- Kannada News Photo gallery Cricket photos Cricketer Hardik Pandya and Natasa Stankovic Love Story know how he propose
ಮಗನ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದ ಹಾರ್ದಿಕ್- ನತಾಶಾ ನಡುವೆ ಪ್ರೀತಿ ಹುಟ್ಟಿದ್ದೇಗೆ ಗೊತ್ತಾ?
Hardik Pandya- Natasa Stankovic Separation Rumour: ಫೆಬ್ರವರಿ 24, 2023 ರಂದು ಹಾರ್ದಿಕ್ ಪಾಂಡ್ಯ ಹಾಗೂ ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್ ತಮ್ಮ 2 ವರ್ಷದ ಮಗನ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿ ಎಲ್ಲೆಡೆ ಸಖತ್ ಸುದ್ದಿಯಾಗಿದ್ದರು. ಆದರೆ ಈ ಜೋಡಿಯ ಜೊತೆ ಪಯಣ ಕೇವಲ 1 ವರ್ಷಕ್ಕೆ ಮುರಿದು ಬಿದ್ದಿದೆ ಎಂದು ಹೇಳಲಾಗುತ್ತಿದೆ.
Updated on: May 25, 2024 | 4:22 PM

ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ 2024 ರ ವರ್ಷ ದುಸ್ವಪ್ನದಂತೆ ಕಾಡುತ್ತಿದೆ. ವೃತ್ತಿಜೀವನದಲ್ಲಿ ನಾಯಕನಾಗಿ ಮುಂಬೈ ಇಂಡಿಯನ್ಸ್ ತಂಡವನ್ನು ಸರಿಯಾಗಿ ಮುನ್ನಡೆಸುವಲ್ಲಿ ಪಾಂಡ್ಯ ವಿಫಲರಾಗಿದ್ದರು. ಇದೀಗ ಪಾಂಡ್ಯ ಅವರ ವೈಯಕ್ತಿಕ ಬದುಕಿನಲ್ಲೂ ಬಿರುಗಾಳಿ ಎದ್ದಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಕಳೆದ ವರ್ಷ ಅಂದರೆ ಫೆಬ್ರವರಿ 24 2023 ರಂದು ಹಾರ್ದಿಕ್ ಪಾಂಡ್ಯ ಹಾಗೂ ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್ ತಮ್ಮ 2 ವರ್ಷದ ಮಗನ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿ ಎಲ್ಲೆಡೆ ಸಖತ್ ಸುದ್ದಿಯಾಗಿದ್ದರು. ಆದರೆ ಈ ಜೋಡಿಯ ಜೊತೆ ಪಯಣ ಕೇವಲ 1 ವರ್ಷಕ್ಕೆ ಮುರಿದು ಬಿದ್ದಿದೆ ಎಂದು ಹೇಳಲಾಗುತ್ತಿದೆ.

ಅಷ್ಟೇ ಅಲ್ಲದೆ ಹಾರ್ದಿಕ್ ಪಾಂಡ್ಯ ತಮ್ಮ ಆಸ್ತಿಯ ಶೇಕಡಾ 70 ರಷ್ಟನ್ನು ನತಾಶಾ ಅವರಿಗೆ ಜೀವನಾಂಶವಾಗಿ ನೀಡಿದ್ದಾರೆ ಎಂತಲೂ ಹೇಳಲಾಗುತ್ತಿದೆ. ಈ ಎಲ್ಲಾ ಊಹಾಪೋಹಗಳ ನಡುವೆ ಈ ಜೋಡಿ ಹಕ್ಕಿಗಳ ಮೊದಲ ಭೇಟಿಯಾಗಿದ್ದು ಎಲ್ಲಿ? ಯಾರು ಮೊದಲು ಪ್ರೇಮ ನಿವೇದನೆ ಮಾಡಿಕೊಂಡಿದ್ದು? ಎಂಬ ವಿಷಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹುಡುಕಾಟ ಜೋರಾಗಿದೆ. ಅದಕ್ಕೆಲ್ಲ ಉತ್ತರ ನಾವು ನೀಡಲಿದ್ದೇವೆ.

