Kannada News Photo gallery iPhone 15 series will ditch the lightning charging port and will switch to a USB-C port Kannada Technology News
iPhone 15: ಐಫೋನ್ 15 ಬಗ್ಗೆ ಹೊರಬಿತ್ತು ಶಾಕಿಂಗ್ ವಿಚಾರ: ಇದರಲ್ಲಿರಲಿದೆ ಅಚ್ಚರಿಯ ಆಯ್ಕೆ
TV9 Web | Updated By: Vinay Bhat
Updated on:
Oct 28, 2022 | 3:37 PM
USB-C Type Charger: 2023 ರಲ್ಲಿ ಬಿಡುಗಡೆ ಆಗಲಿರುವ ಐಫೋನ್ 15 ನಲ್ಲಿ USB-C (Type-C) ಚಾರ್ಜರ್‌ಗಳನ್ನು ಹೊಂದಿರಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಐಫೋನ್‌ಗಳಲ್ಲಿ ಯುಎಸ್‌ಬಿ ಟೈಪ್-ಸಿ ಚಾರ್ಜರ್‌ಗೆ ಬದಲಾಯಿಸಲು ಸಿದ್ದವಾಗಿರುವ ಬಗ್ಗೆ ಆ್ಯಪಲ್ ಕಂಪನಿಯ ಮಾರ್ಕೆಟಿಂಗ್ ಮುಖ್ಯಸ್ಥ ಗ್ರೆಗ್ ಜೋಸ್ವಿಯಾಕ್ ಹೇಳಿರುವುದನ್ನು ವರದಿ ಆಗಿದೆ.
1 / 7
ಆ್ಯಪಲ್ ಕಂಪನಿ ಪ್ರತಿವರ್ಷ ತನ್ನ ಐಫೋನ್ನ ಹೊಸ ಹೊಸ ಆವೃತ್ತಿಯನ್ನು ಪರಿಚಯಿಸುತ್ತದೆ. ಕಳೆದ ವರ್ಷ ಐಫೊನ್ 13 ಅನ್ನು ಬಿಡುಗಡೆ ಮಾಡಿದ್ದ ಕಂಪನಿ ಈ ವರ್ಷ ಐಫೋನ್ 14 ರಿಲೀಸ್ ಮಾಡಿತ್ತು. 13 ಮತ್ತು 14 ಸರಣಿಯ ಫೋನ್ಗಳಿಗೆ ಮಾರುಕಟ್ಟೆಯಲ್ಲಿ ಈಗಲೂ ಭರ್ಜರಿ ಬೇಡಿಕೆ ಇದೆ. ಹೀಗಿರುವಾಗ ಮುಂದಿನ ವರ್ಷ ಅನಾವರಣಗೊಳ್ಳಲಿರುವ ಐಫೋನ್ 15 ಬಗ್ಗೆ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ.
2 / 7
ಪ್ರತಿ ವರ್ಷ ಹೊಸ ಮಾಡೆಲ್ ಅನ್ನು ಬಿಡುಗಡೆ ಮಾಡುವ ಐಫೋನ್ ಅದಕ್ಕೆ ವಿಶೇಷ ಫೀಚರ್ಗಳನ್ನು ಕೂಡ ಸೇರಿಸುತ್ತಾ ಬರುತ್ತಿದೆ. ಈ ವರ್ಷದ ಐಫೋನ್ 14 ಸರಣಿಯಲ್ಲಿ ಆಕರ್ಷಕವಾದ 48 ಮೆಗಾಫಿಕ್ಸೆಲ್ ಕ್ಯಾಮೆರಾ, ಸ್ಯಾಟಲೈಟ್ ಕನೆಕ್ಟಿವಿಟಿ, ಕ್ರ್ಯಾಶ್ ಡಿಟೆಕ್ಷನ್ ಸೇರಿದಂತೆ ಒಂದಿಷ್ಟು ನೂತನ ಆಯ್ಕೆ ಸೇರ್ಪಡೆ ಮಾಡಿತ್ತು.
3 / 7
ಇದೀಗ 2023 ರಲ್ಲಿ ಬಿಡುಗಡೆ ಆಗಲಿರುವ ಐಫೋನ್ 15 ನಲ್ಲಿ USB-C (Type-C) ಚಾರ್ಜರ್‌ಗಳನ್ನು ಹೊಂದಿರಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಐಫೋನ್‌ಗಳಲ್ಲಿ ಯುಎಸ್‌ಬಿ ಟೈಪ್-ಸಿ ಚಾರ್ಜರ್‌ಗೆ ಬದಲಾಯಿಸಲು ಸಿದ್ದವಾಗಿರುವ ಬಗ್ಗೆ ಆ್ಯಪಲ್ ಕಂಪನಿಯ ಮಾರ್ಕೆಟಿಂಗ್ ಮುಖ್ಯಸ್ಥ ಗ್ರೆಗ್ ಜೋಸ್ವಿಯಾಕ್ ಹೇಳಿರುವುದನ್ನು ವರದಿ ಆಗಿದೆ.
