- Kannada News Photo gallery Moto G04s India Launch on May 30: Know Features, Specifications, Price and other details in Kannada
Moto G04s: ಮೊಟೊರೊಲಾದಿಂದ 10 ಸಾವಿರ ರೂ.ಗೆ ಆಕರ್ಷಕ ಫೀಚರ್ಸ್ನ ಸ್ಮಾರ್ಟ್ ಫೋನ್, ಇಲ್ಲಿದೆ ವಿವರ
ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಕಂಪನಿ ಮೊಟೊರೊಲಾ (Motorola) ಇತ್ತೀಚೆಗೆ ಸರಣಿ ಸ್ಮಾರ್ಟ್ ಫೋನ್‌ಗಳನ್ನು (Smart Phones) ಬಿಡುಗಡೆ ಮಾಡುತ್ತಿದೆ. ಹೊಸ ವೈಶಿಷ್ಟ್ಯಗಳೊಂದಿಗೆ ಬಜೆಟ್ ದರದಲ್ಲಿ ಫೋನ್‌ಗಳನ್ನು ಹೊರತರುತ್ತಿದೆ. ಇದೀಗ ಭಾರತದಲ್ಲಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆಗೆ ಕಂಪನಿ ಮುಂದಾಗಿದೆ. ಮೊಟೊ ಜಿ04ಎಸ್ (Moto G04S) ಹೆಸರಿನಲ್ಲಿ ಬಿಡುಗಡೆಯಾಗಲಿರುವ ಈ ಫೋನ್ ಯಾವೆಲ್ಲ ಫೀಚರ್ಸ್ ಹೊಂದಿರಲಿವೆ? ಬೆಲೆ ಎಷ್ಟು? ಇತ್ಯಾದಿ ವಿವರಗಳು ಇಲ್ಲಿವೆ.
Updated on: May 25, 2024 | 6:02 PM

ಪ್ರಮುಖ ಸ್ಮಾರ್ಟ್‌ಫೋನ್ ತಯಾರಕ ಮೊಟೊರೊಲಾ Moto G04S ಹೆಸರಿನಲ್ಲಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ. ಈ ಫೋನ್ ಇದೇ ತಿಂಗಳ 30 ರಂದು ಬಿಡುಗಡೆಯಾಗಲಿದೆ. ಮೊಟೊರೊಲಾದಿಂದ ಈಗಾಗಲೇ ಬಿಡುಗಡೆಯಾಗಿರುವ ಎಡ್ಜ್ 50 ಫ್ಯೂಷನ್ ಸ್ಮಾರ್ಟ್‌ಫೋನ್ (Moto Edge 50 Fusion) ನ ಮುಂದುವರಿಕೆಯಾಗಿ ಈ ಫೋನ್ ಬಿಡುಗಡೆಯಾಗಲಿದೆ.

ಈ ಸ್ಮಾರ್ಟ್‌ಫೋನ್ HD+ LCD ಪ್ಯಾನೆಲ್ ಹೊಂದಿರಲಿದೆ. ಇದು ಗೊರಿಲ್ಲಾ ಗ್ಲಾಸ್ 3 ಸ್ಕ್ರೀನ್ ಪ್ರೊಟೆಕ್ಷನ್ ಒಳಗೊಂಡಿರಲಿದೆ. ಫೋನ್ ಯುನಿಸೊಕ್ T606 ಆಕ್ಟಾ-ಕೋರ್ ಪ್ರೊಸೆಸರ್ ಜೊತೆಗೆ 4GB RAM ಅನ್ನು ಹೊಂದಿದೆ.

ಈ ಸ್ಮಾರ್ಟ್ ಫೋನ್ 4 GB RAM ಹೊಂದಿದ್ದು 8 GB ವರೆಗೆ ಎಕ್ಸ್ಪಾಂಡ್ ಮಾಡುವ ಆಯ್ಕೆ ನೀಡಲಾಗಿದೆ. 64 GB ಇಂಟರ್ನಲ್ ಮೆಮೊರಿ ನೀಡಲಾಗಿದೆ. Moto G04S ಸ್ಮಾರ್ಟ್‌ಫೋನ್ Dolby Atmos ಆಡಿಯೋ ಹೊಂದಿದೆ. ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಂನೊಂದಿಗೆ ಕಾರ್ಯನಿರ್ವಹಿಸುತ್ತದೆ.

ಈ ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ಗಳೊಂದಿಗೆ AI ಚಾಲಿತ ಬ್ಯಾಕ್ ಕ್ಯಾಮರಾ ಹೊಂದಿದೆ. ಎಲ್ಇಡಿ ಫ್ಲ್ಯಾಶ್ ಆಯ್ಕೆ ನೀಡಲಾಗಿದೆ. ಈ ಫೋನ್ ನೈಟ್ ವಿಷನ್ ಮತ್ತು ಪೊರ್ಟ್ರೈಟ್ ಮೋಡ್ ಸಪೋರ್ಟ್ ಹೊಂದಿರಲಿದೆ.

ಕಪ್ಪು, ನೀಲಿ, ಹಸಿರು ಮತ್ತು ಕಿತ್ತಳೆ ಬಣ್ಣಗಳಲ್ಲಿ ಲಭ್ಯವಿರುವ ಈ ಸ್ಮಾರ್ಟ್‌ಫೋನ್ 5000 mAh ಬ್ಯಾಟರಿ ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ ದರ 10,700 ರೂ. ಆಗಿರಲಿದೆ. ಮಾರುಕಟ್ಟೆಗೆ ಬಿಡುಗಡೆಯಾಗುತ್ತಿರುವ ಸಂದರ್ಭದಲ್ಲಿ ಅನೇಕ ಇ-ಕಾಮರ್ಸ್ ಕಂಪನಿಗಳು ಈ ಫೋನ್ ಮೇಲೆ ವಿವಿಧ ರಿಯಾಯಿತಿಗಳನ್ನು ಘೋಷಿಸಿವೆ.



















