Updated on: Mar 22, 2021 | 11:37 AM
ಟೆಸ್ಟ್ ಮತ್ತು ಟಿ 20 ಸರಣಿಯಲ್ಲಿ ಗೆದ್ದುಬೀಗಿದ ನಂತರ ಭಾರತದ ನಾಯಕ ವಿರಾಟ್ ಕೊಹ್ಲಿ ಏಕದಿನ ಸರಣಿಯ ಮೇಲೆ ಕಣ್ಣಿಟ್ಟಿದ್ದಾರೆ. ವಿರಾಟ್ ಇಂಗ್ಲೆಂಡ್ ವಿರುದ್ಧದ 3 ಏಕದಿನ ಪಂದ್ಯಗಳಲ್ಲಿ 5 ದಾಖಲೆಗಳನ್ನು ತಮ್ಮ ಖಾತೆಗೆ ಬರೆದುಕೊಳ್ಳುವ ತವಕದಲ್ಲಿದ್ದಾರೆ.
ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಇನ್ನ ಒಂದು ಶತಕ ಗಳಿಸಿದರೆ, ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರು ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯಗಳಲ್ಲಿ ಗಳಿಸಿರುವ 4 ಶತಕಗಳ ದಾಖಲೆಯನ್ನು ಸಮಗೊಳಿಸಲಿದ್ದಾರೆ.
ವಿರಾಟ್ ಕೊಹ್ಲಿ ಇನ್ನ 1 ಶತಕ ಗಳಿಸುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಶತಕ ಬಾರಿಸಿದ ನಾಯಕನೆಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಸಾಧನೆಯ ಮೂಲಕ ಕೊಹ್ಲಿ, ನಾಯಕನಾಗಿ 41 ಶತಕಗಳಿಸಿರುವ ಆಸಿಸ್ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ.
ಇಂಗ್ಲೆಂಡ್ ವಿರುದ್ಧ ಕಿಂಗ್ ಕೊಹ್ಲಿ, ಸುರೇಶ್ ರೈನಾ ಮಾಡಿರುವ ವಿಶಿಷ್ಟ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಳ್ಳಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ 30 ಪಂದ್ಯಗಳಲ್ಲಿ ಸರೇಶ್ ರೈನಾ 1178 ರನ್ ಗಳಿಸಿದ್ದಾರೆ. ನಾಯಕ ಕೊಹ್ಲಿ ಇನ್ನೂ ಕೇವಲ 39 ರನ್ ಗಳಿಸಿದರೆ, ರೈನಾ ಅವರ ದಾಖಲೆಯನ್ನು ಸಮಗೊಳಿಸಲಿದ್ದಾರೆ. ಈ ಸಾಧನೆ ಮಾಡುವ ಮೂಲಕ ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದ ನಾಲ್ಕನೇ ಅತ್ಯಂತ ಯಶಸ್ವಿ ಭಾರತೀಯ ಬ್ಯಾಟ್ಸ್‌ಮನ್ ಆಗುವ ಅವಕಾಶವನ್ನು ಹೊಂದಿದ್ದಾರೆ.
ವಿರಾಟ್ ಕೊಹ್ಲಿ ಇನ್ನ 135 ರನ್ ಗಳಿಸಿದರೆ, ತವರು ಮೈದಾನದಲ್ಲಿ ಆಡಿದ ಏಕದಿನ ಪಂದ್ಯದಲ್ಲಿ 5000 ರನ್‌ಗಳಿಸಿದ ನಾಲ್ಕನೇ ಭಾರತೀಯ ಬ್ಯಾಟ್ಸ್‌ಮನ್ ಆಗಲಿದ್ದಾರೆ. ಕೊಹ್ಲಿಗೂ ಮೊದಲು ಈ ದಾಖಲೆಯನ್ನ ಸಚಿನ್, ಸೌರವ್ ಮತ್ತು ದ್ರಾವಿಡ್ ಮಾಡಿದ್ದಾರೆ.
ತವರು ಮೈದಾನದಲ್ಲಿ ಆಡಿದ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು 20 ಶತಕಗಳನ್ನು ಗಳಿಸಿದ ದಾಖಲೆಯನ್ನು ಸಚಿನ್ ತೆಂಡೂಲ್ಕರ್ ಹೊಂದಿದ್ದಾರೆ. ವಿರಾಟ್ ಕೊಹ್ಲಿ ಈ ದಾಖಲೆಯನ್ನು 3 ಏಕದಿನ ಸರಣಿಯಲ್ಲಿ ಕೇವಲ 1 ಶತಕ ಬಾರಿಸುವುದರೊಂದಿಗೆ ಸಮನಾಗಿಸಲಿದ್ದಾರೆ.