ಕೇವಲ 9,999 ರೂ. ಬೆಲೆಯ ಇನ್ಫಿನಿಕ್ಸ್ ಹಾಟ್ 40i ಇಂದಿನಿಂದ ಖರೀದಿಗೆ ಲಭ್ಯ

|

Updated on: Feb 21, 2024 | 6:55 AM

Infinix Hot 40i Sale in India: ಇನ್ಫಿನಿಕ್ಸ್ ಹಾಟ್ 40i ಸ್ಮಾರ್ಟ್​ಫೋನ್ ಭಾರತದಲ್ಲಿ ಒಂದು ಸ್ಟೋರೇಜ್ ಆಯ್ಕೆಯಲ್ಲಷ್ಟೆ ಅನಾವರಣಗೊಂಡಿದೆ. ಇದರ 8GB + 256GB ಸ್ಟೋರೇಜ್ ಮಾದರಿಗೆ 9,999 ರೂ. ನಿಗದಿ ಮಾಡಲಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ.

1 / 5
ಪ್ರಸಿದ್ಧ ಇನ್ಫಿನಿಕ್ಸ್ ಕಂಪನಿ ಬಜೆಟ್ ಫೋನುಗಳನ್ನು ಬಿಡುಗಡೆ ಮಾಡುವುದರಲ್ಲಿ ಎತ್ತಿದ ಕೈ. ಕಂಪನಿ ಇತ್ತೀಚೆಗೆ ಭಾರತದಲ್ಲಿ ತನ್ನ ಹೊಸ ಇನ್ಫಿನಿಕ್ಸ್ ಹಾಟ್ 40i (Infinix Hot 40i) ಫೋನನ್ನು ರಿಲೀಸ್ ಮಾಡಿದೆ. 10,000 ರೂ. ಒಳಗೆ ಲಭ್ಯವಿರುವ ಈ ಫೋನ್ ಇಂದಿನಿಂದ ದೇಶದಲ್ಲಿ ಮಾರಾಟ ಕಾಣುತ್ತಿದೆ.

2 / 5
ಇನ್ಫಿನಿಕ್ಸ್ ಹಾಟ್ 40i ಸ್ಮಾರ್ಟ್​ಫೋನ್ ಭಾರತದಲ್ಲಿ ಒಂದು ಸ್ಟೋರೇಜ್ ಆಯ್ಕೆಯಲ್ಲಷ್ಟೆ ಅನಾವರಣಗೊಂಡಿದೆ. ಇದರ 8GB + 256GB ಸ್ಟೋರೇಜ್ ಮಾದರಿಗೆ 9,999 ರೂ. ನಿಗದಿ ಮಾಡಲಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ. ಪಾಮ್ ಬ್ಲೂ, ಸ್ಟಾರ್‌ಫಾಲ್ ಗ್ರೀ ಎನ್, ಹರೈಸನ್ ಗೋಲ್ಡ್ ಮತ್ತು ಸ್ಟಾರ್‌ಲಿಟ್ ಕಪ್ಪು ಬಣ್ಣಗಳಲ್ಲಿ ಬರುತ್ತದೆ.

3 / 5
 ಇನ್ಫಿನಿಕ್ಸ್ ಹಾಟ್ 40i ಫೋನ್ 1612 x 720 ಪಿಕ್ಸೆಲ್‌ಗಳ ರೆಸಲ್ಯೂಶನ್, 480 nits ಬ್ರೈಟ್‌ನೆಸ್, 90Hz ರಿಫ್ರೆಶ್ ದರ ಮತ್ತು 180Hz ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ 6.6-ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ. ಮಾಲಿ G57 MP1 GPU ಜೊತೆಗೆ ಯುನಿಸಾಕ್ T606 ಪ್ರೊಸೆಸರ್ ಅಳವಡಿಸಲಾಗಿದೆ.

4 / 5
ಚಿಪ್‌ಸೆಟ್ ಅನ್ನು 8GB LPDDR4x RAM ಮತ್ತು 256GB ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ, ಇದನ್ನು ಮೈಕ್ರೊ SD ಕಾರ್ಡ್ ಮೂಲಕ ಮತ್ತಷ್ಟು ವಿಸ್ತರಿಸಬಹುದಾಗಿದೆ. 8GB ವರ್ಚುವಲ್ RAM ಬೆಂಬಲವಿದೆ. ಈ ಫೋನ್ ಆಂಡ್ರಾಯ್ಡ್ 13-ಆಧಾರಿತ XOS 13 ಕಸ್ಟಮ್ ಸ್ಕಿನ್‌ನಿಂದ ರನ್ ಆಗುತ್ತದೆ.

5 / 5
ಇನ್ಫಿನಿಕ್ಸ್ ಹಾಟ್ 40i ಫೋನ್ 50MP ಪ್ರಾಥಮಿಕ ಕ್ಯಾಮೆರಾವನ್ನು f/2.0 ದ್ಯುತಿರಂಧ್ರದೊಂದಿಗೆ ಮತ್ತು ಕ್ವಾಡ್-LED ಫ್ಲ್ಯಾಷ್‌ನೊಂದಿಗೆ AI ಸೆಕೆಂಡರಿ ಲೆನ್ಸ್ ಅನ್ನು ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 32MP ಸ್ನ್ಯಾಪರ್ ಇದೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು 18W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿ ಇದೆ.