Mauni Amavasya 2023: ಇತಿಹಾಸ ಪ್ರಸಿದ್ಧ ಬೀದರ್​ ನಗರದ ಶನೇಶ್ವರ ಮಂದಿರದಲ್ಲಿ ಜನವೋ ಜನ, ಫೋಟೋಗಳಿವೆ ನೋಡಿ

| Updated By: ಆಯೇಷಾ ಬಾನು

Updated on: Jan 21, 2023 | 3:39 PM

ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಖಾನಾಪುರದ ಬಳಿ ಇರುವ ಶನೀಶ್ವರ ಮಂದಿರಕ್ಕೆ ಜನಸಾಗರವೇ ಹರಿದು ಬಂದಿದೆ.

1 / 8
ಶನಿವಾರದಂದು ಮೌನಿ ಅಮಾವಾಸ್ಯೆ ಬಂದ ಕಾರಣ ಬೀದರ್​ನ ಶನಿ ದೇವಸ್ಥಾನಕ್ಕೆ ಜನ ಸಾಗರವೆ ಹರಿದು ಬಂದಿದೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣದಿಂದ ಅಪಾರ ಪ್ರಮಾಣ ಭಕ್ತ ಸಮೂಹವೇ ಹರಿದು ಬಂದಿದೆ.

2 / 8
ಇಂದು ಮೌನಿ ಅಮಾವಾಸ್ಯೆ. ಅದರಲ್ಲೂ ಈ ಅಮಾವಾಸ್ಯೆ ಶನಿವಾರ ಬಂದಿರುವುದುರಿಂದ ಶನಿ ದೇವಸ್ಥಾನಕ್ಕೆ ಭಕ್ತರ ದಂಡೇ ಹರಿದುಬಂದಿದೆ. ಹಾಗೂ ಶನಿ ಮಹಾತ್ಮನಿಗೆ ಇಷ್ಟವಾದ ಪೂಜಾ ಸಾಮಗ್ರಿಗಳನ್ನ ಅರ್ಪಿಸಿ ಪಾಪ ಪರಿಹರಿಸು ಎಂದು ಭಕ್ತರು ಕೇಳಿಕೊಂಡಿದ್ದಾರೆ.

3 / 8
ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಖಾನಾಪುರದ ಬಳಿ ಇರುವ ಶನೀಶ್ವರ ಮಂದಿರಕ್ಕೆ ಜನಸಾಗರವೇ ಹರಿದು ಬಂದಿದೆ. ಇಂದು ಶನಿವಾರ ಅಮಾವಾಸ್ಯೆಯಿದ್ದ ಕಾರಣ ಶನೀಶ್ವರ ಮಂದಿರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದು ಶನಿದೇವರ ದರ್ಶನ ಪಡೆದರು.

4 / 8
ಜಿಲ್ಲೆಯಲ್ಲಿರುವ ಏಕೈಕ ಶನಿದೇವರ ದೇವಸ್ಥಾನ ಇದಾಗಿದ್ದು ಹೀಗಾಗಿ ಜಿಲ್ಲೆಯ ಮೂಲೇ ಮೂಲೇಯಿಂದ ಜನರು ಬಂದಿದ್ದಾರೆ.ಈ ದೇವಸ್ಥಾನಕ್ಕೆ ಬರುವವರಿಗೆ ಕುಡಿಯುವ ನೀರು ಊಟದ ವ್ಯವಸ್ಥೆಯನ್ನ ಕೂಡಾ ಮಾಡಿದ್ದು ಭಕ್ತರು ಖುಷಿಯಿಂದಲೇ ದರ್ಶನ ಮಾಡಿ ಮನೆಗಳಿಗೆ ತೆರಳಿಸಿದರು.

