Kannada News Photo gallery IPL 2022 RCB for Faf du Plessis new captain Lucknow Super Giants for KL Rahul know the captains of all 10 teams
IPL 2022 Captains: ಎಂಎಸ್ ಧೋನಿಯಿಂದ ಡುಪ್ಲೆಸಿಸ್ ವರೆಗೆ: ಐಪಿಎಲ್ 2022ರ ನಾಯಕರ ಪಟ್ಟಿ ಇಲ್ಲಿದೆ ನೋಡಿ
IPL 2022: ಐಪಿಎಲ್ 2022ಕ್ಕಾಗಿ ಎರಡು ಹೊಸ ತಂಡಗಳನ್ನು ಹೊರತುಪಡಿಸಿ, 3 ಹಳೆಯ ತಂಡಗಳು ಸಹ ನೂತನ ನಾಯಕರನ್ನು ಆಯ್ಕೆ ಮಾಡಿದವು. ಹಾಗಾದರೆ ಎಲ್ಲಾ 10 ನಾಯಕರು ಯಾರೆಲ್ಲ ಎಂಬುದನ್ನು ನೋಡೋಣ.
1 / 11
ಐಪಿಎಲ್ 2022 ರ ಸೀಸನ್ ಆರಂಭಕ್ಕೆ ಕೆಲವೇ ದಿನಗಳು ಉಳಿದಿವೆ. ಈಗಾಗಲೇ ಎಲ್ಲಾ 10 ತಂಡಗಳ ನಾಯಕರು ಯಾರು ಎಂಬುದು ಸ್ಪಷ್ಟವಾಗಿದೆ. ಮಾರ್ಚ್ 12 ರ ಶನಿವಾರದಂದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಮ್ಮ ನಾಯಕನಾಗಿ ಫಾಫ್ ಡು ಪ್ಲೆಸಿಸ್ ಅವರನ್ನು ನೇಮಿಸಿತು. ಹೊಸ ಋತುವಿನ ಮೊದಲು, ಎರಡು ಹೊಸ ತಂಡಗಳನ್ನು ಹೊರತುಪಡಿಸಿ, 3 ಹಳೆಯ ತಂಡಗಳು ಸಹ ನೂತನ ನಾಯಕರನ್ನು ಆಯ್ಕೆ ಮಾಡಿದವು. ಹಾಗಾದರೆ ಎಲ್ಲಾ 10 ನಾಯಕರು ಯಾರೆಲ್ಲ ಎಂಬುದನ್ನು ನೋಡೋಣ.
2 / 11
RCB ಬಗ್ಗೆ ನೋಡುವುದಾದರೆ ಕಳೆದ ವರ್ಷ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದ ನಂತರ, ಆರ್ಸಿಬಿ ನಾಯಕತ್ವಕ್ಕೆ ಹೊಸ ಮುಖವನ್ನು ಹುಡುಕುತ್ತಿತ್ತು. ಫ್ರಾಂಚೈಸಿ ಆರಂಭದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಅವರ ಆಯ್ಕೆಯನ್ನು ಹೊಂದಿತ್ತು, ಆದರೆ ಬಳಿಕ ಫಾಫ್ ಡುಪ್ಲೆಸಿಸ್ ಅವರನ್ನು ತನ್ನ ಹೊಸ ನಾಯಕನನ್ನಾಗಿ ಘೋಷಣೆ ಮಾಡಿತು. ಅಇರನ್ನು ಹರಾಜಿನಲ್ಲಿ 7 ಕೋಟಿ ರೂ. ಗೆ ಖರೀದಿ ಮಾಡಲಾಗಿತ್ತು.
3 / 11
ಎರಡು ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಹೊಸ ಋತುವಿಗೆ ಹೊಸ ನಾಯಕನನ್ನು ಪಡೆದಿದೆ. ಕೆಕೆಆರ್ ತನ್ನ ನಾಯಕನಾಗಿ ಶ್ರೇಯಸ್ ಅಯ್ಯರ್ ಅವರನ್ನು ನೇಮಿಸಿದೆ. ದೆಹಲಿ ಕ್ಯಾಪಿಟಲ್ಸ್ ತಂಡದ ಮಾಜಿ ನಾಯಕ ಶ್ರೇಯಸ್ ಅವರನ್ನು ಕೋಲ್ಕತ್ತಾ 12.25 ಕೋಟಿಗೆ ಹರಾಜಿನಲ್ಲಿ ಖರೀದಿಸಿತು.
4 / 11
ಪಂಜಾಬ್ ಕಿಂಗ್ಸ್ ಕೂಡ ಹೊಸ ಕ್ಯಾಪ್ಟನ್ ಅನ್ನು ಹೊಂದಿದೆ. ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ಗೆ ಸೇರ್ಪಡೆಗೊಂಡ ನಂತರ, ಪಂಜಾಬ್ ಮಯಾಂಕ್ ಅಗರ್ವಾಲ್ಗೆ ನಾಯಕನ ಜವಾಬ್ದಾರಿಯನ್ನ ಹಸ್ತಾಂತರಿಸಿದೆ.
5 / 11
ಮತ್ತೊಂದೆಡೆ, ಗುಜರಾತ್ ಟೈಟಾನ್ಸ್ ಭಾರತದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಮಾಡಿದೆ. ಇದುವರೆಗೂ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಹಾರ್ದಿಕ್ ಅವರನ್ನು ಗುಜರಾತ್ 15 ಕೋಟಿಗೆ ಉಳಿಸಿಕೊಂಡಿತ್ತು.
