ಉತ್ತರ ಕರ್ನಾಟಕ ಭಾಗದಲ್ಲಿ ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ: ಜೋಡಿ ಮಣ್ಣೆತ್ತಿಗೆ ಸಖತ್​ ಬೆಲೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 05, 2024 | 3:00 PM

ರೈತರಿಗೆ ಎತ್ತುಗಳು ಕಣ್ಣುಗಳಿದ್ದಂತೆ. ಮತ್ತೊಂದಡೆ ಮಣ್ಣು ಕೂಡ ದೇವ ಸ್ವರೂಪಿ. ಹೀಗಾಗಿ ಎತ್ತು ಮತ್ತು ಮಣ್ಣನ್ನು ರೈತರು ಪೂಜೆ ಮಾಡ್ತಾರೆ. ಮತ್ತೊಂದಡೆ ಭೂತಾಯಿ ರೈತನಿಗೆ ಅನ್ನ ನೀಡುತ್ತಾಳೆ. ಹೀಗಾಗಿ ಮಣ್ಣು ಮತ್ತು ಎತ್ತುಗಳನ್ನು ರೈತರು ಪೂಜನೀಯ ಭಾವದಿಂದ ಕಾಣುತ್ತಾರೆ. ಹೀಗಾಗಿ ಇಂದು ರಾಜ್ಯದೆಲ್ಲೆಡೆ ಮಣ್ಣೆತ್ತಿನ ಅಮವಾಸ್ಯೆ ಆಚರಿಸಲಾಗುತ್ತಿದೆ.

1 / 6
ಭಾರತ ಕೃಷಿ ಪ್ರಧಾನ ದೇಶ. ಇಲ್ಲಿ ಅನ್ನ ಬೆಳೆಯುವ ರೈತನಿಗೂ, ಅನ್ನ ನೀಡುವ ಭೂಮಿಗೂ, ತಾಯಿ-ಮಗನ, ದೇವರು ಭಕ್ತನ ಸಂಬಂಧವಿದೆ. ರೈತ ಸಮುದಾಯ ಮಣ್ಣು ಮತ್ತು ತಮ್ಮ ಜಾನುವಾರುಗಳನ್ನು ಪ್ರೀತಿ, ಭಕ್ತಿಯಿಂದ ಕಾಣುತ್ತಾರೆ. ಹೀಗಾಗಿ ನಮ್ಮ ದೇಶದಲ್ಲಿ ಭೂಮಿ,ಜಾನುವಾರುಗಳ ಸುತ್ತಲೇ ಅನೇಕ ಹಬ್ಬಗಳು ಬೆಸೆದುಕೊಂಡಿವೆ. ಇಂದು ಉತ್ತರ ಕರ್ನಾಟಕ ಭಾಗದಲ್ಲಿ ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ ಜೋರಾಗಿದೆ.

2 / 6
ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದ ಭಾಗದಲ್ಲಿ ರೈತರಿಗೆ ಎತ್ತುಗಳು ಎರಡು ಕಣ್ಣುಗಳಿದ್ದಂತೆ. ಹೀಗಾಗಿ ಕಾರ ಹುಣ್ಣಿಮೆಯೆಂದು ಎತ್ತುಗಳಿಗೆ ಸಿಂಗರಿಸಿ ಪೂಜೆ ಮಾಡುವ ರೈತರು, ಮಣ್ಣೆತ್ತಿನ ಅಮವಾಸ್ಯೆಯಂದು ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜೆ ಮಾಡುವ ಸಂಪ್ರದಾಯ ಅನಾದಿ ಕಾಲದಿಂದಲೂ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ ಮಣ್ಣೆತ್ತಿನ ಅಮವಾಸ್ಯೆ ದಿನ, ಮಣ್ಣಿನಿಂದ ಎತ್ತುಗಳನ್ನು ಮಾಡಿ ಅವುಗಳಿಗೆ ಪೂಜೆ ಮಾಡಿ, ತಮ್ಮ ಭಕ್ತಿಯನ್ನು ಮೆರೆದಿದ್ದಾರೆ.

