
ಐಪಿಎಲ್ 2021 ರ 10 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 38 ರನ್ಗಳಿಂದ ಸೋಲಿಸಿತು. ಲೆಜೆಂಡರಿ ಬ್ಯಾಟ್ಸ್‌ಮನ್‌ಗಳಾದ ಎಬಿ ಡಿವಿಲಿಯರ್ಸ್ (ಔಟಾಗದೆ 76) ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ (78) ಆರ್‌ಸಿಬಿ ವಿಜಯದ ರುವಾರಿಗಳಾಗಿದ್ದಾರೆ. ಇಬ್ಬರೂ ಅರ್ಧಶತಕವನ್ನು ಗಳಿಸಿದರು. ನಿರ್ದಿಷ್ಟವಾಗಿ ಡಿವಿಲಿಯರ್ಸ್ ಅವರ ಇನ್ನಿಂಗ್ಸ್ ಅದ್ಭುತವಾಗಿತ್ತು, ಕೇವಲ 34 ಎಸೆತಗಳಲ್ಲಿ 76 ರನ್ ಗಳಿಸಿದರು. ಈ ಇನಿಂಗ್ಸ್‌ಗಾಗಿ ಡಿವಿಲಿಯರ್ಸ್‌ಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ನೀಡಲಾಯಿತು. ಇದು ಅವರ 172 ನೇ ಪಂದ್ಯದಲ್ಲಿ ಅವರ 24 ನೇ ಪ್ರಶಸ್ತಿಯಾಗಿದೆ.

ಎಬಿ ಡಿವಿಲಿಯರ್ಸ್ ನಂತರ ಕ್ರಿಸ್ ಗೇಲ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಈ ಲೀಗ್‌ನ ಇತಿಹಾಸದಲ್ಲಿ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್ ಮತ್ತು ಮನರಂಜನೆ ನೀಡುವ ಕ್ರಿಸ್ ಗೇಲ್ 135 ಪಂದ್ಯಗಳಲ್ಲಿ 22 ಬಾರಿ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿದ್ದಾರೆ. ರೋಹಿತ್ ತಮ್ಮ ವೃತ್ತಿಜೀವನದ 203 ಪಂದ್ಯಗಳಲ್ಲಿ 18 ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಸೂಪರ್ ಸ್ಟಾರ್ ನಾಯಕ ಎಂ.ಎಸ್.ಧೋನಿ ಕೂಡ ಈ ಪಟ್ಟಿಯಲ್ಲಿದ್ದಾರೆ. ಅವರು 206 ಪಂದ್ಯಗಳಲ್ಲಿ 17 ಬಾರಿ ಹೀರೋ ಆಫ್ ದಿ ಮ್ಯಾಚ್ ಗೆದ್ದಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ಕೂಡ ಈ ವಿಶೇಷ ಪಟ್ಟಿಯ ಭಾಗವಾಗಿದ್ದಾರೆ. ಅವರು 145 ಪಂದ್ಯಗಳಲ್ಲಿ 17 ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಆಗಿದ್ದಾರೆ.
Published On - 3:49 pm, Mon, 19 April 21