Mirabai Chanu: ಇಂದು ಭಾರತದ ಹೆಮ್ಮೆಯ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಹುಟ್ಟುಹಬ್ಬ
TV9 Web | Updated By: Vinay Bhat
Updated on:
Aug 08, 2022 | 11:23 AM
Happy Birthday Mirabai Chanu: ಇಂದು ಭಾರತದ ಹೆಮ್ಮೆಯ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರ ಹುಟ್ಟುಹಬ್ಬ. ಚಿಕ್ಕಂದನಲ್ಲಿ ಒಂದೊತ್ತು ಊಟಕ್ಕೂ ಕಷ್ಟ ಪಟ್ಟು ಇಂದು ದೇಶವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿರುವ ಮೀರಾಬಾಯಿ 28ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭ ಇವರ ಬಗ್ಗೆ ನಿಮಗೆ ತಿಳಿದಿಲ್ಲದ ಕೆಲ ವಿಚಾರಗಳನ್ನು ನಾವು ಹೇಳುತ್ತೇವೆ ಕೇಳಿ.
1 / 10
ಇಂದು ಭಾರತದ ಹೆಮ್ಮೆಯ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರ ಹುಟ್ಟುಹಬ್ಬ. ಚಿಕ್ಕಂದನಲ್ಲಿ ಒಂದೊತ್ತು ಊಟಕ್ಕೂ ಕಷ್ಟ ಪಟ್ಟು ಇಂದು ದೇಶವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿರುವ ಮೀರಾಬಾಯಿ 28ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭ ಇವರ ಬಗ್ಗೆ ನಿಮಗೆ ತಿಳಿದಿಲ್ಲದ ಕೆಲ ವಿಚಾರಗಳನ್ನು ನಾವು ಹೇಳುತ್ತೇವೆ ಕೇಳಿ.
2 / 10
ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ 2022ರ ಕಾಮನ್‌ವೆಲ್ತ್ ಕ್ರೀಡಾಕೂಟದ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಮೀರಾಬಾಯಿ ಚಾನು ಭಾರತಕ್ಕೆ ಚೊಚ್ಚಲ ಚಿನ್ನದ ಪದಕ ತಂದುಕೊಟ್ಟರು. 49 ಕೆಜಿ ತೂಕ ವಿಭಾಗದಲ್ಲಿ ಮೀರಾ ಒಟ್ಟು 201 ಕೆಜಿ ಭಾರ ಎತ್ತುವ ಮೂಲಕ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು.
3 / 10
ಇದಕ್ಕೂ ಮುನ್ನ 2018ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿಯೂ ಮೀರಾಬಾಯಿ ಚಿನ್ನಕ್ಕೆ ಕೊರಳೊಡ್ಡಿದ್ದರು. ಕಳೆದ ವರ್ಷ ನಡೆದ ಪ್ರತಿಷ್ಠಿತ ಟೋಕಿಯೋ ಒಲಿಂಪಿಕ್ಸ್ 2020 ರಲ್ಲೂ ಇವರು ಬೆಳ್ಳಿ ಪದಕ ಗೆದ್ದು ದಾಖಲೆ ಬರೆದಿದ್ದರು.
4 / 10
ಒಂದು ಕಾಲದಲ್ಲಿ ಉರುವಲಿಗಾಗಿ ಕಾಡಿನಲ್ಲಿ ಕಟ್ಟಿಗೆ ಸಂಗ್ರಹಿಸಿ ಮನೆಗೆ ಕೊಂಡೊಯ್ಯುತ್ತಿದ್ದ ಮೀರಾಬಾಯಿ ಚಾನು ಮುಂದೊಂದು ದಿನ ಇದು ವೇಟ್ಲಿಫ್ಟಿಂಗ್ ಗೆ ನೆರವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಮಣಿಪುರದ ಪುಟ್ಟ ಹಳ್ಳಿಯಲ್ಲಿ ಜನಿಸಿದ್ದ ಇವರ ಮನೆಯಲ್ಲಿ ಕ್ರೀಡಾಪಟುಗಳಿದ್ದರು. ತಂದೆ, ಅಣ್ಣಂದಿರು ಫುಟ್ಬಾಲ್, ಸೆಪೆಕ್ ಟಕ್ರಾಗಳಲ್ಲಿ ಆಡುತ್ತಿದ್ದರು.
