ಅನ್ನ, ನೀರಿನಿಂದ ಹಿಡಿದು ಅಂತ್ಯಕ್ರಿಯೆವರೆಗೆ, ವಯನಾಡು ಭೂಕುಸಿತ ಸ್ಥಳದಲ್ಲಿ ಬೀಡುಬಿಟ್ಟಿರುವ ಸೇವಾ ಭಾರತಿ ಸ್ವಯಂಸೇವಕರು

Updated on: Jul 31, 2024 | 12:09 PM

ಕೇರಳದ ವಯನಾಡಿನಲ್ಲಿ ಭೂಕುಸಿತದ ನಂತರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈ ದುರಂತದಲ್ಲಿ ಇಲ್ಲಿಯವರೆಗೆ 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಂತ್ರಸ್ತರ ನೆರವಿಗೆ ಅನೇಕ ಜನರು ಮತ್ತು ಸಂಘ ಸಂಸ್ಥೆಗಳು ಮುಂದೆ ಬರುತ್ತಿವೆ. ಸೇವಾ ಭಾರತಿ ಸ್ವಯಂಸೇವಕರು ಸಹ ಜನರಿಗೆ ಸಹಾಯ ಮಾಡುವಲ್ಲಿ ನಿರತರಾಗಿದ್ದಾರೆ.

1 / 6
ಕೇರಳದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಇದೀಗ ಗುಡ್ಡಗಳು ಕುಸಿದು ಪ್ರವಾಹ ಸ್ಥಿತಿಯೂ ನಿರ್ಮಾಣವಾಗಿದೆ. ಎನ್​ಡಿಆರ್​ಎಫ್​ ಹಾಗೂ ಇತರರ ಜತೆ ರಕ್ಷಣಾ ಕಾರ್ಯದಲ್ಲಿ ಸೇವಾ ಭಾರತಿ ಕೂಡ ಕೈಜೋಡಿಸಿದೆ.

ಕೇರಳದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಇದೀಗ ಗುಡ್ಡಗಳು ಕುಸಿದು ಪ್ರವಾಹ ಸ್ಥಿತಿಯೂ ನಿರ್ಮಾಣವಾಗಿದೆ. ಎನ್​ಡಿಆರ್​ಎಫ್​ ಹಾಗೂ ಇತರರ ಜತೆ ರಕ್ಷಣಾ ಕಾರ್ಯದಲ್ಲಿ ಸೇವಾ ಭಾರತಿ ಕೂಡ ಕೈಜೋಡಿಸಿದೆ.

2 / 6

ಕೇಳದ ಪ್ರವಾಹ ಪೀಡಿತ ಪ್ರದೇಶದಲ್ಲಿ ನಿರಾಶ್ರಿತರಿಗೆ ಆಹಾರ ಒದಗಿಸುವುದು, ವೈದ್ಯಕೀಯ ವ್ಯವಸ್ಥೆಯಿಂದ ಹಿಡಿದು ಶವಗಳ ಅಂತ್ಯಕ್ರಿಯೆಯವರೆಗೂ ಸೇವಾ ಭಾರತಿ ಸ್ವಯಂಸೇವಕರು ಕೆಲಸ ಮಾಡುತ್ತಿದ್ದಾರೆ.

3 / 6

ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನೆ, ವಾಯುಪಡೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡಗಳು ಹಗಲು ರಾತ್ರಿ ಎನ್ನದೇ ಜನರಿಗಾಗಿ ಹುಡುಕಾಟ ನಡೆಸುತ್ತಿವೆ. ಇದರೊಂದಿಗೆ ಸೇವಾ ಭಾರತಿಯ ಸ್ವಯಂಸೇವಕರು ಸಹ ಮುಂಚೂಣಿಯಲ್ಲಿದ್ದಾರೆ ಮತ್ತು ಜನರಿಗೆ ಸಹಾಯ ಮಾಡುವಲ್ಲಿ ನಿರತರಾಗಿದ್ದಾರೆ.

4 / 6

ಸದ್ಯ ವಯನಾಡಿನ ಆಸ್ಪತ್ರೆಗಳಲ್ಲಿ ಜನರ ದಂಡೇ ಇದೆ. ಮೃತ ದೇಹಗಳನ್ನು ಗುರುತಿಸಲಾಗುತ್ತಿದ್ದು, ಜನರು ಭಯಭೀತ ಕಣ್ಣುಗಳಿಂದ ತಮ್ಮ ಪ್ರೀತಿಪಾತ್ರರನ್ನು ಹುಡುಕುತ್ತಿದ್ದಾರೆ. ಬದುಕುಳಿಯದವರನ್ನು ಸ್ಟ್ರೆಚರ್‌ಗಳಲ್ಲಿ ಹೊರತೆಗೆಯಲಾಯಿತು, ಸುರಕ್ಷಿತವಾಗಿ ಹೆಲಿಕಾಪ್ಟರ್​ನಲ್ಲಿ ಹಿಂದಿರುಗಿದರು.

5 / 6

ವಯನಾಡಿನಲ್ಲಿ ರಾತ್ರಿ ವೇಳೆ ಮೂರು ಭೂಕುಸಿತಗಳು ಸಂಭವಿಸಿವೆ, ಅನೇಕ ಹಳ್ಳಿಗಳು ಕೊಚ್ಚಿಹೋಗಿದ್ದು, ಇದುವರೆಗೆ 150ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.

6 / 6

ಕೇರಳದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಇದೇ ಕಾರಣಕ್ಕೆ ವಯನಾಡಿನಲ್ಲಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಕಣ್ಣು ಹಾಯಿಸಿದಷ್ಟು ದೂರ ನೀರೇ ಗೋಚರಿಸುತ್ತಿದೆ.

Published On - 12:09 pm, Wed, 31 July 24

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us