Malaysia Masters 2024: ಫೈನಲ್‌ಗೇರಿದ ಪಿವಿ ಸಿಂಧು..! ಪ್ರಶಸ್ತಿ ಸುತ್ತಿನ ಎದುರಾಳಿ ಯಾರು ಗೊತ್ತಾ?
Malaysia Masters 2024: ನಡೆಯುತ್ತಿರುವ ಮಲೇಷ್ಯಾ ಮಾಸ್ಟರ್ಸ್ 500ಟೂರ್ನಿಯಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಸೆಮಿಫೈನಲ್ ಪಂದ್ಯದಲ್ಲಿ ಥಾಯ್ಲೆಂಡ್‌ನ ಆಟಗಾರ್ತಿ ಬುಸಾನನ್ ಒಂಗ್‌ಬಮ್ರುಂಗ್‌ಫಾನ್ ಅವರನ್ನು ಮನಿಸುವ ಮೂಲಕ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
1 / 7
ನಡೆಯುತ್ತಿರುವ ಮಲೇಷ್ಯಾ ಮಾಸ್ಟರ್ಸ್ 500ಟೂರ್ನಿಯಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಸೆಮಿಫೈನಲ್ ಪಂದ್ಯದಲ್ಲಿ ಥಾಯ್ಲೆಂಡ್‌ನ ಆಟಗಾರ್ತಿ ಬುಸಾನನ್ ಒಂಗ್‌ಬಮ್ರುಂಗ್‌ಫಾನ್ ಅವರನ್ನು ಮನಿಸುವ ಮೂಲಕ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
2 / 7
ಸಿಂಧು ಮತ್ತು ಬುಸಾನನ್ ನಡುವಿನ ಈ ಪಂದ್ಯ 88 ನಿಮಿಷಗಳ ಕಾಲ ನಡೆಯಿತು. ಈ ಪಂದ್ಯದ ಮೊದಲ ಸೆಟ್‌ನಲ್ಲಿ ಸಿಂಧು ಸೋಲನ್ನು ಎದುರಿಸಬೇಕಾಯಿತು. ಆದರೆ ಆ ನಂತರ ಅಮೋಘ ಪುನರಾಗಮನ ಮಾಡಿದ ಸಿಂಧು ಮುಂದಿನ ಎರಡು ಸೆಟ್‌ಗಳನ್ನು ಏಕಪಕ್ಷೀಯವಾಗಿ ಗೆದ್ದು ಫೈನಲ್‌ಗೆ ಪ್ರವೇಶಿಸುವಲ್ಲಿ ಯಶಸ್ವಿಯಾದರು.
3 / 7
ಕಳೆದ ಒಂದು ವರ್ಷದಲ್ಲಿ ಸಿಂಧು ಪ್ರಮುಖ ಟೂರ್ನಿಯೊಂದರ ಫೈನಲ್‌ನಲ್ಲಿ ಆಡುತ್ತಿರುವುದು ಇದೇ ಮೊದಲು. ಈ ಟೂರ್ನಿಗೂ ಮುನ್ನ ನಡೆದ ಅನೇಕ ಪಂದ್ಯಾವಳಿಗಳಲ್ಲಿ ಸಿಂಧು ಆಟ ಹೇಳಿಕೊಳ್ಳುವಂತಿರಲಿಲ್ಲ. ಹೀಗಾಗಿ ಮಲೇಷ್ಯಾ ಮಾಸ್ಟರ್ಸ್ 500ಟೂರ್ನಿಗೆ ಸಾಕಷ್ಟು ತಯಾರಿ ಮಾಡಿಕೊಂಡದ್ದ ಸಿಂಧು ಇದೀಗ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
4 / 7
ಸೆಮಿಫೈನಲ್ ಪಂದ್ಯವನ್ನು ಗೆಲ್ಲುವುದು ಪಿವಿ ಸಿಂಧು ಅವರಿಗೆ ಅಷ್ಟೊಂದು ಸುಲಭವಾಗಿರಲಿಲ್ಲ. ಮೊದಲ ಸೆಟ್‌ನಲ್ಲಿ ಥಾಯ್ಲೆಂಡ್‌ನ ಬುಸಾನಾನ್ ವಿರುದ್ಧ 13-21ರಿಂದ ಸೋಲನುಭವಿಸಬೇಕಾಯಿತು. ಆದರೆ ಎರಡನೇ ಸೆಟ್‌ನ ಆರಂಭದೊಂದಿಗೆ ಸಿಂಧು ತನ್ನ ಆಟದ ತಂತ್ರವನ್ನು ಬದಲಾಯಿಸಿದರು ಮತ್ತು ಆಕ್ರಮಣಕಾರಿ ನಿಲುವನ್ನು ಅಳವಡಿಸಿಕೊಂಡರು. ಪರಿಣಾಮವಾಗಿ ಸಿಂಧು 21-16ರಲ್ಲಿ ಎರಡನೇ ಸೆಟ್ ಗೆದ್ದು ಸಮಬಲ ಸಾಧಿಸಿದರು.
5 / 7
ಮೂರನೇ ಸೆಟ್‌ನಲ್ಲಿ ತನ್ನ ಪ್ರಾಬಲ್ಯವನ್ನು ಸಂಪೂರ್ಣವಾಗಿ ಮುಂದುವರೆಸಿದ ಸಿಂಧು ಮೂರನೇ ಸೆಟ್ ಅನ್ನು 21-12 ರಿಂದ ಜಯಿಸುವ ಮೂಲಕ ಪಂದ್ಯ ಗೆದ್ದರು. ಇದು ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಸೂಪರ್ 500 ಟೂರ್ನಿಯಲ್ಲಿ ಸಿಂಧು ಅವರ ವೃತ್ತಿಜೀವನದ ನಾಲ್ಕನೇ ಫೈನಲ್ ಆಗಿದೆ.
6 / 7
ಇದೀಗ ಸಿಂಧು ಫೈನಲ್ ಪಂದ್ಯದಲ್ಲಿ ಚೀನಾದ ಆಟಗಾರ್ತಿ ವಾಂಗ್ ಕ್ಸಿ ಯಿ ಅವರನ್ನು ಎದುರಿಸಬೇಕಾಗಿದೆ. 15ನೇ ಶ್ರೇಯಾಂಕದ ಆಟಗಾರ್ತಿ ಪಿವಿ ಸಿಂಧುಗೆ ಈ ಗೆಲುವು ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ಗೂ ಮುನ್ನ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
7 / 7
ಜುಲೈ 26 ರಿಂದ ಆಗಸ್ಟ್ 11 ರವರೆಗೆ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್‌ಗೆ ಜರ್ಮನಿಯಲ್ಲಿ ತಯಾರಿ ನಡೆಸಲು ಭಾರತೀಯ ಕ್ರೀಡಾ ಸಚಿವಾಲಯ ಇತ್ತೀಚೆಗೆ ಸಿಂಧುಗೆ ಅನುಮೋದನೆ ನೀಡಿತ್ತು.