
ಐಪಿಎಲ್ 2021 ಕೋಲ್ಕತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಇಂದು ರಾತ್ರಿ ನಡೆಯಲಿದೆ. ಇಲ್ಲಿಯವರೆಗೆ ಆಡಿದ ಮೂರು ಪಂದ್ಯಗಳಲ್ಲಿ ಎರಡನ್ನು ಚೆನ್ನೈ ಗೆದ್ದಿದ್ದರೆ, ಕೋಲ್ಕತಾ ಮೂರು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದಿದೆ.

ಐಪಿಎಲ್‌ನಲ್ಲಿ ಈ ಎರಡು ತಂಡಗಳ ನಡುವೆ ಈವರೆಗೆ 24 ಪಂದ್ಯಗಳನ್ನು ಆಡಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು 24 ಪಂದ್ಯಗಳಲ್ಲಿ 15 ಪಂದ್ಯಗಳನ್ನು ಗೆದ್ದಿದ್ದರೆ, ಕೋಲ್ಕತಾ ಒಂಬತ್ತು ಪಂದ್ಯಗಳನ್ನು ಗೆದ್ದಿದೆ. ಇಲ್ಲಿಯವರೆಗೆ ಚೆನ್ನೈ ಎರಡೂ ಲೀಗ್ ಸುತ್ತಿನ ಪಂದ್ಯಗಳನ್ನು ಕೋಲ್ಕತಾ ವಿರುದ್ಧ ಕಳೆದುಕೊಂಡಿಲ್ಲ.

ಕೋಲ್ಕತಾ ನೈಟ್ ರೈಡರ್ಸ್ ತಂಡ

ಪ್ರಸ್ತುತ ಎರಡೂ ತಂಡಗಳ ಆಟಗಾರರಲ್ಲಿ ಸುರೇಶ್ ರೈನಾ ಹೆಚ್ಚು ರನ್ ಗಳಿಸಿದ್ದಾರೆ. ರೈನಾ ಕೆಕೆಆರ್ ವಿರುದ್ಧ 736 ರನ್ ಗಳಿಸಿದರೆ, ಅಗ್ರ ಐದು ಆಟಗಾರರ ಪಟ್ಟಿಯಲ್ಲಿ ರಸ್ಸೆಲ್ ಮಾತ್ರ ಕೆಕೆಆರ್ ಮೂಲದವರಾಗಿದ್ದಾರೆ. ಅವರು ಚೆನ್ನೈ ವಿರುದ್ಧ 270 ರನ್ ಗಳಿಸಿದ್ದಾರೆ.

ಬೌಲರ್‌ಗಳ ಬಗ್ಗೆ ಹೇಳಬೇಕೆಂದರೆ, ಕೋಲ್ಕತಾ ನೈಟ್ ರೈಡರ್ಸ್‌ನ ಸುನಿಲ್ ನರೇನ್ ಪ್ರಥಮ ಸ್ಥಾನದಲ್ಲಿದ್ದಾರೆ. ಅವರು ಚೆನ್ನೈ ವಿರುದ್ಧ 15 ವಿಕೆಟ್ ಪಡೆದಿದ್ದಾರೆ. ಉಭಯ ತಂಡಗಳ ನಡುವಿನ 25 ನೇ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.
Published On - 5:11 pm, Wed, 21 April 21