
ಕವಲೆದುರ್ಗ ಕೋಟೆ ಮಲೆನಾಡಿನ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿರುವ ಕವಲೇದುರ್ಗವು ಹಚ್ಚ ಹಸಿರಿನ ಪ್ರಕೃತಿಯ ನಡುವೆ ಮೈಯೊಡ್ಡಿ ಮಲಗಿದಂತಿದೆ. ತೀರ್ಥಹಳ್ಳಿ ತಾಲೂಕಿನಿಂದ ಸುಮಾರು 18 ಕಿ.ಮೀ ಗಳಷ್ಟು ದೂರದಲ್ಲೇ ಈ ಆಕರ್ಷಕ ಪ್ರವಾಸಿ ತಾಣವಿದೆ. ಒಂಬತ್ತನೇ ಶತಮಾನದ ಐತಿಹಾಸಿಕ ಕೋಟೆಯಾಗಿದ್ದು, ಶತಮಾನಗಳ ಹಿಂಡೆ ರಾಜವೈಭೋಗದಿಂದ ಮೆರೆಯುತ್ತಿದ್ದ ಕವಲೆದುರ್ಗ ಈಗ ಪಾಳುಬಿದ್ದ ಕೋಟೆಯಾಗಿದೆ. ಆದರೆ ಇವತ್ತಿಗೂ ಇಲ್ಲಿ ನಾನಾ ರೀತಿಯ ಆಕರ್ಷಣೆಯನ್ನು ಕಾಣಬಹುದು.

16 ನೇ ಶತಮಾನದಲ್ಲಿ ಕೆಳದಿ ನಾಯಕರ ಆಳ್ವಿಕೆಗೆ ಒಳಪಟ್ಟಿದ್ದ ಈ ಕೋಟೆಯು ಕೆಳದಿ ಸಂಸ್ಥಾನದ ನಾಲ್ಕನೇಯ ಹಾಗೂ ಕೊನೆಯ ರಾಜಧಾನಿಯಾಗಿತ್ತು.

ಈ ಕವಲೆದುರ್ಗಯು ಮೂರು ಸುತ್ತುಗಳ ಕಲ್ಲಿನ ಗೋಡೆಗಳನ್ನು ಹೊಂದಿದೆ. ಅರಮನೆ, ಸ್ನಾನದ ತೊಟ್ಟಿ, ಕಾವಲು ಕೊಠಡಿಗಳು ಮತ್ತು ಶಸ್ತ್ರಾಸ್ತ್ರ ಗೋದಾಮಿನ ಕೆಲವು ಅವಶೇಷಗಳನ್ನು ಕಾಣಬಹುದು.

ಕೋಟೆಯ ಮೇಲೆ ಸಿಹಿನೀರಿನ ಕೊಳವಿದ್ದು, ಬೆಟ್ಟದ ಮೇಲೆ ಶ್ರೀಕಾಂಥೇಶ್ವರ ದೇವಸ್ಥಾನ ಮತ್ತು ನಂದಿ ಮಂಟಪವು ಪ್ರವಾಸಿಗರ ಗಮನ ಸೆಳೆಯುತ್ತವೆ.

ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತ ಕವಲೆದುರ್ಗ ಕೋಟೆಯ ಮೇಲ್ಭಾಗದವರೆಗೆ ನಡೆದುಕೊಂಡು ಹೋಗಬಹುದು. ಚಾರಣ ಪ್ರಿಯರಿಗೆ ಕವಲೆದುರ್ಗವನ್ನು ಅತ್ಯುತ್ತಮ ಸ್ಥಳವೆನ್ನಬಹುದು.

ಕವಲೆ ದುರ್ಗ ಕೋಟೆಯನ್ನು ನಡೆದು ಕೊಂಡು ಹೋಗಿ ಈ ಸ್ಥಳವನ್ನು ತಲುಪಲು ಎರಡು ಮೂರು ಗಂಟೆಗಳು ಬೇಕಾಗುತ್ತದೆ. ಪ್ರಕೃತಿಯ ಸೊಬಗಿನಿಂದ ಕಂಗೊಳಿಸುವ ಈ ಕವಲೆದುರ್ಗ ಕೋಟೆಯ ತುತ್ತತುದಿಯಲ್ಲಿ ನಿಂತು ಸಹ್ಯಾದ್ರಿ ಬೆಟ್ಟಗಳ ಸಾಲುಗಳನ್ನು ಕಣ್ತುಂಬಿಸಿಕೊಳ್ಳುವುದೇ ಕಣ್ಣಿಗೆ ಹಬ್ಬ. ಹವಾಮಾನ ವರದಿ ಇಲ್ಲಿದೆ
Published On - 11:49 am, Fri, 3 May 24