- Kannada News Photo gallery Cricket photos Hardik Pandya Net Worth IPL salary, cars, property details in kannada
200 ರೂ.ಗೆ ಕ್ರಿಕೆಟ್ ಆಡುತ್ತಿದ್ದ ಹಾರ್ದಿಕ್ ಪಾಂಡ್ಯ ಈಗ ಎಷ್ಟು ಕೋಟಿಯ ಒಡೆಯ ಗೊತ್ತಾ?
Hardik Pandya Net Worth: ಒಂದು ಕಾಲದಲ್ಲಿ 200 ರೂ.ಗೆ ಪಂದ್ಯಾವಳಿಗಳನ್ನು ಆಡಿದ್ದ ಹಾರ್ದಿಕ್ ಪಾಂಡ್ಯ ಇಂದು ಕೋಟಿ ಮೌಲ್ಯದ ಆಸ್ತಿಯ ಒಡೆಯ. ಮಾಧ್ಯಮ ವರದಿಗಳ ಪ್ರಕಾರ, ಅವರ ಒಟ್ಟು ಸಂಪತ್ತು ಸುಮಾರು 91 ಕೋಟಿ ರೂ. ಎಂದು ಹೇಳಲಾಗುತ್ತಿದೆ. ಕ್ರಿಕೆಟ್ ಹೊರತಾಗಿ ಹಾರ್ದಿಕ್ ಜಾಹಿರಾತುಗಳಿಂದ ಸಾಕಷ್ಟು ಆದಾಯ ಗಳಿಸುತ್ತಾರೆ.
Updated on: May 25, 2024 | 11:02 PM

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಕಳೆದ ಕೆಲವು ತಿಂಗಳುಗಳಿಂದ ಸುದ್ದಿಯಲ್ಲಿದ್ದಾರೆ. ಮೊದಲು ವೃತ್ತಿ ಬದುಕಿನಲ್ಲಿ ಆದ ಕೆಲವು ಬದಲಾವಣೆಗಳ ಮೂಲಕ ಸಾಕಷ್ಟು ಸುದ್ದಿಯಾಗಿದ್ದ ಹಾರ್ದಿಕ್, ಆ ನಂತರ ಐಪಿಎಲ್‌ನಲ್ಲಿ ತಮ್ಮ ಕಳಪೆ ನಾಯಕತ್ವದಿಂದಾಗಿ ಇಡೀ ಕ್ರಿಕೆಟ್ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದರು.

ಇದರ ಹೊರತಾಗಿಯೂ ಇಡೀ ಆವೃತ್ತಿಯನ್ನು ನಗು ನಗುತ್ತಲೆ ಮುಗಿಸಿದ್ದ ಹಾರ್ದಿಕ್, ಇದೀಗ ವೈಯಕ್ತಿಕ ಜೀವನದ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲೆಡೆ ಸುದ್ದಿಯಾಗಿದ್ದಾರೆ. ವಾಸ್ತವವಾಗಿ ಹಾರ್ದಿಕ್ ಪಾಂಡ್ಯ ಮತ್ತು ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದ್ದು, ಇಬ್ಬರು ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಜೋಡಿ ಬೇರೆಯಾಗಲು ನಿರ್ಧರಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಇನ್ನೂ ಬಹಿರಂಗವಾಗಿ ಏನನ್ನೂ ಹೇಳಿಲ್ಲ. ಹಾರ್ದಿಕ್-ನತಾಶಾ ವಿಚ್ಛೇದನ ಪಡೆದರೆ ಪಾಂಡ್ಯ, ತನ್ನ ಆಸ್ತಿಯಲ್ಲಿ 70 ಪ್ರತಿಶತವನ್ನು ನತಾಶಾಗೆ ನೀಡಬೇಕಾಗುತ್ತದೆ ಎಂದು ಕೆಲವು ವರದಿಗಳು ಹೇಳಿವೆ.

ಹಾಗಾದರೆ ಪಾಂಡ್ಯ ಅವರ ಒಟ್ಟು ಆಸ್ತಿ ಮೌಲ್ಯ ಎಷ್ಟು ಎಂಬುದು ಎಲ್ಲರ ಕುತೂಹಲದ ಸಂಗತಿಯಾಗಿದೆ. ಒಂದು ಕಾಲದಲ್ಲಿ 200 ರೂ.ಗೆ ಪಂದ್ಯಾವಳಿಗಳನ್ನು ಆಡಿದ್ದ ಹಾರ್ದಿಕ್ ಪಾಂಡ್ಯ ಇಂದು ಕೋಟಿ ಮೌಲ್ಯದ ಆಸ್ತಿಯ ಒಡೆಯ. ಮಾಧ್ಯಮ ವರದಿಗಳ ಪ್ರಕಾರ, ಅವರ ಒಟ್ಟು ಸಂಪತ್ತು ಸುಮಾರು 91 ಕೋಟಿ ರೂ. ಎಂದು ಹೇಳಲಾಗುತ್ತಿದೆ.

