Updated on: Jun 04, 2023 | 10:25 PM
ಕಾರ ಹುಣ್ಣಿಮೆ ಕರಕೊಂಡು ಬಂತು, ಹೋಳಿ ಹುಣ್ಣಿಮೆ ಹೊಯ್ಕೊಂಡು ಹೋಯ್ತು ಎಂದು ಉತ್ತರ ಕರ್ನಾಟಕದಲ್ಲಿ ಜನಪದರಾಡುವ ಮಾತು. ಮಳೆಗಾಲದ ಆರಂಭದ ಸೂಚನೆಯೂ ಈ ವೇಳೆ ಸಿಗುತ್ತದೆ.
ರಾಜ್ಯದಲ್ಲಿ ಇಂದು ಕಾರಹುಣ್ಣಿಮೆ ಹಬ್ಬ. ಈ ಹಿನ್ನೆಲೆ ರೈತಾಪಿ ಜನರು ಎತ್ತುಗಳನ್ನು ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ.
ಕಲಬುರಗಿ ಜಿಲ್ಲೆಯಲ್ಲಿ ಕಾರ ಹುಣ್ಣಿಮೆ ಅಂಗವಾಗಿ ಗ್ರಾಮಸ್ಥರು ಎತ್ತಿನ ಬಂಡಿ ಸ್ಪರ್ಧೆ ಆಯೋಜಿಸಿದ್ದರು. ಆ ಮೂಲಕ ರೈತರು ಹಬ್ಬ ಆಚರಿಸಿ ಸಂಭ್ರಮಿಸಿದರು.
ಇತ್ತ ವಿಜಯಪುರ ಜಿಲ್ಲೆಯಲ್ಲಿಯೂ ಕಾರ ಹುಣ್ಣಿಮೆ ಹಬ್ಬವನ್ನು ಆಚರಣೆ ಮಾಡಲಾಗಿದೆ. ಎತ್ತಿನ ಬಂಡಿ ಸ್ಪರ್ಧೆಯಲ್ಲಿ ಬಂಡಿ ಹೋಗಿ ವಾಪಸ್ ಬರುವವರೆಗೂ ಸುರಕ್ಷಿತವಾಗಿ ಬರಬೇಕೆಂಬ ನಿಮಯವಿದ್ದು, ಏನಾದರೂ ಅವಘಡವಾದರೆ ಅಶುಭ ಘಟನೆಗಳು ನಡೆಯುತ್ತವೆ ಎಂಬ ನಂಬಿಕೆ ಇದೆ,
ಕಾರ ಹುಣ್ಣಿಮೆ ಹಬ್ಬದಂದು ಎತ್ತಿನ ಬಂಡಿ ಸ್ಪರ್ಧೆ ಮಾಡುವುದು ಕಳೆದ ನೂರಾರು ವರ್ಷಗಳಿಂದ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ.
Published On - 7:09 pm, Sun, 4 June 23