3 / 6
ಏನಿದು ಮಣ್ಣೆತ್ತಿನ ಅಮವಾಸ್ಯ: ಕಾರ ಹುಣ್ಣಿಮೆಯ ನಂತರ ಬರುವುದೇ ಮಣ್ಣೆತ್ತಿನ ಅಮವಾಸ್ಯೆ. ಈ ಅಮವಾಸ್ಯೆಯೆಂದು ರೈತರು ಹೊಲಕ್ಕೆ ಹೋಗಿ ಜಿಗುಟಾಗಿರುವ ಮಣ್ಣನ್ನು ಮನೆಗೆ ತಂದು, ಅದರಿಂದ ಜೋಡಿ ಎತ್ತುಗಳನ್ನು ಮಾಡುತ್ತಾರೆ. ಮಣ್ಣಿನ ಎತ್ತುಗಳಿಗೆ ಸಿಂಗಾರ ಮಾಡುತ್ತಾರೆ. ಬಳಿಕ ದೇವರ ಕೋಣೆಯಲ್ಲಿಟ್ಟು ಪೂಜಿಸುತ್ತಾರೆ.

4 / 6
ಪೂಜೆ ಮಾಡಿದ ನಂತರ ಮಣ್ಣಿನ ಎತ್ತುಗಳಿಗೆ ಹೂಳಿಗೆ, ಕಡಬಿನಿಂದ ಮಾಡಿದ ಆಹಾರವನ್ನು ಎಡೆ ಹಿಡಿಯುತ್ತಾರೆ. ನಂತರ ತಮ್ಮ ಮನೆಯ ಹಿತ್ತಲಲ್ಲಿ ಮತ್ತು ಜಮೀನಿನಲ್ಲಿ ತೆಗೆದುಕೊಂಡು ಹೋಗಿ ಮಣ್ಣಿನ ಎತ್ತುಗಳನ್ನು ಇಡುತ್ತಾರೆ. ಆ ಮೂಲಕ ಭೂ ತಾಯಿ ಮತ್ತು ಎತ್ತುಗಳು ನಮ್ಮನ್ನು ಕಾಪಾಡಿ ಅಂತ ಪ್ರಾರ್ಥಿಸುತ್ತಾರೆ.

5 / 6
ಮುಂಗಾರು ಮಳೆ ಪ್ರಾರಂಭದ ನಂತರ ಬರುವ ಕಾರ ಹುಣ್ಣಿಮೆ ಮತ್ತು ಮಣ್ಣೆತ್ತಿನ ಅಮವಾಸ್ಯೆಯನ್ನು ರೈತರು ಸಂಭ್ರಮದಿಂದ ಆಚರಿಸುತ್ತಾರೆ. ತಮ್ಮ ನೋವು, ಕಷ್ಟ ಬದಿಗಿಟ್ಟು, ಎತ್ತುಗಳನ್ನು ಪೂಜಿಸುತ್ತಾರೆ. ಕಾರ ಹುಣ್ಣಿಮೆಯ ಸಮಯದಲ್ಲಿ ಎತ್ತುಗಳನ್ನು ಪೂಜಿಸಿದರೆ ಮಣ್ಣೆತ್ತಿನ ಅಮವಾಸ್ಯೆಯಂದು ಮಣ್ಣಿನಿಂದ ಮಾಡಿದ ಎತ್ತುಗಳನ್ನು ಪೂಜಿಸುತ್ತಾರೆ.

6 / 6
ಮಣ್ಣೆತ್ತಿನ ಅಮವಾಸ್ಯೆ ಹಿನ್ನೆಲೆ ಇಂದು ಕೊಪ್ಪಳ ಜಿಲ್ಲೆಯಲ್ಲಿ ಮಣ್ಣು ಮತ್ತು ಪಿಓಪಿಯಿಂದ ಮಾಡಿರುವ ಎತ್ತುಗಳ ಮಾರಾಟ ಜೋರಾಗಿ ನಡೆಯಿತು. ಮೊದಲು 10ರಿಂದ 20 ರೂ. ಜೋಡಿ ಮಣ್ಣಿನ ಎತ್ತುಗಳು ಮಾರುಕಟೆಯಲ್ಲಿ ಸಿಗುತ್ತಿದ್ದವು. ಆದರೆ ಇದೀಗ 100 ರಿಂದ 150 ರೂ.ಗೆ ಎರಡು ಜೋಡಿ ಪಿಓಪಿ ಎತ್ತುಗಳನ್ನು ಮಾರಾಟ ಮಾಡಲಾಗುತ್ತಿದೆ.