ಕ್ರಿಕೆಟ್ ಹೊರತಾಗಿ ಹಾರ್ದಿಕ್ ಜಾಹಿರಾತುಗಳಿಂದ ಸಾಕಷ್ಟು ಆದಾಯ ಗಳಿಸುತ್ತಾರೆ. ಇತ್ತೀಚೆಗೆ ಬಿಸಿಸಿಐ ಕೇಂದ್ರ ಒಪ್ಪಂದವನ್ನು ಪ್ರಕಟಿಸಿತ್ತು. ಇದರಲ್ಲಿ ಹಾರ್ದಿಕ್ಗೆ ಗ್ರೇಡ್-ಎಯಲ್ಲಿ ಸ್ಥಾನ ನೀಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಈ ವರ್ಷ ಮಂಡಳಿಯಿಂದ ಪಾಂಡ್ಯ 5 ಕೋಟಿ ರೂ. ಸಂಭಾವನೆ ಪಡೆಯಲ್ಲಿದ್ದಾರೆ.

ಹಾರ್ದಿಕ್ ಪಾಂಡ್ಯರ ಪ್ರಮುಖ ಆದಾಯದ ಮೂಲ ಎಂದರೆ ಅದು ಐಪಿಎಲ್, ಪ್ರಸ್ತುತ ಮುಂಬೈ ತಂಡದ ನಾಯಕನಾಗಿರುವ ಪಾಂಡ್ಯ, 15 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಅಲ್ಲದೆ ಈ ಹಿಂದೆ ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದ ಪಾಂಡ್ಯ 2 ಆವೃತ್ತಿಗಳಿಂದ ತಲಾ 15 ಕೋಟಿ ರೂ. ವೇತನ ಪಡೆದಿದ್ದರು. ಒಟ್ಟಾರೆ ಐಪಿಎಲ್‌ನಿಂದಲೇ ಪಾಂಡ್ಯ 74.30 ಕೋಟಿ ರೂ. ಸಂಪಾಧನೆ ಮಾಡಿದ್ದಾರೆ.

ಇದಲ್ಲದೆ ಪಾಂಡ್ಯ, ಬೋಟ್, ಅಮೆಜಾನ್ ಅಲೆಕ್ಸಾ, ರಿಲಯನ್ಸ್ ರೀಟೇಲ್, ಸ್ಟಾರ್ ಸ್ಪೋರ್ಟ್ಸ್ ಮಾನ್ಸ್ಟರ್ ಎನರ್ಜಿ, ಬ್ರಿಟಾನಿಯಾ ಬೌರ್ಬನ್, ಸಿನ್ ಡೆನಿಮ್, ಗಲ್ಫ್ ಆಯಿಲ್ ಇಂಡಿಯಾ, ಡ್ರೀಮ್ 11, ಎಕ್ಸಲರೇಟ್, ಸೋಲ್ಡ್ ಸ್ಟೋರ್, ಎಸ್‌ಜಿ ಕ್ರಿಕೆಟ್ ಮತ್ತು POCO ಸೇರಿದಂತೆ ಅನೇಕ ಕಂಪನಿಗಳ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಪ್ರತಿಯೊಂದು ಬ್ರಾಂಡ್ಗೆ ಪಾಂಡ್ಯ 1 ಕೋಟಿ ರೂ. ಶುಲ್ಕ ಪಡೆಯುತ್ತಾರೆ.

ಅಷ್ಟೇ ಅಲ್ಲ ಮುಂಬೈನ ಬಾಂದ್ರಾದಲ್ಲಿ ಹಾರ್ದಿಕ್ 30 ಕೋಟಿ ಮೌಲ್ಯದ ಮನೆ ಹೊಂದಿದ್ದು, ವಡೋದರಾದಲ್ಲಿ ಐಷಾರಾಮಿ ಮನೆಯನ್ನೂ ಪಾಂಡ್ಯ ಹೊಂದಿದ್ದಾರೆ. ಇದಲ್ಲದೆ ಪಾಂಡ್ಯ ಬಳಿ ಆಡಿ A6, ರೇಂಜ್ ರೋವರ್ ವೋಗ್, ಜೀಪ್ ಕಂಪಾಸ್, ಮರ್ಸಿಡಿಸ್ G ವ್ಯಾಗನ್, ರೋಲ್ಸ್ ರಾಯ್ಸ್, ಲಂಬೋರ್ಘಿನಿ ಹುರಾಕನ್ EBO, ಪೋರ್ಷೆ ಕಯೆನ್ನೆ ಮತ್ತು ಟೊಯೋಟಾ ಎಟಿಯೋಸ್ಗಳಂತಹ ದುಬಾರಿ ಕಾರುಗಳು ಸಂಗ್ರಹವಿದೆ.









