ಕುರಿ ವ್ಯಾಪಾರಿಯೊಬ್ಬರು ಸಾಕಿದ ಕುರಿಯ ಹುಟ್ಟುಹಬ್ಬ ಆಚರಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಟಿಬಿ ಗೊಲ್ಲರಹಟ್ಟಿಯ ಕೃಷ್ಣಮೂರ್ತಿ ಎಂಬುವವರು ಕುರಿ ಬರ್ತಡೇ ಮಾಡಿದ್ದಾರೆ.
ಕೃಷ್ಣಮೂರ್ತಿ 15 ವರ್ಷಗಳಿಂದ ಕುರಿ ವ್ಯಾಪಾರ ಮಡುತ್ತಿದ್ದಾರೆ.
ವ್ಯಾಪಾರಕ್ಕೆ ತಂದಿದ್ದ ಕುರಿ, ಮರಿ ಹಾಕಿದ ಬಳಿಕ ಸಾವನ್ನಪ್ಪಿತ್ತು. ಕುರಿ ಮರಿಯನ್ನು ಕೃಷ್ಣಮೂರ್ತಿ ಪ್ರೀತಿಯಿಂದ ಸಾಕಿದ್ದಾರೆ.
ಮೇ 3ಕ್ಕೆ ಕುರಿಮರಿಗೆ 1 ವರ್ಷ ತುಂಬಿದ ಹಿನ್ನೆಲೆ ಬರ್ತಡೇ ಮಾಡಿದ್ದಾರೆ. ಐದು ಕೆಜಿಯ ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
Published On - 10:13 am, Wed, 4 May 22