6 / 11
ಹೊಸ ಫ್ರಾಂಚೈಸಿಗಳಿಗೆ ಸಂಬಂಧಿಸಿದಂತೆ, ಲಕ್ನೋ ಸೂಪರ್ ಜೈಂಟ್ಸ್ ಭಾರತದ ಅನುಭವಿ ಬ್ಯಾಟರ್ ಕೆಎಲ್ ರಾಹುಲ್ ಅವರನ್ನು ನಾಯಕರನ್ನಾಗಿ ನೇಮಿಸಿದೆ. ಹರಾಜಿಗೂ ಮುನ್ನ ಲಕ್ನೋ ಬರೋಬ್ಬರಿ 17 ಕೋಟಿ ರೂ.ಗೆ ರಾಹುಲ್ ಜೊತೆ ಒಪ್ಪಂದ ಮಾಡಿಕೊಂಡಿತ್ತು.
7 / 11
ಈ ಹೊಸ ನಾಯಕರ ನಂತರ, ಹಳೆಯ ನಾಯಕರ ಬಗ್ಗೆ ನೋಡುವುದಾದರೆ, ಲೀಗ್ನ ಅತ್ಯಂತ ಯಶಸ್ವಿ ತಂಡ ಮತ್ತು ಅತ್ಯಂತ ಯಶಸ್ವಿ ನಾಯಕನಾಗಿ, ಮುಂಬೈ ಇಂಡಿಯನ್ಸ್ ಮತ್ತು ರೋಹಿತ್ ಶರ್ಮಾ ನಡುವಿನ ಸಂಬಂಧವು ಐಪಿಎಲ್ 2022 ರಲ್ಲೂ ಮುಂದುವರಿಯುತ್ತಿದೆ.
8 / 11
ಅದೇ ಸಮಯದಲ್ಲಿ ಕಳೆದ ಋತುವಿನ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ಎಂದಿನಂತೆ ಎಂಎಸ್ ಧೋನಿ ಕೈಯಲ್ಲಿದೆ. 4 ಬಾರಿ ಚೆನ್ನೈ ಚಾಂಪಿಯನ್ ಆಗಿರುವ ಧೋನಿ ಮೊದಲ ಸೀಸನ್ ನಿಂದ ಇಲ್ಲಿಯವರೆಗೆ ಈ ಜವಾಬ್ದಾರಿ ನಿರ್ವಹಿಸುತ್ತಿರುವ ಏಕೈಕ ನಾಯಕ.
9 / 11
ಡೆಲ್ಲಿ ಕ್ಯಾಪಿಟಲ್ಸ್ ಸತತ ಎರಡನೇ ಋತುವಿನಲ್ಲಿ ರಿಷಬ್ ಪಂತ್ಗೆ ನಾಯಕತ್ವದ ಜವಾಬ್ದಾರಿಯನ್ನು ಹಸ್ತಾಂತರಿಸಿದೆ. ಕಳೆದ ಋತುವಿನಲ್ಲಿ, ಶ್ರೇಯಸ್ ಅಯ್ಯರ್ ಗಾಯಗೊಂಡ ನಂತರ ನಾಯಕನ ಜವಾಭ್ದಾರಿ ಹೊತ್ತ ಪಂತ್, ಡೆಲ್ಲಿಯನ್ನು ಪ್ಲೇಆಫ್ಗೆ ಕರೆದೊಯ್ದರು.
10 / 11
ರಾಜಸ್ಥಾನ್ ರಾಯಲ್ಸ್ ತಂಡದ ನಾಯಕತ್ವ ಮತ್ತೆ ಸಂಜು ಸ್ಯಾಮ್ಸನ್ ಹೆಗಲ ಮೇಲಿದೆ. ಕಳೆದ ಋತುವಿನಲ್ಲಿಯೇ ಸಂಜು ಅವರನ್ನು ತಂಡದ ನಾಯಕರನ್ನಾಗಿಯೂ ಮಾಡಲಾಗಿತ್ತು. ಕಳೆದ ಋತುವಿನಲ್ಲಿ ತಂಡವು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ, ಆದರೆ ಇದೀಗ ಹೊಸ ಆಟಗಾರರೊಂದಿಗೆ, ಅದೃಷ್ಟವು ಬದಲಾಗುವ ನಿರೀಕ್ಷೆಯಿದೆ.
11 / 11
ಇನ್ನು ಸನ್ ರೈಸರ್ಸ್ ಹೈದರಾಬಾದ್ ತಂಡದ ಜವಾಬ್ದಾರಿ ನ್ಯೂಜಿಲೆಂಡ್ ನ ದಿಗ್ಗಜ ನಾಯಕ ಕೇನ್ ವಿಲಿಯಮ್ಸನ್ ಕೈಯಲ್ಲಿದೆ. ಕಳೆದ ವರ್ಷ ಋತುವಿನ ಮಧ್ಯದಲ್ಲಿ ವಿಲಿಯಮ್ಸನ್ ಅವರನ್ನು ನಾಯಕರನ್ನಾಗಿ ಮಾಡಲಾಯಿತು.
Published On - 8:42 am, Sat, 19 March 22