
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ (ICC Womens World Cup 2022) ಟೂರ್ನಿಯ ದಕ್ಷಿಣ ಆಫ್ರಿಕಾ ವನಿತೆಯರ ವಿರುದ್ಧದ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಭರ್ಜರಿ ಬ್ಯಾಟಂಗ್ ಪ್ರದರ್ಶಿಸಿತು. ಟಾಸ್ ಗೆದ್ದ ಟೀಮ್ ಇಂಡಿಯಾ (Team India) ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಸ್ಮೃತಿ ಮಂದಾನ, ಶಫಾಲಿ ವರ್ಮಾ ಮತ್ತು ಮಿಥಾಲಿ ರಾಜ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ 50 ಓವರ್ ಗಳಲ್ಲಿ 274 ರನ್ ಬಾರಿಸಿತು. ನಾಯಕಿಯ ಆಟವಾಡಿದ ಮಿಥಾಲಿ ಈ ಅರ್ಧಶತಕದೊಂದಿಗೆ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಮೂರನೇ ವಿಕೆಟ್ ಗೆ ಸ್ಮೃತಿ ಜೊತೆಯಾದ ಮಿಥಾಲಿ ರಾಜ್ ತಂಡಕ್ಕೆ ಆಧಾರವಾಗಿ ನಿಂತು ರನ್ ಗಳಿಸುತ್ತಾ ಸಾಗಿದರು. ಇವರಿಬ್ಬರು 80 ರನ್ಗಳ ಕೊಡುಗೆ ನೀಡಿದರು. ಮಂದಾನ 84 ಎಸೆಗಳಲ್ಲಿ 6 ಬೌಂಡರಿ, 1 ಸಿಕ್ಸರ್ ನೊಂದಿಗೆ 71 ರನ್ ಚಚ್ಚಿ ಔಟಾದ ಬಳಿಕ ಹರ್ಮನ್ಪ್ರೀತ್ ಕೌರ್ ಜೊತೆ ಸೇರಿ ಮಿಥಾಲಿ ಮತ್ತೊಂದು ಅರ್ಧಶತಕದ ಜೊತೆಯಾಟ ಆಡಿದರು.



Published On - 12:47 pm, Sun, 27 March 22