡಬಲ್ಸ್ ಜೋಡಿ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ 2011ರಲ್ಲಿ ಕಂಚಿನ ಪದಕ ಗೆದ್ದಿದ್ದರು.
6 / 6
ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ 2022ರಲ್ಲಿ ಕಂಚಿನ ಪದಕ ಗೆದ್ದಿತ್ತು.