ಅಮೆರಿಕದಲ್ಲಿ ಮತ್ತೆ ಟ್ರಂಪ್ ದರ್ಬಾರ್, ಸರ್ಕಾರ ರಚನೆಯಾಗುತ್ತಿದ್ದಂತೆ ಮಾಡಿದ ಘೋಷಣೆಗಳಿವು

|

Updated on: Jan 21, 2025 | 8:06 AM

ಅಮೆರಿಕದಲ್ಲಿ ಎರಡನೇ ಬಾರಿಗೆ ಡೊನಾಲ್ಡ್​ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ದೇಶ, ವಿದೇಶಗಳ ಗಣ್ಯರು ಟ್ರಣಂಪ್​ಗೆ ಅಭಿನಂದನೆ ಸಲ್ಲಿಸಿದ್ದಾರೆ. ಹಾಗೆಯೇ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಹಲವು ಮಹತ್ವದ ಘೋಷಣೆಗಳನ್ನು ಕೂಡ ಟ್ರಂಪ್ ಮಾಡಿದ್ದು, ಅದರ ಬಗ್ಗೆ ಕೆಲವು ಮಾಹಿತಿಗಳನ್ನು ಫೋಟೊ ಸಮೇತ ಹಂಚಿಕೊಳ್ಳಲಾಗಿದೆ.

1 / 9
ಅಮೆರಿಕದಲ್ಲಿ ಇನ್ನುಮುಂದೆ ಎರಡೇ ಲಿಂಗ ಗಂಡು-ಹೆಣ್ಣು: ಯುಎಸ್ ಫೆಡರಲ್ ಸರ್ಕಾರವು ಪುರುಷ ಮತ್ತು ಮಹಿಳೆ ಎಂಬ ಎರಡು ಲಿಂಗಗಳನ್ನು ಮಾತ್ರ ಗುರುತಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕುವುದಾಗಿ ಟ್ರಂಪ್ ಘೋಷಿಸಿದರು. ಇಂದಿನಿಂದ, ಪುರುಷ ಮತ್ತು ಮಹಿಳೆ ಎಂಬ ಎರಡು ಲಿಂಗಗಳು ಮಾತ್ರ ಇರುತ್ತವೆ ಎಂಬುದು ಯುಎಸ್ ಸರ್ಕಾರದ ಅಧಿಕೃತ ನೀತಿಯಾಗಿದೆ ಎಂದು ಟ್ರಂಪ್ ಹೇಳಿದರು.

2 / 9
ಸಿಬಿಪಿ ಒನ್ ಅಪ್ಲಿಕೇಶನ್ ಬಳಕೆ ನಿಲ್ಲಿಸಿದ ಟ್ರಂಪ್: ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಮಂದಿಗೆ ಅಮೆರಿಕಕ್ಕೆ ಕಾನೂನುಬದ್ಧ ಪ್ರವೇಶವನ್ನು ಸುಲಭವಾಗಿ ನೀಡಬಲ್ಲ ಸಿಬಿಪಿ ಒನ್ ಅಪ್ಲಿಕೇಶನ್ ಬಳಕೆಯನ್ನು ನಿಲ್ಲಿಸಿದ್ದು, ಇದರಿಂದಾಗಿ ಮುಂದಿನ ದಿನಗಳಲ್ಲಿ ವಲಸಿಗರು ಸುಲಭವಾಗಿ ಅಮೆರಿಕ ಪ್ರವೇಶಿಸಲು ಸಾಧ್ಯವಾಗುವುದಿಲ್ಲ.

3 / 9
ಎಲೆಕ್ಟ್ರಿಕ್ ವೆಹಿಕಲ್ (ಇವಿ) ಆದೇಶವನ್ನು ಕೊನೆಗೊಳಿಸಲಾಗುತ್ತಿದೆ: ಟ್ರಂಪ್ ತಮ್ಮ ಅಧಿಕಾರದ ಮೊದಲ ದಿನಗಳಲ್ಲಿ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಆದೇಶಗಳನ್ನು ಕೊನೆಗೊಳಿಸುವ ಯೋಜನೆಗಳನ್ನು ಘೋಷಿಸಿದರು, ಅಮೆರಿಕನ್ನರು ತಮಗೆ ಬೇಕಾದ ಕಾರನ್ನು ಖರೀದಿಸಲು ಸ್ವಾತಂತ್ರ್ಯವನ್ನು ಹೊಂದಿರಬೇಕು ಎಂದು ಹೇಳಿದರು.

