AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಹೂವು ಒಮ್ಮೆ ಬಾಡಿದರೆ ಅರಳುವುದು 12 ವರ್ಷಗಳ ನಂತರವೆ; ಇಲ್ಲಿದೆ ಅಪರೂಪದ ಹೂವು

Neelakurinji Flower: ಸಾಮಾನ್ಯವಾಗಿ ಕೆಲವು ಮರಗಳು ಋತುಮಾನಕ್ಕೆ ಅನುಗುಣವಾಗಿ ಹೂ ಬಿಡುತ್ತವೆ. ಇನ್ನೂ ಕೆಲವು ತಿಂಗಳುಗಳ ಅವಧಿಯಲ್ಲಿ ಅರಳುತ್ತವೆ. 12 ವರ್ಷಗಳಿಗೊಮ್ಮೆ ಅರಳುವ ಅಪರೂಪದ ಸಸ್ಯವಿದೆ ಎಂದು ಯಾರಿಗಾದರೂ ತಿಳಿದಿದೆಯೇ?

ಗಂಗಾಧರ​ ಬ. ಸಾಬೋಜಿ
|

Updated on:Mar 26, 2022 | 2:52 PM

ಈ ವರ್ಷ ಈ ಹೂವು ಅರಳಿದರೆ.. ಮತ್ತೆ ನೋಡಲು 2034ರವರೆಗೆ ಕಾಯಬೇಕು. ಇದರ ವಿಶಿಷ್ಟತೆಯೆಂದರೆ ಇದು ಭಾರತದಲ್ಲಿ ಮಾತ್ರ ಬೆಳೆಯುತ್ತದೆ.

1 / 5
ನೀಲಕುರಿಂಜಿ ಹೂವುಗಳನ್ನು ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ನೀಲಕುರಿಂಜಿ ಸಾಮಾನ್ಯ ಹೂವಲ್ಲ. ಬಹಳ ಅಪರೂಪದ ಹೂವು. ಈ ಹೂವುಗಳನ್ನು ನೋಡಲು 12 ವರ್ಷಗಳು ಬೇಕಾಗುತ್ತದೆ. ನೀಲಕುರಿಂಜಿ ಒಂದು ಮೊನೊಕಾರ್ಪಿಕ್ ಸಸ್ಯ. ಅದು ಅರಳಿದ ತಕ್ಷಣ ಮಸುಕಾಗುತ್ತದೆ.

2 / 5
ಈ ಹೂವು ಒಮ್ಮೆ ಬಾಡಿದರೆ ಅರಳುವುದು 12 ವರ್ಷಗಳ ನಂತರವೆ; ಇಲ್ಲಿದೆ ಅಪರೂಪದ ಹೂವು

ಹೂವು ಒಣಗಿದ ನಂತರ ಮರುನಾಟಿ ಮಾಡಲು 12 ವರ್ಷಗಳು ಬೇಕಾಗುತ್ತದೆ. ನೀಲಮಣಿ ಸಾಮಾನ್ಯವಾಗಿ ಆಗಸ್ಟ್ ನಿಂದ ಅಕ್ಟೋಬರ್​​ವರೆಗೆ ಮಾತ್ರ ಅರಳುತ್ತದೆ.

3 / 5
ಈ ಹೂವು ಒಮ್ಮೆ ಬಾಡಿದರೆ ಅರಳುವುದು 12 ವರ್ಷಗಳ ನಂತರವೆ; ಇಲ್ಲಿದೆ ಅಪರೂಪದ ಹೂವು

ನೀಲಕುರಿಂಜಿಯ ಇನ್ನೊಂದು ವೈಶಿಷ್ಟ್ಯವೆಂದರೆ ಅದು ಭಾರತದಲ್ಲಿ ಅರಳುತ್ತದೆ. ಭಾರತ ಬಿಟ್ಟು ಜಗತ್ತಿನ ಯಾವುದೇ ದೇಶದಲ್ಲೂ ಇದು ಅರಳುವುದಿಲ್ಲ. ನೀಲಕುರಿಂಜಿ ಮುಖ್ಯವಾಗಿ ಕೇರಳದಲ್ಲಿ ಅರಳುತ್ತದೆ. ಕೇರಳ ಬಿಟ್ಟರೆ ತಮಿಳುನಾಡಿನಲ್ಲಿ ಈ ಹೂವುಗಳು ಅಪರೂಪ.

4 / 5
ಈ ಹೂವು ಒಮ್ಮೆ ಬಾಡಿದರೆ ಅರಳುವುದು 12 ವರ್ಷಗಳ ನಂತರವೆ; ಇಲ್ಲಿದೆ ಅಪರೂಪದ ಹೂವು

ನೀಲಕುರಿಂಜಿ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕೇರಳಕ್ಕೆ ಬರುತ್ತಾರೆ. ನೀಲಕುರಿಂಜಿಯನ್ನು ನೋಡಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ಪ್ರಪಂಚದಾದ್ಯಂತದ ಅನೇಕ ಪ್ರವಾಸಿಗರು ಕೇರಳಕ್ಕೆ ಬರುತ್ತಾರೆ.

5 / 5

Published On - 2:28 pm, Sat, 26 March 22

Follow us