iPhone 14: ಸೆ. 7ಕ್ಕೆ ಐಫೋನ್ 14 ಸರಣಿ ಬಿಡುಗಡೆ: ಹುಬ್ಬೇರುವಂತೆ ಮಾಡಿದೆ ಇದರಲ್ಲಿರುವ 5 ಫೀಚರ್ಸ್

| Updated By: Vinay Bhat

Updated on: Aug 30, 2022 | 12:47 PM

Apple iPhone 14 Series: ಬಹುನಿರೀಕ್ಷಿತ ಐಫೋನ್ 14 ಸರಣಿಯ ಸ್ಮಾರ್ಟ್ ​ಫೋನ್ ​ಗಳು ಸೆಪ್ಟೆಂಬರ್ 7ಕ್ಕೆ ಅನಾವರಣಗೊಳ್ಳಲಿದೆ. ಆ್ಯಪಲ್ ಕ್ಯಾಲಿಫೋರ್ನಿಯಾದ ಪ್ರಧಾನ ಕಚೇರಿಯಲ್ಲಿ ಆ್ಯಪಲ್ ಈವೆಂಟ್ ನಡೆಯಲಿದ್ದು, ಇದರಲ್ಲಿ ಆ್ಯಪಲ್ ಐಫೋನ್ 14 ಸರಣಿಯ ನಾಲ್ಕು ಮಾದರಿಗಳು ಬಿಡುಗಡೆ ಆಗುವ ನಿರೀಕ್ಷೆಯಿದೆ.

1 / 7
ಬಹುನಿರೀಕ್ಷಿತ ಐಫೋನ್ 14 ಸರಣಿಯ ಸ್ಮಾರ್ಟ್ ​ಫೋನ್ ​ಗಳು ಸೆಪ್ಟೆಂಬರ್ 7ಕ್ಕೆ ಅನಾವರಣಗೊಳ್ಳಲಿದೆ. ಆ್ಯಪಲ್ ಕ್ಯಾಲಿಫೋರ್ನಿಯಾದ ಪ್ರಧಾನ ಕಚೇರಿಯಲ್ಲಿ ಆ್ಯಪಲ್ ಈವೆಂಟ್ ನಡೆಯಲಿದ್ದು, ಇದರಲ್ಲಿ ಆ್ಯಪಲ್ ಐಫೋನ್ 14 ಸರಣಿಯ ನಾಲ್ಕು ಮಾದರಿಗಳು ಬಿಡುಗಡೆ ಆಗುವ ನಿರೀಕ್ಷೆಯಿದೆ.

2 / 7
ಐಫೋನ್ 14, ಐಫೋನ್ 14 ಮ್ಯಾಕ್ಸ್, ಐಫೋನ್ 14 ಪ್ರೊ ಹಾಗೂ ಐಫೋನ್ 14 ಪ್ರೊ ಮ್ಯಾಕ್ಸ್ ಬಿಡುಗಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಐಫೋನ್ 13ಗೆ ಹೋಲಿಸಿದರೆ ಐಫೋನ್ 14 ನಲ್ಲಿ ಅನೇಕ ಹೊಸ ಹೊಸ ಫೀಚರ್ಸ್ ಇರಲಿದೆಯಂತೆ. ಕಂಪನಿ ಈ ಬಗ್ಗೆ ಯಾವುದೇ ಮಾಹಿತಿಯನ್ನು ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ. ಆದರೆ, ಮೂಲಗಳ ಪ್ರಕಾರ ಈ 5 ಮುಖ್ಯ ಫೀಚರ್ಸ್ ಇರಲಿದೆ ಎನ್ನಲಾಗಿದೆ.