4 / 9
ರಾಷ್ಟ್ರೀಯ ಇಂಧನ ತುರ್ತು ಪರಿಸ್ಥಿತಿ: ತೈಲ ಮತ್ತು ಅನಿಲ ಉತ್ಪಾದನೆಯಲ್ಲಿ ಯುಎಸ್ ಸ್ವಾವಲಂಬಿಯಾಗಲು ಮತ್ತು ಅಮೆರಿಕನ್ ನಾಗರಿಕರಿಗೆ ಇಂಧನ ವೆಚ್ಚವನ್ನು ಕಡಿಮೆ ಮಾಡಲು "ರಾಷ್ಟ್ರೀಯ ಇಂಧನ ತುರ್ತುಸ್ಥಿತಿ" ಘೋಷಿಸುವ ಯೋಜನೆಯನ್ನು ಟ್ರಂಪ್ ಘೋಷಿಸಿದ್ದಾರೆ.ಹಣದುಬ್ಬರದ ಬಿಕ್ಕಟ್ಟು ಇಂಧನ ಬೆಲೆಗಳನ್ನು ಹೆಚ್ಚಿಸುವುದರಿಂದ ಉಂಟಾಗಿದೆ. ಅದಕ್ಕಾಗಿಯೇ ನಾನು ಇಂದು ರಾಷ್ಟ್ರೀಯ ಇಂಧನ ತುರ್ತು ಪರಿಸ್ಥಿತಿಯನ್ನು ಘೋಷಿಸಲಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.

5 / 9
ಕೋವಿಡ್​ನಿಂದಾಗಿ ಕೆಲಸ ಕಳೆದುಕೊಂಡವರಿಗೆ ಕೆಲಸ ಸೃಷ್ಟಿ: ಕೋವಿಡ್ ಸಂದರ್ಭದಲ್ಲಿ ಕೆಲಸ ಕಳೆದುಕೊಂಡ 8000 ಸಾವಿರ ವಾರಿಯರ್​ಗಳನ್ನು ಮತ್ತೆ ಕೆಲಸಕ್ಕೆ ನೇಮಿಸಿಕೊಳ್ಳಲಾಗುವುದು ಎಂದು ಟ್ರಂಪ್ ಘೋಷಣೆ ಮಾಡಿದ್ದಾರೆ.

6 / 9
ವ್ಯಾಪಾರ ವ್ಯವಸ್ಥೆಯ ಸುಧಾರಣೆ, ಬಾಹ್ಯ ಆದಾಯ ಸೇವೆಯ ಸ್ಥಾಪನೆ: ಟ್ರಂಪ್ ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಇತರ ದೇಶಗಳ ಮೇಲೆ ತೆರಿಗೆ ಮತ್ತು ಸುಂಕಗಳನ್ನು ವಿಧಿಸುವುದಾಗಿ ಘೋಷಿಸಿದರು ಇದರಿಂದ ಅಮೆರಿಕದ ನಾಗರಿಕರು ಪ್ರಯೋಜನ ಪಡೆಯುತ್ತಾರೆ. ಅವರು ವ್ಯಾಪಾರ ವ್ಯವಸ್ಥೆಯನ್ನು ಸುಧಾರಿಸುವ ಮತ್ತು "ಬಾಹ್ಯ ಆದಾಯ ಸೇವೆ" ಸ್ಥಾಪಿಸುವ ಯೋಜನೆಗಳನ್ನು ಬಹಿರಂಗಪಡಿಸಿದರು.

7 / 9
ಸರ್ಕಾರದ ಸೆನ್ಸಾರ್‌ಶಿಪ್ ಅನ್ನು ಕೊನೆಗೊಳಿಸುವುದು: ನಾವು ಎಲ್ಲಾ ಸರ್ಕಾರಿ ಸೆನ್ಸಾರ್ಶಿಪ್ ಅನ್ನು ಕೊನೆಗೊಳಿಸುತ್ತೇವೆ ಮತ್ತು ಅಮೆರಿಕಾದಲ್ಲಿ ವಾಕ್ ಸ್ವಾತಂತ್ರ್ಯವನ್ನು ಪುನಃಸ್ಥಾಪಿಸುತ್ತೇವೆ ಎಂದು ಟ್ರಂಪ್ ಹೇಳಿದರು.

8 / 9
ವ್ಯಾಪಾರ ಮತ್ತು ಶುಲ್ಕಗಳು: ಜಾಗತಿಕ ಆಮದುಗಳ ಮೇಲೆ ಶೇ.10 ಸುಂಕ, ಚೀನಾದ ಸರಕುಗಳ ಮೇಲೆ ಶೇ.60 ಸುಂಕ ಮತ್ತು ಕೆನಡಾ ಮತ್ತು ಮೆಕ್ಸಿಕೊದಿಂದ ಉತ್ಪನ್ನಗಳ ಮೇಲೆ ಶೇ.25 ಸುಂಕವನ್ನು ಪ್ರಸ್ತಾಪಿಸಿದ ಟ್ರಂಪ್, ಈ ಕ್ರಮಗಳು US ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಬಹುದು ಎಂದು ಹೇಳಿದ್ದಾರೆ.

9 / 9
ಪನಾಮ ಕಾಲುವೆಯನ್ನು ಪುನಃ ವಶಪಡಿಸಿಕೊಳ್ಳಲು ಯೋಜನೆ: ಪನಾಮ ಕಾಲುವೆಯನ್ನು ಮತ್ತೆ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಅಮೆರಿಕ ಯೋಜಿಸುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ. ಆದಾಗ್ಯೂ, ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಈ ವಿಷಯದ ಬಗ್ಗೆ ಹೆಚ್ಚುವರಿ ಮಾಹಿತಿಯನ್ನು ನೀಡಲಿಲ್ಲ.

Published On - 7:56 am, Tue, 21 January 25