5 / 10
ಇಂಪಾಲದಿಂದ 20 ಕಿ.ಮೀ. ದೂರದಲ್ಲಿರುವ ನಾಂಗ್‌ಪಾಕ್ ಕಾಕ್ಚಿಂಗ್ ಗ್ರಾಮದ ಬಡ ಕುಟುಂಬಕ್ಕೆ ಸೇರಿದ ಮೀರಾಬಾಯಿ ಚಾನು, ಆರು ಮಕ್ಕಳಲ್ಲಿ ಅತ್ಯಂತ ಕಿರಿಯರು. ತನಗಿಂತ ನಾಲ್ಕು ವರ್ಷ ದೊಡ್ಡವನಾಗಿರುವ ಅಣ್ಣ ಸೈಕೊಮ್ ಸನಾತೊಂಬಾ ಮೈಟೈ ಅವರೊಂದಿಗೆ ಹತ್ತಿರದ ಬೆಟ್ಟಕ್ಕೆ ಹೋಗಿ ಕಟ್ಟಿಗೆಯನ್ನು ಸಂಗ್ರಹಿಸುತ್ತಿದ್ದರಂತೆ. ಒಂದು ದಿನ ಮೀರಾ ಅಣ್ಣ ತಾಯಿಯ ಬಳಿ ಬಂದು ನನಗೆ ಕಟ್ಟಿಗೆ ಮೂಟೆಯನ್ನು ಎತ್ತಲಾಗಲಿಲ್ಲ. ಆದರೆ ಮೀರಾ ಸುಲಭವಾಗಿ ಎತ್ತಿ ಮನೆಗೆ ತಂದರಂತೆ.
6 / 10
ಇದನ್ನ ಗಮನಿಸಿದ ಮೀರಾಬಾಯಿ ಅವರ ತಾಯಿ ಲೈಮಾ ಅವರಿಗೆ ತಮ್ಮ ಮಗಳನ್ನು ಕ್ರೀಡಾಪಟುವನ್ನಾಗಿ ರೂಪಿಸಬೇಕು ಎಂಬ ಹಂಬಲ ಶುರುವಾಯಿತು. ಬಾಲ್ಯದಲ್ಲಿ ಮೀರಾಬಾಯಿ ಆರ್ಚರಿ ಕಲಿಯಲು ಆಸಕ್ತಿ ತೋರಿಸಿದ್ದರು. ಆಗ ಅವರಿಗೆ ಪರಿಣತ ಕೋಚ್ ಸಿಗಲಿಲ್ಲ. ಹೀಗಾಗಿ ಸುಮ್ಮಮೆ ಕೂತಿದ್ದಾಗ ಮಣಿಪುರದ ಹಿರಿಯ ವೇಟ್ಲಿಫ್ಟಿರ್ ಕುಂಜುರಾಣಿದೇವಿ ಮತ್ತು ಅನಿತಾ ದೇವಿ ಅವರ ಸಾಧನೆಯನ್ನು ಒಂದು ಸಾಕ್ಷ್ಯಚಿತ್ರದಲ್ಲಿ ವೀಕ್ಷಿಸಿದರು. ಇದುವೆ ಇವರ ಜೀವನದ ಟರ್ನಿಂಗ್ ಪಾಯಿಂಟ್.