3 / 7
ಈ ಬಾರಿಯ ಐಫೋನ್​ನಲ್ಲಿ ಕೊನೆಗೂ ಸೆಟಲೈನ್ ಕನೆಕ್ಟಿವಿಟಿ ಇರಲಿದೆ. ಇದರ ಮೂಲಕ ಯಾವುದೇ ಸೆಲ್ಯುಲಾರ್ ಸೇವೆ ಇಲ್ಲದಿದ್ದರೂ ಸಹ ಬಳಕೆದಾರರು ಕರೆಗಳನ್ನು ಮಾಡಲು ಮತ್ತು ಸಂದೇಶಗಳನ್ನು ಕಳುಹಿಸಲು ಈ ಉಪಗ್ರಹ ಸಂಪರ್ಕ ಸೌಲಭ್ಯವು ಅನುವು ಮಾಡಿಕೊಡುತ್ತದೆ. ಐಫೋನ್ 14 ಸರಣಿಯ ಜೊತೆಗೆ, ಆ್ಯಪಲ್ ವಾಚ್‌ಗೆ ಕೂಡ ಉಪಗ್ರಹ ಸಂಪರ್ಕವನ್ನು ನೀಡುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.

4 / 7
ಐಫೋನ್ ಸರಣಿಯ ಪ್ರೊ ಮಾದರಿಯ ಮೇಲೆ ಹೊಸ ವಿನ್ಯಾಸ, ಉತ್ತಮ ಕ್ಯಾಮೆರಾ ಮತ್ತು ಇತರ ಸುಧಾರಣೆಗಳನ್ನು ಹೊಂದಿರುತ್ತದೆ. ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್ ದೊಡ್ಡ ಪ್ರೊಫೈಲ್ ಮತ್ತು ಹೆಚ್ಚುವರಿ ಇಂಟರ್ನಲ್‌ಗಳನ್ನು ನಿರ್ವಹಿಸಲು ಉತ್ತಮ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿವೆ ಎಂದು ವದಂತಿಗಳಿವೆ. ಎರಡೂ ಆವೃತ್ತಿಗಳು 48 ಮೆಗಾಫಿಕ್ಸೆಲ್, 12 ಮೆಗಾಫಿಕ್ಸೆಲ್ ಅಲ್ಟ್ರಾ-ವೈಡ್ ಮತ್ತು ಟೆಲಿಫೋಟೋ ಲೆನ್ಸ್‌ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿರುತ್ತದೆ.

5 / 7
ಇನ್ನು ಆನ್ ಡಿಸ್ ಪ್ಲೇ ಫೀಚರ್ ಇರಲಿದೆ ಎಂಬ ಮಾತಿದೆ. ಅಂದರೆ ಐಫೋನ್ ​ನಲ್ಲಿ ಯಾವಾಗಲೂ ಡಿಸ್ ಪ್ಲೇ ಅನ್ನು ಆನ್ ಮಾಡಿಯೇ ಇಡಬಹುದು. ಈ ಆಯ್ಕೆ ಈಗಾಗಲೇ ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಲಭ್ಯವಿದೆ. ಇದೀಗ ಹೊಸ ಐಒಎಸ್ ಬಳಕೆದಾರರಿಗೆ ಕೂಡ ಈ ಆಯ್ಕೆ ಲಭ್ಯವಾಗಲಿದೆ.

6 / 7
ಈ ಹಿಂದಿನ ಐಫೋನ್ ಗಳಿಗೆ ಹೋಲಿಸಿದರೆ ಈ ಬಾರಿ ಬಲಿಷ್ಠ ಬ್ಯಾಟರಿ ಬ್ಯಾಕಪ್ ಕೊಡಲಾಗುತ್ತಂತೆ. ಜೊತೆಗೆ ಫಾಸ್ಟ್ ಚಾರ್ಜರ್ ಸೌಲಭ್ಯ ಬಂದರೂ ಅಚ್ಚರಿ ಪಡಬೇಕಿಲ್ಲ.

7 / 7
ಐಫೋನ್ 14 ಪ್ರೊ ಮಾಡೆಲ್​ ನಲ್ಲಿ ಪಂಚ್ ಹೋಲ್ ಡಿಸ್ ಪ್ಲೇ ಇರಲಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಅನೇಕ ಫೋಟೋಗಳು ಸೋರಿಕೆಯಾಗಿವೆ. ಇದರಿಂದ ಡಿಸ್ ಪ್ಲೇಯಲ್ಲಿ ಇನ್ನಷ್ಟು ಜಾಗ ಸಿಗಲಿದೆ.