4 / 7
ಇ-ತ್ಯಾಜ್ಯವನ್ನು ಕಡಿಮೆ ಮಾಡುವ ಸಲುವಾಗಿ ಹಾಗೂ ಅಸ್ತಿತ್ವದಲ್ಲಿರುವ ಚಾರ್ಜರ್‌ಗಳನ್ನು ಮರುಬಳಕೆ ಮಾಡುವಂತೆ ಗ್ರಾಹಕರನ್ನು ಪ್ರೋತ್ಸಾಹಿಸಲು, ಯೂರೋಪ್‌ನಲ್ಲಿ ಮಾರಾಟ ಮಾಡಲಾಗುವ ಎಲ್ಲಾ ಗ್ಯಾಜೆಟ್ ಉತ್ಪನ್ನಗಳು USB-C (Type-C) ಚಾರ್ಜರ್‌ಗಳನ್ನು ಹೊಂದಿರಬೇಕು ಎಂಬ ನಿಯಮವನ್ನು ಈ ಹಿಂದೆ ಜಾರಿಗೊಳಿಸಲಾಗಿತ್ತು. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಆ್ಯಪಲ್ ಕಂಪನಿ ಇದೀಗ ಯುರೋಪಿಯನ್ ಯೂನಿಯನ್ ಕಾನೂನನ್ನು ಅನುಸರಿಸಲು ಮುಂದಾಗಿದೆ.
5 / 7
ಯುರೋಪಿಯನ್ ಕಮಿಷನ್ ಪ್ರಸ್ತಾಪಿಸಿದ್ದ ಹೊಸ ನಿಯಮದ ಅಡಿಯಲ್ಲಿ, ಯೂರೋಪ್‌ನಲ್ಲಿ ಮಾರಾಟ ಮಾಡಲಾಗುವ ಎಲ್ಲಾ ಪೋನ್‌ಗಳು 2024 ರ ವೇಳೆಗೆ USB-C ಚಾರ್ಜರ್‌ಗಳನ್ನು ಹೊಂದಿರಬೇಕು ಎಂದು ತಿಳಿಸಿತ್ತು. ಅದರಂತೆ ಇದೀಗ ಆ್ಯಪಲ್ ಕಂಪನಿ ಇದಕ್ಕೆ ಒಪ್ಪಿಗೆ ಸೂಚಿಸಿದ್ದು ಐಫೋನ್ 15ನಲ್ಲಿ USB-C ಚಾರ್ಜರ್ ಇರಲಿದೆ ಎಂದು ಹೇಳಲಾಗಿದೆ.
6 / 7
ಇನ್ನು ಆ್ಯಪಲ್ ಐಫೋನ್ 15ಜೊತೆ ಬಿಡುಗಡೆ ಆಗಲಿರುವ 15 ಪ್ರೊ ಮ್ಯಾಕ್ಸ್ನಲ್ಲಿ A17 ಬಯೋನಿಕ್ ಚಿಪ್ ಇರಲಿದೆಯಂತೆ. ಇದು ಅತ್ಯಂತ ಬಲಿಷ್ಠವಾಗಿರಲಿದೆ ಎಂದು ಹೇಳಲಾಗಿದೆ. ಜೊತೆಗೆ 8GB RAM ಆಯ್ಕೆಯಿಂದ ಕೂಡಿರಲಿದೆ ಎಂಬ ಮಾತುಕೂಡ ಹರಿದಾಡುತ್ತಿದೆ.
7 / 7
ಐಫೋನ್ 15 ಕ್ಯಾಮೆರಾ 14ಗೆ ಹೋಲಿಸಿದರೆ ಹೆಚ್ಚಿನ ಗುಣಮಟ್ಟದಿಂದ ಕೂಡಿರಲಿದೆಯಂತೆ. ಮುಖ್ಯವಾಗಿ ಜೂಮ್ ಆಯ್ಕೆಯನ್ನು ಹೆಚ್ಚಿಸಲಾಗುತ್ತಿದ್ದು ಉತ್ತಮ ಕ್ವಾಲಿಟಿ ಪಡೆದುಕೊಂಡರಲಿದೆ ಎಂದು ಹೇಳಲಾಗಿದೆ.
Published On - 3:35 pm, Fri, 28 October 22