
ಕೋಲಾರ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ ಮೂವರು ಬೈಕ್ ಹಾಗೂ ಮೊಬೈಲ್ ಮೂವರು ಕಳ್ಳರನ್ನು ಬಂಧಿಸಿದ್ದು, ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬೈಕ್, ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತರಿಂದ 30 ಲಕ್ಷ ರೂ, ಮೌಲ್ಯದ 30 ಬೈಕ್ ಮತ್ತು 3 ಲಕ್ಷ ರೂ. ಮೌಲ್ಯದ 50 ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕೋಲಾರದ ಕಾರಂಜಿಕಟ್ಟೆ ಬಡಾವಣೆಯ ಸಂಜಯ್ ಮತ್ತು ಸೈಯದ್ ಇಮ್ರಾನ್, ಕುಂಬಾರಪೇಟೆ ನಿವಾಸಿ ನಂದಿ ಬಂಧಿತ ಆರೋಪಿಗಳು.

ಈ ಆರೋಪಿಗಳು ಕೋಲಾರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕಳ್ಳತನ ಮಾಡಿಡುತ್ತಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ(ಎಸ್ಪಿ) ನಾರಾಯಣ್ ಮಾಹಿತಿ ನೀಡಿದ್ದಾರೆ.

ಸಂಜಯ್ ಮತ್ತು ಸೈಯದ್ ಇಮ್ರಾನ್, ನಂದಿ ಸೇರಿ ಕಳ್ಳತನ ಮಾಡಿರುವ 3 ಲಕ್ಷ ರೂ. ಮೌಲ್ಯದ 50 ಮೊಬೈಲ್ ಫೋನ್ಗಳನ್ನು ಪೊಲೀಸರು ಜೋಡಿಸಿ ಇಟ್ಟಿರುವುದು.

ಬಂಧಿತ ಮೂವರಿಂದ ವಶಕ್ಕೆ ಪಡೆದುಕೊಂಡ ಸುಮಾರು 30 ಲಕ್ಷ ರೂ, ಮೌಲ್ಯದ 30 ಬೈಕ್ಗಳನ್ನು ಪೊಲೀಸರು ಸಾಲಾಗಿ ನಿಲ್ಲಿಸಿರುವುದು.