National Sports Day 2021: ಇಂದು ರಾಷ್ಟ್ರೀಯ ಕ್ರೀಡಾ ದಿನ: ಹಾಕಿ ದಂತಕತೆ ಧ್ಯಾನ್ ಚಂದ್ ಬಗ್ಗೆ ನಿಮಗೆಷ್ಟು ಗೊತ್ತು?
Major Dhyan Chand Birth Anniversary: ವಿಶ್ವಮಟ್ಟದಲ್ಲಿ ಭಾರತದ ಹಾಕಿ ತಂಡವನ್ನು ಗುರುತಿಸುವಂತೆ ಮಾಡಿದ ಶ್ರೇಷ್ಠ ಆಟಗಾರ ಎಂದರೆ ಅದು ಧ್ಯಾನ್ ಚಂದ್. ದೇಶದ ಕೀರ್ತಿಯನ್ನು ಹೆಚ್ಚಿಸಿದ ಧ್ಯಾನ್ ಚಂದ್ ಅವರು 1905ರ ಆಗಸ್ಟ್ 29ರಂದು ಅಹಮದಾಬಾದ್ನಲ್ಲಿ ಜನಿಸಿದರು. ಈ ದಿನವನ್ನ ಭಾರತದಲ್ಲಿ ಪ್ರತಿವರ್ಷ ‘ರಾಷ್ಟ್ರೀಯ ಕ್ರೀಡಾ ದಿನ’ವಾಗಿ ಆಚರಿಸಲಾಗುತ್ತದೆ.
1 / 8
ಇಂದು ಹಾಕಿ ದಂತಕತೆ ಧ್ಯಾನ್ ಚಂದ್ (Dhyan Chand) ಅವರ 118ನೇ ಜನ್ನದಿನ. ಈ ದಿನವನ್ನ ಆಗಸ್ಟ್ 29 ರಂದು ಭಾರತದಲ್ಲಿ ಪ್ರತಿವರ್ಷ ‘ರಾಷ್ಟ್ರೀಯ ಕ್ರೀಡಾ ದಿನ’ವಾಗಿ (National Sports Day 2021) ಆಚರಿಸಲಾಗುತ್ತದೆ. ರಾಷ್ಟ್ರೀಯ ಕ್ರೀಡಾ ದಿನವನ್ನು ರಾಷ್ಟ್ರದ ಕ್ರೀಡಾಪಟುಗಳಿಗೆ ಸಮರ್ಪಿಸಲಾಗಿದೆ. ಈ ದಿನ ದೇಶಕ್ಕೆ ಪ್ರಶಸ್ತಿಗಳನ್ನು ತರವಲ್ಲಿ ಅವರ ಕೊಡುಗೆ ಮತ್ತು ಸಮರ್ಪಣೆಯನ್ನು ಗೌರವಿಸಲಾಗುತ್ತದೆ.
2 / 8
ವಿಶ್ವಮಟ್ಟದಲ್ಲಿ ಭಾರತದ ಹಾಕಿ ತಂಡವನ್ನು ಗುರುತಿಸುವಂತೆ ಮಾಡಿದ ಶ್ರೇಷ್ಠ ಆಟಗಾರ ಎಂದರೆ ಅದು ಧ್ಯಾನ್ ಚಂದ್. ದೇಶದ ಕೀರ್ತಿಯನ್ನು ಹೆಚ್ಚಿಸಿದ ಧ್ಯಾನ್ ಚಂದ್ ಅವರು 1905ರ ಆಗಸ್ಟ್ 29ರಂದು ಅಹಮದಾಬಾದ್ನಲ್ಲಿ ಜನಿಸಿದರು. ಒಲಿಂಪಿಕ್ನಲ್ಲಿ ಸಾಲು ಸಾಲು ಚಿನ್ನ ಗೆಲ್ಲಿಸಿ ಕೊಟ್ಟಿರುವ ಧ್ಯಾನ್ ಅವರು 400ಕ್ಕೂ ಅಧಿಕ ಗೋಲು ಗಳಿಸಿದ್ದಾರೆ.
3 / 8
ಭಾರತೀಯ ಹಾಕಿಯನ್ನು ಯಶಸ್ಸಿನ ಶಿಖರಾಗ್ರಕ್ಕೊಯ್ದ ಧ್ಯಾನ್ ಚಂದ್ಗೆ ಇಂದು ಭಾರತೀಯರೆಲ್ಲರೂ ನಮನವನ್ನು ಸಲ್ಲಿಸುತ್ತಿದ್ದಾರೆ. ಸ್ವಾತಂತ್ರ್ಯಪೂರ್ವದಲ್ಲಿ 1928ರಿಂದ ಒಲಿಂಪಿಕ್ಸ್‍ನಲ್ಲಿ ಸತತ ಮೂರು ಬಾರಿ ಚಿನ್ನದ ಪದಕ ಗೆದ್ದ ಭಾರತದ ಹಾಕಿ ತಂಡದ ಮಹಾನ್ ಆಟಗಾರ ಇವರು.