ಕಡುಬಡತನದಿಂದ ಬಂದು ಟೀಂ ಇಂಡಿಯಾದಲ್ಲಿ ಮಿಂಚುತ್ತಿರುವ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಅವರ ನಡುವೆ ಪ್ರೀತಿ ಹುಟ್ಟಿದ್ದೇ ಕುತೂಹಲಕಾರಿ ಸಂಗತಿಯಾಗಿದೆ. ವಾಸ್ತವವಾಗಿ ನತಾಶಾ ಭಾರತೀಯರಲ್ಲ. ಅವರು ಸೆರ್ಬೀಯಾ ದೇಶದವರು. ಹೀಗಿರುವಾಗ ಈ ಇಬ್ಬರ ಮೊದಲ ಭೇಟಿ ನೈಟ್ ಕ್ಲಬ್ವೊಂದರಲ್ಲಿ ಆಗುತ್ತದೆ.

ಮೊದಲ ಭೇಟಿಯ ಬಳಿಕ ಇವರಿಬ್ಬರ ನಡುವೆ ಒಡನಾಟ ಹೆಚ್ಚುತ್ತದೆ. ನಂತರ 2019 ರಲ್ಲಿ ಹಾರ್ದಿಕ್ ಪಾಂಡ್ಯ ಮೊದಲ ಬಾರಿಗೆ ನತಾಶಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬೆಸ್ಟ್ ಫ್ರೆಂಡ್ ಎಂದು ಬರೆದುಕೊಳ್ಳುವ ಮೂಲಕ ಇಬ್ಬರ ನಡುವಿನ ಸ್ನೇಹವನ್ನು ಜಗಜ್ಜಾಹೀರು ಮಾಡುತ್ತಾರೆ.

ಹಾಗೆಯೇ 1 ವರ್ಷಗಳು ಕಳೆದ ಬಳಿಕ ಈ ಇಬ್ಬರ ನಡುವಿನ ಸ್ನೇಹ ಪ್ರೇಮವಾಗಿ ಮಾರ್ಪಾಡಾಗುತ್ತದೆ. ಈ ವೇಳೆ 2020 ರ ಜನವರಿ 1 ರಂದು ಅಂದರೆ, ಹೊಸ ವರ್ಷದ ಪಾರ್ಟಿಯಲ್ಲಿ ಹಾರ್ದಿಕ್, ನತಾಶಾಗೆ ವಿಶಿಷ್ಟ ರೀತಿಯಲ್ಲಿ ಪ್ರಪೋಸ್ ಮಾಡಿದರು. ಉಂಗುರ ತೊಡಿಸುವ ಮೂಲಕ ಪ್ರೇಮ ನಿವೇದನೆಯನ್ನೂ ಮಾಡಿದರು.

ಈ ಸಂತೋಷದ ಕ್ಷಣಗಳ ವೀಡಿಯೊವನ್ನು ಹಂಚಿಕೊಂಡಿದ್ದ ಹಾರ್ದಿಕ್ ಪಾಂಡ್ಯ, "ಮೆ ತೇರಾ ತು ಮೇರಿ, ಜಾನೆ ಸಾರಾ ಹಿಂದೂಸ್ತಾನ್" ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ನೋಡಿದ ಅಭಿಮಾನಿಗಳಿಗೆ ಮತ್ತು ಸ್ನೇಹಿತರಿಗೆ ಅಚ್ಚರಿ ಎದುರಾಗಿತ್ತು.

ಅದೇ ವರ್ಷ ಅಂದರೆ ಮೇ 31 ರಂದು ನತಾಶಾ ಗರ್ಭಿಯಾಗಿರುವ ವಿಚಾರವನ್ನು ಹೊರ ಜಗತ್ತಿಗೆ ಹೇಳಿದ್ದರು. ಜುಲೈ 30, 2020 ರಂದು ದಂಪತಿಗಳು ಗಂಡು ಮಗುವನ್ನು ಬರಮಾಡಿಕೊಂಡಿದ್ದರು. ಈ ಮಗುವಿಗೆ ಅಗಸ್ತ್ಯ ಎಂದು ನಾಮಕರಣ ಕೂಡ ಮಾಡಲಾಗಿತ್ತು.

ಸಹ ಜೀವನ ಪ್ರಾರಂಭಿಸಿ ಸುಮಾರು 4 ವರ್ಷಗಳ ಬಳಿಕ ಅಂದರೆ ಫೆಬ್ರವರಿ 14, 2023 ರಂದು ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟಾಂಕೊವಿಕ್ ಜೋಡಿ ಎಲ್ಲರ ಸಮ್ಮುಖದಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆ ಆಗಿದ್ದರು. ಉದಯಪುರದಲ್ಲಿ ನಡೆದ ಮದುವೆಗೆ ಅನೇಕ ಗಣ್ಯರನ್ನು ಆಹ್ವಾನಿಸಲಾಗಿತ್ತು.




