ಎರಡೇ ದಿನ ಬಾಕಿ: ಸೆಪ್ಟೆಂಬರ್ 26ಕ್ಕೆ ಲಾವಾ ಬ್ಲೇಜ್ ಪ್ರೊ 5G ಬಿಡುಗಡೆ
Lava Blaze Pro 5G Launch Date: ಲಾವಾ ಕಂಪನಿ ತನ್ನ ಲಾವಾ ಬ್ಲೇಜ್ ಪ್ರೊ 5G ಅನ್ನು ಭಾರತದಲ್ಲಿ ಸೆಪ್ಟೆಂಬರ್ 26 ರಂದು ಮಧ್ಯಾಹ್ನ 12 ಗಂಟೆಗೆ ಯೂಟ್ಯೂಬ್ ವಿಡಿಯೋ ಮೂಲಕ ಪ್ರಾರಂಭಿಸುವುದಾಗಿ ಘೋಷಿಸಿದೆ. ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್), ಲಾವಾ ಇಂಟರ್‌ನ್ಯಾಶನಲ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಹಾರ ಮುಖ್ಯಸ್ಥ ಸುನಿಲ್ ರೈನಾ ಈ ಬಗ್ಗೆ ಖಚಿತಪಡಿಸಿದ್ದಾರೆ.
1 / 6
ಭಾರತದ ಪ್ರಸಿದ್ಧ ಸ್ಮಾರ್ಟ್ಫೋನ್ ತಯಾರಿಕ ಕಂಪನಿ ಲಾವಾ ಇದೀಗ ಹೊಸ ಸ್ಮಾರ್ಟ್ಫೋನ್ ಒಂದನ್ನು ಬಿಡುಗಡೆ ಮಾಡುವ ಬಗ್ಗೆ ಘೋಷೆಣೆ ಮಾಡಿದೆ. ಕಳೆದ ವರ್ಷ ದೇಶದಲ್ಲಿ ಲಾವಾ ಬ್ಲೇಜ್ 5G ಅನ್ನು ಅನಾವರಣ ಮಾಡಿ ಸದ್ದು ಮಾಡಿದ್ದ ಕಂಪನಿ ಇದೀಗ ಲಾವಾ ಬ್ಲೇಜ್ ಪ್ರೊ 5G (Lava Blaze Pro 5G) ಫೋನ್ ರಿಲೀಸ್ ಮಾಡಲಿದೆ.
2 / 6
ಲಾವಾ ಕಂಪನಿ ತನ್ನ ಲಾವಾ ಬ್ಲೇಜ್ ಪ್ರೊ 5G ಅನ್ನು ಭಾರತದಲ್ಲಿ ಸೆಪ್ಟೆಂಬರ್ 26 ರಂದು ಮಧ್ಯಾಹ್ನ 12 ಗಂಟೆಗೆ ಯೂಟ್ಯೂಬ್ ವಿಡಿಯೋ ಮೂಲಕ ಪ್ರಾರಂಭಿಸುವುದಾಗಿ ಘೋಷಿಸಿದೆ. ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್), ಲಾವಾ ಇಂಟರ್‌ನ್ಯಾಶನಲ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಹಾರ ಮುಖ್ಯಸ್ಥ ಸುನಿಲ್ ರೈನಾ ಈ ಬಗ್ಗೆ ಖಚಿತಪಡಿಸಿದ್ದಾರೆ.
3 / 6
ಮೀಡಿಯಾ ಟೆಕ್ ಡೈಮೆನ್ಸಿಟಿ 6020 ಚಿಪ್‌ಸೆಟ್‌ನೊಂದಿಗೆ 5G-ಸಕ್ರಿಯಗೊಳಿಸಿದ ಈ ಹೊಸ ಲಾವಾ ಫೋನ್ ಬಗ್ಗೆ ಟಿಪ್‌ಸ್ಟರ್ ಅಭಿಷೇಕ್ ಯಾದವ್ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಟಿಪ್‌ಸ್ಟರ್ ಮುಂಬರುವ ಲಾವಾ ಸ್ಮಾರ್ಟ್‌ಫೋನ್‌ನ ಹಿಂದಿನ ಪ್ಯಾನೆಲ್‌ನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಇದರ ಬೆಲೆ 15,000 ರೂ. ಗಿಂತ ಕಡಿಮೆ ಇರುತ್ತದೆ ಎಂದು ಉಲ್ಲೇಖಿಸಿದ್ದಾರೆ.
4 / 6
ಗಮನಿಸಬೇಕಾದ ಅಂಶವೆಂದರೆ, ಲಾವಾ ಬ್ಲೇಜ್ 5G ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆ ಆಗಿತ್ತು. ಇದರ 4GB RAM ರೂಪಾಂತರದ ಬೆಲೆ 10,499 ರೂ., 6GB RAM ರೂಪಾಂತರ 11,999 ರೂ. ಮತ್ತು 8GB RAM ರೂಪಾಂತರವು 128GB ಆಂತರಿಕ ಸಂಗ್ರಹಣೆ 12,999 ರೂ. ಬೆಲೆಗೆ ಲಭ್ಯವಿದೆ.
5 / 6
ಇನ್ನು ಕಳೆದ ವಾರ ಲಾವಾ ಕಂಪನಿ ಬ್ಲೇಜ್ ಪ್ರೊ 4ಜಿ ಆವೃತ್ತಿಯನ್ನು ಪರಿಚಯಿಸಿತ್ತು. ಇದು 6.5-ಇಂಚಿನ IPS LCD ಡಿಸ್ ಪ್ಲೇ ಜೊತೆಗೆ 2.5D ಕರ್ವ್ಡ್ ಸ್ಕ್ರೀನ್ ಮತ್ತು 90Hz ರಿಫ್ರೆಶ್ ದರವನ್ನು ಹೊಂದಿದೆ. ಆಕ್ಟಾ-ಕೋರ್ ಯುನಿಸಾಕ್ T616 ಪ್ರೊಸೆಸರ್ ಮೂಲಕ ರನ್ ಆಗುತ್ತದೆ.
6 / 6
ಈ ಫೋನಿನ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಇದೆ. ಇದು 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು ಡ್ಯುಯಲ್ 2-ಮೆಗಾಪಿಕ್ಸೆಲ್ ಕ್ಯಾಮೆರಾ ಸಂವೇದಕಗಳಿಂದ ಕೂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗ 8-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಲಾವಾ ಬ್ಲೇಜ್ ಪ್ರೊ 4ಜಿ 18W ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಬ್ಯಾಟರಿ ಶಕ್ತಿಯನ್ನು ಪಡೆದಿದೆ.