ಟಿ20 ಕ್ರಿಕೆಟ್ ಎಂದರೆ ಅದು ಬ್ಯಾಟರ್ ಗಳ ಆಟವೆಂಬ ಮಾತಿದೆ. ಆದರೆ ಇದರಲ್ಲಿ ಬೌಲರ್ಗಳು ಕೂಡ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಡೆತ್ ಓವರ್ನಲ್ಲಿ ಬೌಲಿಂಗ್ ಮಾಡುವವರಿಗಂತು ಭರ್ಜರಿ ಬೇಡಿಕೆ ಇದೆ. ಇಂಡಿಯನ್ ಪ್ರೀಮಿಯರ್ ಲೀಗ್ ನಿಂದ ಕೂಡ ಅನೇಕ ಬೌಲರ್ಗಳು ಬೆಳಕಿಗೆ ಬಂದಿದ್ದಾರೆ. ಅದರಲ್ಲೂ ಮೊದಲ ಓವರ್ ನಲ್ಲಿ ವಿಕೆಟ್ ಗಳನ್ನು ಕೀಳುವ ಬೌಲರ್ ಗಳು ಹೆಚ್ಚು ಅಪಾಯಕಾರಿಯಾಗಿದ್ದಾರೆ. ಸದ್ಯ ಐಪಿಎಲ್ ನ ಮೊದಲ ಓವರ್ ನಲ್ಲೇ ಅತಿ ಹೆಚ್ಚು ವಿಕೆಟ್ ಕಿತ್ತ ಬೌಲರ್ ಗಳು ಯಾರು ಎಂಬುದನ್ನು ನೋಡೋಣ.
ಈ ಸಾಲಿನಲ್ಲಿ ಭುವನೇಶ್ವರ್ ಕುಮಾರ್ ಮುಂಚೂಣಿಯಲ್ಲಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ನ ಈ ಅನುಭವಿ ವೇಗಿ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಇನಿಂಗ್ಸ್ನ ಮೊದಲ ಓವರ್ ನಲ್ಲಿ 19 ವಿಕೆಟ್ ಗಳನ್ನು ಪಡೆದಿದ್ದಾರೆ. ಐಪಿಎಲ್ ನ 132 ಪಂದ್ಯಗಳಲ್ಲಿ 142 ವಿಕೆಟ್ ಗಳನ್ನು ಕಿತ್ತಿದ್ದಾರೆ.
Published On - 9:29 am, Sat, 26 March 22