- Kannada News Photo gallery Tamil Actor Siddharth Dating called Aditi Rao Hydari as Princess of heart
‘ಹೃದಯದ ರಾಜಕುಮಾರಿ’; ಅದಿತಿ ರಾವ್ ಹೈದರಿಯನ್ನು ಪ್ರೀತಿಯಿಂದ ಕರೆದ ನಟ ಸಿದ್ದಾರ್ಥ್
ಇಂದು (ಅಕ್ಟೋಬರ್ 28) ಅದಿತಿ ಅವರ ಜನ್ಮದಿನ. ಈ ವಿಶೇಷ ದಿನಕ್ಕಾಗಿ ಅದಿತಿಗೆ ಸಿದ್ದಾರ್ಥ್ ಅವರು ಬರ್ತ್ಡೇ ವಿಶ್ ಮಾಡಿದ್ದಾರೆ. ‘ಹೃದಯದ ರಾಜಕುಮಾರಿ ಅದಿತಿಗೆ ಜನ್ಮದಿನದ ಶುಭಾಶಯಗಳು’ ಎಂದು ಸಿದ್ದಾರ್ಥ್ ಬರೆದುಕೊಂಡಿದ್ದಾರೆ. ಇದು ಸಾಕಷ್ಟು ಕುತೂಹಲ ಮೂಡಿಸಿದೆ.
Updated on: Oct 28, 2022 | 6:18 PM

ತಮಿಳು ನಟ ಸಿದ್ದಾರ್ಥ್ ಹಾಗೂ ನಟಿ ಅದಿತಿ ರಾವ್ ಹೈದರಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವಿಚಾರ ಈ ಮೊದಲಿನಿಂದಲೂ ಹರಿದಾಡುತ್ತಿದೆ. ಆದರೆ, ಈ ಜೋಡಿ ಇದಕ್ಕೆ ಸ್ಪಷ್ಟನೆ ನೀಡಿಲ್ಲ. ಈಗ ಸಿದ್ದಾರ್ಥ್ ಅವರ ವಿಶೇಷ ಪೋಸ್ಟ್ ಎಲ್ಲರ ಗಮನ ಸೆಳೆದಿದೆ.

ಇಂದು (ಅಕ್ಟೋಬರ್ 28) ಅದಿತಿ ಅವರ ಜನ್ಮದಿನ. ಈ ವಿಶೇಷ ದಿನಕ್ಕಾಗಿ ಅದಿತಿಗೆ ಸಿದ್ದಾರ್ಥ್ ಅವರು ಬರ್ತ್ಡೇ ವಿಶ್ ಮಾಡಿದ್ದಾರೆ. ‘ಹೃದಯದ ರಾಜಕುಮಾರಿ ಅದಿತಿಗೆ ಜನ್ಮದಿನದ ಶುಭಾಶಯಗಳು’ ಎಂದು ಸಿದ್ದಾರ್ಥ್ ಬರೆದುಕೊಂಡಿದ್ದಾರೆ. ಇದು ಸಾಕಷ್ಟು ಕುತೂಹಲ ಮೂಡಿಸಿದೆ.

ನಟಿ ಅದಿತಿ ರಾವ್ ಹೈದರಿ ಅವರು ಸಾಕಷ್ಟು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಮುಂಬೈನ ಬಾಂದ್ರಾದಲ್ಲಿ ಸೆಟಲ್ ಆಗಿದ್ದಾರೆ. ಅಲ್ಲಿಯೇ ಅವರು ಮನೆ ಹೊಂದಿದ್ದಾರೆ. ಅದಿತಿ ಮನೆಗೆ ಸಿದ್ದಾರ್ಥ್ ಆಗಾಗ ತೆರಳುತ್ತಿರುತ್ತಾರೆ.

‘ಮಹಾ ಸಮುದ್ರಮ್’ ಸಿನಿಮಾದಲ್ಲಿ ಅದಿತಿ ಹಾಗೂ ಸಿದ್ದಾರ್ಥ್ ಒಟ್ಟಾಗಿ ನಟಿಸಿದ್ದರು. ಈ ಸೆಟ್ನಲ್ಲಿ ಇಬ್ಬರ ಮಧ್ಯೆ ಲವ್ ಆಗಿದೆ. ಆ ಬಳಿಕ ಇವರು ಡೇಟಿಂಗ್ ಶುರುಹಚ್ಚಿಕೊಂಡಿದ್ದಾರೆ ಎನ್ನಲಾಗಿದೆ.

ರಾಜ್ಕುಮಾರ್ ರಾವ್ ಮದುವೆಯಲ್ಲಿ ಇವರಿಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದರು. ಏಪ್ರಿಲ್ನಲ್ಲಿ ಸಿದ್ದಾರ್ಥ್ ಬರ್ತ್ಡೇ ಆಚರಿಸಿಕೊಂಡಿದ್ದರು. ಈ ವೇಳೆ ಫೋಟೋ ಪೋಸ್ಟ್ ಮಾಡಿದ್ದ ಅದಿತಿ ಅವರು, ಪ್ರೀತಿಯಿಂದ ಸಿದ್ದಾರ್ಥ್ಗೆ ವಿಶ್ ಮಾಡಿದ್ದರು.