ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದಲ್ಲಿ ನಿನ್ನೆ 25ನೇ ಲಕ್ಷದೀಪೋತ್ಸವವನ್ನ ಅದ್ಧೂರಿಯಾಗಿ ಆಚರಿಸಲಾಯಿತು. ಪ್ರತಿ ವರ್ಷದಂತೆ ಕಾರ್ತಿಕ ಮಾಸದಲ್ಲಿ ಈ ಲಕ್ಷದೀಪೋತ್ಸವವನ್ನ ಆಚರಣೆ ಮಾಡಲಾಗುತ್ತದೆ. ನಿನ್ನೆ ಮಠದ ಆವರಣದ ತುಂಬ ಬಣ್ಣ ಬಣ್ಣದ ರಂಗೋಲಿಗಳ ಚಿತ್ತಾರಗಳ ಮೇಲೆ ಲಕ್ಷಾಂತರ ದೀಪಗಳನ್ನ ಜೋಡಿಸಿ ಇಡಲಾಗಿತ್ತು.

ನೆರೆದಿದ್ದ ಲಕ್ಷಾಂತರ ಭಕ್ತರು ಮಹಾಂಗಳಾರತಿ ಬಳಿಕ ದೀಪಗಳನ್ನ ಹಚ್ಚಿ ಶ್ರೀ ಸಿದ್ಧಾರೂಢರಿಗೆ ಭಕ್ತಿಭಾವದಿಂದ ಸಮರ್ಪಿಸಿದರು. ಅದರಲ್ಲೂ ಮಹಿಳೆಯರಿಗಂತೂ ಈ ದೀಪದ ಹಬ್ಬ ಅವರ ಸಂತಸ ಹಿಮ್ಮಡಿಗೊಳಿಸಿತ್ತು. ಕುಟುಂಬ ಸಮೇತ ಬಂದ ಮಹಿಳೆಯರು ದೀಪ ಬೆಳಗಿಸಿ ಬದುಕಿನ ಕತ್ತಲೆಯನ್ನ ಹೋಗಲಾಡಿಸುವಂತೆ ಬೇಡಿಕೊಂಡರು.

Hubli Deepotsava at historic Sri Siddharoodha Mutt in Hubballi news in kannada

Hubli Deepotsava at historic Sri Siddharoodha Mutt in Hubballi news in kannada

Hubli Deepotsava at historic Sri Siddharoodha Mutt in Hubballi news in kannada
Published On - 9:02 am, Thu, 24 November 22