ಸೆಮಿಫೈನಲ್ ಪಂದ್ಯವನ್ನು ಗೆಲ್ಲುವುದು ಪಿವಿ ಸಿಂಧು ಅವರಿಗೆ ಅಷ್ಟೊಂದು ಸುಲಭವಾಗಿರಲಿಲ್ಲ. ಮೊದಲ ಸೆಟ್‌ನಲ್ಲಿ ಥಾಯ್ಲೆಂಡ್‌ನ ಬುಸಾನಾನ್ ವಿರುದ್ಧ 13-21ರಿಂದ ಸೋಲನುಭವಿಸಬೇಕಾಯಿತು. ಆದರೆ ಎರಡನೇ ಸೆಟ್‌ನ ಆರಂಭದೊಂದಿಗೆ ಸಿಂಧು ತನ್ನ ಆಟದ ತಂತ್ರವನ್ನು ಬದಲಾಯಿಸಿದರು ಮತ್ತು ಆಕ್ರಮಣಕಾರಿ ನಿಲುವನ್ನು ಅಳವಡಿಸಿಕೊಂಡರು. ಪರಿಣಾಮವಾಗಿ ಸಿಂಧು 21-16ರಲ್ಲಿ ಎರಡನೇ ಸೆಟ್ ಗೆದ್ದು ಸಮಬಲ ಸಾಧಿಸಿದರು.