7 / 10
2007ರಲ್ಲಿ ಅವರು ತಮ್ಮ ಮನೆಯಿಂದ 60 ಕಿ.ಮೀ ದೂರದಲ್ಲಿದ್ದ ಕುಮಾನ್ ಲಂಪಕ್ ಕ್ರೀಡಾ ಸಂಕೀರ್ಣದಲ್ಲಿ ಅಭ್ಯಾಸಕ್ಕೆ ಸೇರಿದರು. ಪ್ರತಿದಿನವೂ ತರಬೇತಿಗೆ ಹೋಗಿ ಬರುವ ಗಡಿಬಿಡಿಯಲ್ಲಿ ಸರಿಯಾದ ಊಟ ಕೂಡ ಸಿಗುತ್ತಿರಲಿಲ್ಲ. ಈವೇಳೆ ಸಾಕಷ್ಟು ಕಷ್ಟ ಅನುಭವಿಸಿದ ಮೀರಾ ಒಂದು ದಿನ ಅಮ್ಮನ ಬಳಿ ಬಂದು ನಾನು ವೇಟ್ಲಿಫ್ಟಿಂಗ್ ಬಿಡುತ್ತೇನೆ ಎಂದು ಹೇಳಿದ್ದರಂತೆ. ಆಗ ಅವರ ತಾಯಿ ಲೈಮಾ ನೀನು ಯಾವುದೇ ಯೋಚನೆ ಮಾಡಬೇಡ. ನಿನ್ನ ಊಟ, ವಿದ್ಯಾಭ್ಯಾಸ ಮತ್ತು ಪ್ರಯಾಣದ ವ್ಯವಸ್ಥೆಗಳನ್ನು ಮಾಡುತ್ತೇವೆ. ಶ್ರದ್ಧೆಯಿಂದ ಸಾಧನೆ ಮಾಡು ಎಂದು ಭರವಸೆ ನೀಡಿದರು.
8 / 10
ಮೀರಾ ಅವರು ತಮ್ಮ ಯಶಸ್ಸಿನ ಯಾತ್ರೆ ಆರಂಭಿಸಲು ಸತತ ಐದು ವರ್ಷಗಳ ಕಾಲ ತಾಲೀಮು ನಡೆಸಿದರು. ಜೂನಿಯರ್ ವಿಭಾಗದಲ್ಲಿ ಮಿಂಚಿದರು. 2011ರಲ್ಲಿ ಅಂತರರಾಷ್ಟ್ರೀಯ ಯೂತ್ ಚಾಂಪಿಯನ್ ಷಿಪ್ ಮತ್ತು ದಕ್ಷಿಣ ಏಷ್ಯಾ ಜೂನಿಯರ್ ಚಾಂಪಿಯನ್ ಷಿಪ್ ನಲ್ಲಿ ಚಿನ್ನದ ಪದಕಗಳನ್ನು ಗೆದ್ದು ಬೀಗಿದರು.
9 / 10
2013ರಲ್ಲಿ ಗುವಾಹಟಿಯಲ್ಲಿ ನಡೆದಿದ್ದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ‘ಬೆಸ್ಟ್ ಲಿಫ್ಟರ್’ ಗೌರವಕ್ಕೆ ಕೂಡ ಪಾತ್ರರಾದರು. ಇದು ಅವರ ಕ್ರೀಡಾಜೀವನಕ್ಕೆ ಲಭಿಸಿದ ಮಹತ್ವದ ತಿರುವು. 2014ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳೆಯರ 48 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿದ್ದರು. 2014ರ ವಿಶ್ವ ಚಾಂಪಿಯನ್ ಶಿಪ್ ನಲ್ಲಿ 11ನೇ ಹಾಗೂ 2015ರಲ್ಲಿ ಒಂಬತ್ತನೇ ಸ್ಥಾನ ಪಡೆದರು.
10 / 10
ಮೀರಾಬಾಯಿ ರಿಯೊ ಡಿ ಜನೈರೊ 2016 ರಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುವ ಅವಕಾಶ ಪಡೆದರು. ಆದರೆ ಇಲ್ಲಿ ಅವರಿಗೆ ಪದಕ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಆದರೆ, ಕಠಿಣ ಪರಿಶ್ರಮ ಮತ್ತು ನಿರಂತರ ಅಭ್ಯಾಸದ ಫಲದಿಂದ 21ನೇ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ದಾಖಲೆಯೊಂದಿಗೆ ದೇಶಕ್ಕೆ ಮೊದಲ ಚಿನ್ನ ತಂದುಕೊಟ್ಟು ವಿಶೇಷ ಗೌರವಕ್ಕೆ ಪಾತ್ರರಾದರು.
Published On - 11:23 am, Mon, 8 August 22