3 ಐಸಿಸಿ ಪ್ರಶಸ್ತಿಯೊಂದಿಗೆ ವೃತ್ತಿಬದುಕಿಗೆ ವಿದಾಯ ಹೇಳಿದ ದಿಗ್ಗಜ ಅಂಪೈರ್ ಮರೈಸ್ ಎರಾಸ್ಮಸ್..!
Marais Erasmus Retirement: ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದ ನಂತರ ವೃತ್ತಿ ಬದುಕಿಗೆ ವಿದಾಯ ಹೇಳುತ್ತಿರುವುದಾಗಿ ದಕ್ಷಿಣ ಆಫ್ರಿಕಾದ ಅನುಭವಿ ಅಂಪೈರ್ ಮರೈಸ್ ಎರಾಸ್ಮಸ್ ತಿಳಿಸಿದ್ದಾರೆ.
1 / 8
ದಕ್ಷಿಣ ಆಫ್ರಿಕಾದ ಅನುಭವಿ ಅಂಪೈರ್ ಮರೈಸ್ ಎರಾಸ್ಮಸ್ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಪ್ರಸ್ತುತ ನ್ಯೂಜಿಲೆಂಡ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಎರಡು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಅಂಪೈರಿಂಗ್ ಮಾಡುತ್ತಿರುವ ಎರಾಸ್ಮಸ್ ಅವರಿಗೆ ಇದು ಕೊನೆಯ ಸರಣಿ ಆಗಲಿದೆ.
2 / 8
ಫೆಬ್ರವರಿ 27 ರಂದು ತಮ್ಮ 60 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಮರೈಸ್ ಎರಾಸ್ಮಸ್ ಅವರು ಈ ಸರಣಿಯೊಂದಿಗೆ ತಮ್ಮ 18 ವರ್ಷಗಳ ಸುದೀರ್ಘ ಅಂಪೈರಿಂಗ್ ವೃತ್ತಿಜೀವನಕ್ಕೆ ಶಾಶ್ವತವಾಗಿ ವಿದಾಯ ಹೇಳಲಿದ್ದಾರೆ.
3 / 8
ದಕ್ಷಿಣ ಆಫ್ರಿಕಾದ ಅನುಭವಿ ಅಂಪೈರ್ ತಮ್ಮ ಕುಟುಂಬದ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದಾರೆ. ವಾಸ್ತವವಾಗಿ, ಅವನು ಈಗ ತನ್ನ ಜೀವನದ ಹೆಚ್ಚು ಕ್ಷಣಗಳನ್ನು ತನ್ನ ಕುಟುಂಬದೊಂದಿಗೆ ಕಳೆಯಲು ಬಯಸಿದ್ದಾರೆ. ಇದೇ ಕಾರಣಕ್ಕೆ ಅವರು ವೃತ್ತಿಜೀವನದಿಂದ ನಿವೃತ್ತರಾಗಲು ನಿರ್ಧರಿಸಿದ್ದಾರೆ.
4 / 8
ದಕ್ಷಿಣ ಆಫ್ರಿಕಾದ ಬೋಲ್ಯಾಂಡ್ ಕ್ರಿಕೆಟ್ ತಂಡಕ್ಕೆ ಪ್ರಥಮ ದರ್ಜೆ ಕ್ರಿಕೆಟ್ ಆಡುವುದರಿಂದ ಹಿಡಿದು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅನುಭವಿ ಅಂಪೈರ್ ಆಗುವವರೆಗಿನ ಪ್ರಯಾಣವು ಎರಾಸ್ಮಸ್ ಅವರ ಸಾಧನೆಗಳಿಂದ ತುಂಬಿದೆ.
5 / 8
ಅಂಪೈರ್ ಆಗಿ ಅವರ ಅಂತರಾಷ್ಟ್ರೀಯ ವೃತ್ತಿಜೀವನವು 2006 ರಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ವಾಂಡರರ್ಸ್‌ನಲ್ಲಿ ನಡೆದ ಪಂದ್ಯದೊಂದಿಗೆ ಪ್ರಾರಂಭವಾಯಿತು. ಅಂದಿನಿಂದ 2024 ರವರೆಗೆ ಅಂದರೆ 18 ವರ್ಷಗಳಲ್ಲಿ ಅವರು 80 ಟೆಸ್ಟ್‌ಗಳು, 124 ಏಕದಿನ ಪಂದ್ಯಗಳು ಮತ್ತು 43 ಪುರುಷರ ಟಿ20 ಪಂದ್ಯಗಳ ಜೊತೆಗೆ 18 ಮಹಿಳಾ ಟಿ20 ಗಳಲ್ಲಿ ಅಂಪೈರಿಂಗ್ ಮಾಡಿದ್ದಾರೆ.
6 / 8
ಇನ್ನು ತಮ್ಮ ನಿವೃತ್ತಿ ನಿರ್ಧಾರದ ಬ್ಗಗೆ ಪಂದ್ಯಕ್ಕೂ ಮುನ್ನ ಮಾತನಾಡಿದ್ದ ಎರಾಸ್ಮಸ್, ‘ನಾನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಿವೃತ್ತಿ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಹಾಗೆಯೇ ಈ ವರ್ಷದ ಏಪ್ರಿಲ್‌ನಲ್ಲಿ ನನ್ನ ಒಪ್ಪಂದವನ್ನು ಕೊನೆಗೊಳಿಸುವುದಾಗಿ ಐಸಿಸಿಗೆ ತಿಳಿಸಿದ್ದೇನೆ ಮತ್ತು ಅದು ಆಗುತ್ತದೆ’ ಎಂದಿದ್ದಾರೆ.
7 / 8
ಎರಾಸ್ಮಸ್ ಮೂರು ಬಾರಿ (2016, 2017 ಮತ್ತು 2021) ಐಸಿಸಿ ವರ್ಷದ ಅಂಪೈರ್ ಗೌರವಗೂ ಪಾತ್ರರಾಗಿದ್ದಾರೆ. ಹಾಗೆಯೇ ಐದು ಬಾರಿ ಈ ಪ್ರಶಸ್ತಿಯನ್ನು ಗೆದ್ದಿರುವ ಆಸ್ಟ್ರೇಲಿಯಾದ ಸೈಮನ್ ಟೌಫೆಲ್ ನಂತರ ಎರಡನೇ ಸ್ಥಾನದಲ್ಲಿದ್ದಾರೆ.
8 / 8
ಕ್ರಿಕೆಟ್‌ಗೆ ಎರಾಸ್ಮಸ್ ಕೊಡುಗೆ ಕೇವಲ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಈ ಆಟದ ಬಗ್ಗೆ ಅವರ ಉತ್ಸಾಹ ಈಗ ಕ್ರಿಕೆಟ್ ಮೈದಾನದ ಹೊರಗೂ ಗೋಚರಿಸುತ್ತದೆ. ನಿವೃತ್ತಿಯ ನಂತರ, ಅವರು ಈಗ ದಕ್ಷಿಣ ಆಫ್ರಿಕಾದ ಉದಯೋನ್ಮುಖ ಅಂಪೈರ್‌ಗಳಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಾರೆ.
Published On - 2:37 pm, Thu, 29 February 24