5 / 8
ಇನ್ನೂರು ವರ್ಷಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಇಲ್ಲಿನ ಶನಿಶ್ವರ ದೇವಸ್ಥಾನ ಖಾನಾಪುರ ಗ್ರಾಮದ ಕಾಡಿನಲ್ಲಿದೆ. ಈ ಶನಿದೇವರ ದರ್ಶನ ಪಡೆಯಬೇಕು ಅಂದರೆ ಐನ್ನೂರು ಮೆಟ್ಟಿಲುಗಳನ್ನ ಇಳಿದುಕೊಂಡು ಈ ದೇವರ ದರ್ಶನ ಮಾಡಬೇಕು.

6 / 8
ಇನ್ನೂ ಹಚ್ಚ ಹಸುರಿನಿಂದ ಕೂಡಿದ ಕಾಡಿನಲ್ಲಿ ಈ ಶನಿ ದೇವಾಲಯವಿದ್ದು ವರ್ಷದ 12 ತಿಂಗಳು ಕೂಡಾ ಇಲ್ಲಿನ ಹಳ್ಳದ ನೀರು ಬತ್ತಿದ ಉದಾಹರಣೆಯಿಲ್ಲ. ಇನ್ನೂ ಶನಿದೇವಾಲಯದ ಪಕ್ಕದಲ್ಲಿಯೇ ಬಾವಿಯಿದ್ದು ಈ ಭಾವಿಯಲ್ಲಿ ಸ್ನಾನ ಮಾಡಿ ಅಥವಾ ಕೈಕಾಲು ಮುಖ ತೊಳದೆಕೊಂಡೆ ಶನಿದೇವರ ದರ್ಶನ ಮಾಡಬೇಕು ಅನ್ನೂವ ಪ್ರತಿಥಿಯೂ ಇಲ್ಲಿದೆ.

7 / 8
ಈ ಬಾವಿಯಲ್ಲಿನ ನೀರಿನಲ್ಲಿ ರೋಗಗಳನ್ನ ವಾಸಿ ಮಾಡುವ ಶಕ್ತಿಯಿದೆ ಅಂತಲೇ ಜನರು ನಂಬಿದ್ದಾರೆ ಹೀಗಾಗಿ ಶನಿವಾರದಂದು ಅಮಾವಾಸ್ಯೆ ಬಂದರೆ ಇಲ್ಲಿನ ಶನಿದೇವರ ಆರ್ಶಿವಾದ ಪಡೆಯಲು ಜನರ ಸಾಗರವೇ ಇಲ್ಲಿಗೆ ಹರಿದು ಬರುತ್ತದೆ. ಎರಡು ಶತಮಾನದಷ್ಟು ಹಳೆಯದಾದ ಈ ದೇವಸ್ಥಾನ ಬಂದಿರುವ ಭಕ್ತರ ಕಷ್ಟಗಳನ್ನ ಇಲ್ಲಿನ ಶನಿದೇವರು ಪರಿಹಾರ ಮಾಡುತ್ತಾನೆಂದು ಇಲ್ಲಿನ ಅರ್ಚಕರು ಹೇಳುತ್ತಿದ್ದಾರೆ.

8 / 8
ನೂರಾರು ವರ್ಷಗಳ ಇತಿಹಾಸ ಹೊಂದಿರುವ ಶನಿಶ್ವರ ಹತ್ತಾರು ಪವಾಡಗಳನ್ನ ಮಾಡುತ್ತಲೇ ಭಕ್ತರನ್ನ ತನ್ನತ್ತ ಸೆಳೆಯುತ್ತಿದ್ದಾರೆ. ಇತಿಹಾಸ ಪ್ರಸಿದ್ಧ ಇಂತಹ ಅಪರೂಪದ ದೇವಸ್ಥಾನದ ಬಗ್ಗೆ ಇಲ್ಲಿ ನಡೆಯುವ ಪವಾಡದ ಬಗ್ಗೆ ಭಕ್ತರು ನಂಬಿದ್ದಾರೆ. ಇಂಥಾ ಅಪರೂಪದ ದೇವಾಲಯ ಗಡಿ ಜಿಲ್ಲೆ ಬೀದರ್​ನಲ್ಲಿ ಇದೆ ಅನ್ನೋದೆ ಹೆಮ್ಮೆಯ ವಿಷಯ.

Published On - 3:39 pm, Sat, 21 January 23