ಸತತ 2ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್‌ ಗೆದ್ದ ಯಾನಿಕ್ ಸಿನ್ನರ್; ಅಲೆಕ್ಸಾಂಡರ್​ಗೆ ಮತ್ತದೇ ನಿರಾಸೆ

Updated on: Jan 26, 2025 | 5:42 PM

Australian Open 2025: ಯಾನಿಕ್ ಸಿನ್ನರ್ 2025ರ ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು 6-3, 7-6 (4), 6-3 ಅಂತರದಿಂದ ಸೋಲಿಸಿ ಚಾಂಪಿಯನ್ ಆಗಿದ್ದಾರೆ. ಇದು ಅವರ ಸತತ ಎರಡನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಮತ್ತು ಕಳೆದ 13 ತಿಂಗಳುಗಳಲ್ಲಿ ಮೂರನೇ ಗ್ರ್ಯಾಂಡ್ ಸ್ಲಾಮ್ ಗೆಲುವಾಗಿದೆ. ಇತ್ತ ಅಲೆಗ್ಸಾಂಡರ್ ಜ್ವೆರೆವ್ ಫೈನಲ್‌ಗೆ ತಲುಪಿದರೂ, ಸಿನ್ನರ್‌ರ ಶ್ರೇಷ್ಠ ಆಟಕ್ಕೆ ಮಣಿಯಬೇಕಾಯಿತು.

1 / 6
ಇಟಾಲಿಯನ್ ಸ್ಟಾರ್ ಟೆನಿಸ್ ಆಟಗಾರ ಯಾನಿಕ್ ಸಿನ್ನರ್ 2025 ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಭಾನುವಾರ 2 ಗಂಟೆ 42 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಫೈನಲ್‌ ಪಂದ್ಯದಲ್ಲಿ ಯಾನಿಕ್ ಸಿನ್ನರ್ ಅವರು ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು 6-3, 7-6 (4), 6-3 ನೇರ ಸೆಟ್‌ಗಳಿಂದ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಇಟಾಲಿಯನ್ ಸ್ಟಾರ್ ಟೆನಿಸ್ ಆಟಗಾರ ಯಾನಿಕ್ ಸಿನ್ನರ್ 2025 ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಭಾನುವಾರ 2 ಗಂಟೆ 42 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಫೈನಲ್‌ ಪಂದ್ಯದಲ್ಲಿ ಯಾನಿಕ್ ಸಿನ್ನರ್ ಅವರು ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು 6-3, 7-6 (4), 6-3 ನೇರ ಸೆಟ್‌ಗಳಿಂದ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

2 / 6

ಇದರ ಜೊತೆಗೆ ಹಾಲಿ ಚಾಂಪಿಯನ್ ಪಟ್ಟವನ್ನು ತಮ್ಮಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅನಾರೋಗ್ಯದ ನಡುವೆಯೂ ಶ್ರೇಷ್ಠ ಪ್ರದರ್ಶನ ನೀಡಿದ ಯಾನಿಕ್ ಸಿನ್ನರ್, ಸತತ ಎರಡನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

3 / 6

ಪ್ರಸ್ತುತ ಆಸ್ಟ್ರೇಲಿಯನ್ ಓಪನ್‌ ಗೆದ್ದಿರುವ ಯಾನಿಕ್ ಸಿನ್ನರ್​ಗೆ ಇದು ಕಳೆದ 13 ತಿಂಗಳುಗಳಲ್ಲಿ ಮೂರನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯಾಗಿದೆ. ಇದಕ್ಕೂ ಮೊದಲು ಅವರು 2024 ರ ಯುಎಸ್ ಓಪನ್ ಮತ್ತು ಕಳೆದ ಬಾರಿಯ ಆಸ್ಟ್ರೇಲಿಯನ್ ಓಪನ್ ಗೆಲ್ಲುವಲ್ಲಿಯೂ ಸಫಲರಾಗಿದ್ದರು. ಮತ್ತೊಂದೆಡೆ, ವಿಶ್ವ ನಂ.2 ಅಲೆಕ್ಸಾಂಡರ್ ಜ್ವೆರೆವ್ ಮತ್ತೊಮ್ಮೆ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆಲ್ಲುವುದರಿಂದ ವಂಚಿತರಾದರು.

4 / 6

ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾದ ಅಲೆಕ್ಸಾಂಡರ್ ಜ್ವೆರೆವ್ 2015 ರಿಂದ ಗ್ರ್ಯಾಂಡ್ ಸ್ಲಾಮ್ ಆಡುತ್ತಿದ್ದು, 3 ಬಾರಿ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಪ್ರತಿ ಬಾರಿಯೂ ಸೋಲನ್ನು ಎದುರಿಸಿದ್ದಾರೆ. ಈ ಬಾರಿ ಜ್ವೆರೆವ್ ಫೈನಲ್ ತಲುಪಲು ಹೆಚ್ಚಿನ ತೊಂದರೆ ಎದುರಿಸಬೇಕಾಗಲಿಲ್ಲ. ಏಕೆಂದರೆ, 24 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ನೊವಾಕ್ ಜೊಕೊವಿಕ್ ಅವರನ್ನು ಸೆಮಿ-ಫೈನಲ್‌ನಲ್ಲಿ ಎದುರಿಸಿದರಾದರೂ, ಜೊಕೊವಿಕ್ ಕಾಲಿನ ಗಾಯದಿಂದಾಗಿ ಒಂದು ಸೆಟ್‌ನ ನಂತರ ಪಂದ್ಯದಿಂದ ಹಿಂದೆ ಸರಿಯಲು ನಿರ್ಧರಿಸಿದರು.

5 / 6

ಹೀಗಾಗಿ ಅಲೆಕ್ಸಾಂಡರ್ ಜ್ವೆರೆವ್ ಯಾವುದೇ ತೊಂದರೆ ಇಲ್ಲದೆ ಫೈನಲ್‌ಗೆ ಎಂಟ್ರಿಕೊಟ್ಟಿದ್ದರು. ಮತ್ತೊಂದೆಡೆ, ಮೂರು ಬಾರಿ ಗ್ರ್ಯಾಂಡ್ ಸ್ಲಾಮ್‌ನ ಫೈನಲ್‌ಗೆ ಎಂಟ್ರಿಕೊಟ್ಟಿರುವ ಸಿನ್ನರ್, ಮೂರು ಬಾರಿಯೂ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

6 / 6

ಸತತ ಎರಡನೇ ಬಾರಿಗೆ ಚಾಂಪಿಯನ್ ಆಗುವ ಮೂಲಕ ಯಾನಿಕ್ ಸಿನ್ನರ್ ಅವರು ಆಸ್ಟ್ರೇಲಿಯನ್ ಓಪನ್ ಇತಿಹಾಸದಲ್ಲಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಂಡ 11 ನೇ ಆಟಗಾರರಾಗಿದ್ದಾರೆ. ಮತ್ತೊಂದೆಡೆ, ಅವರು ಜಿಮ್ ಕೊರಿಯರ್ (1992 ಮತ್ತು 1993) ನಂತರ ಸತತ ಎರಡು ಬಾರಿ ಈ ಪ್ರಶಸ್ತಿಯನ್ನು ಗೆದ್ದ ಅತ್ಯಂತ ಕಿರಿಯ ಆಟಗಾರ ಎಂಬ ಮೈಲಿಗಲ್ಲನ್ನು ನಿರ್ಮಿಸಿದ್ದಾರೆ.

Loading...
Unable to load recommendations.
Follow Us