4 / 8
ಧ್ಯಾನಚಂದ್ ಅವರು ನ್ಯೂಜಿಲ್ಯಾಂಡ್ ನೆಲದಲ್ಲಿ 201 ಗೋಲುಗಳನ್ನು ಬಾರಿಸಿದ ಸುದ್ದಿಯನ್ನು ಕೇಳಿದ ಖ್ಯಾತ ಕ್ರಿಕೆಟರ್ ಡಾನ್ ಬ್ರಾಡಮನ್, ‘ಇದನ್ನು ಹಾಕಿ ಆಟಗಾರ ಹೊಡೆದನೋ ಅಥವಾ ಕ್ರಿಕೆಟ್ ಆಟಗಾರ ಹೊಡೆದನೋ’ ಎಂದು ಅಚ್ಚರಿಯ ಉದ್ಗಾರ ತೆಗೆದಿದ್ದರು. ನೇತಾಜಿ ಸುಭಾಷಚಂದ್ರ ಬೋಸ್ ಧ್ಯಾನಚಂದ್ ಅವರ ಆಟದ ವೈಖರಿಯನ್ನು ಒಮ್ಮೆ ಪ್ರತ್ಯಕ್ಷವಾಗಿ ನೋಡಿ ಮಂತ್ರಮುಗ್ಧರಾದರು.
5 / 8
ಮೂರು ದಶಕಗಳ ಕಾಲ ಭಾರತದ ಹಾಕಿ ಆಟಗಾರರ ‘ಅನಭಿಷಿಕ್ತ ದೊರೆ’ ಎಂದೇ ಗುರುತಿಸಲ್ಪಟ್ಟ ಧ್ಯಾನ್ ಚಂದ್ ರನ್ನು ಆಗಸ್ಟ್ 29 ರಂದು ಸ್ಮರಿಸುವುದರ ಜೊತೆಗೆ ಕ್ರೀಡಾರಂಗದ ಬಗ್ಗೆ ಅವಲೋಕನ ಮಾಡುವ ದಿನ ಇದಾಗಿದೆ. 42ನೇ ವಯಸ್ಸಿನವರೆಗೂ ಹಾಕಿ ಆಡುತ್ತಿದ್ದ ಅವರು, 1948ರಲ್ಲಿ ನಿವೃತ್ತರಾದರು.
6 / 8
ವೃತ್ತಿಜೀವನದಲ್ಲಿ ಅವರು 570 ಗೋಲು ಸಿಡಿಸಿದರು. 1956ರಲ್ಲಿ ಪದ್ಮಭೂಷಣ ಪ್ರಶಸ್ತಿಯಿಂದ ಪುರಸ್ಕೃತರಾದರು. 1979ರ ಡಿಸೆಂಬರ್ 3ರಂದು ಪಿತ್ತಜನಕಾಂಗದ ಕ್ಯಾನ್ಸರ್ನಿಂದ ಅವರು ಮೃತಪಟ್ಟರು. ಅವರ ಸ್ಮರಣಾರ್ಥ ದೆಹಲಿಯ ರಾಷ್ಟ್ರೀಯ ಹಾಕಿ ಕ್ರೀಡಾಂಗಣಕ್ಕೆ ಧ್ಯಾನ್ ಚಂದ್ ಹೆಸರನ್ನು ಇಡಲಾಗಿದೆ. ಇತ್ತೀಚೆಗೆ ದೇಶದ ಅತ್ಯುನ್ನತ ಕ್ರೀಡಾ ಪುರಸ್ಕಾರ ‘ಖೇಲ್ ರತ್ನ’ಕ್ಕೆ ಅವರ ಹೆಸರು ಇಡಲಾಗಿದೆ.
7 / 8
ತಮ್ಮ ವೃತ್ತಿ ಜೀವನದಲ್ಲಿ ಒಟ್ಟು 185 ಪಂದ್ಯಗಳನ್ನು ಆಡಿದ್ದಾರೆ ಮತ್ತು ಅವರು ಹಾಕಿಯಲ್ಲಿ ಎಷ್ಟು ಸಮರ್ಪಿತಾರಾಗಿದ್ದರು ಎಂದರೆ ಅವರು ಬೆಳದಿಂಗಳ ರಾತ್ರಿಯಲ್ಲಿ ಹಾಕಿ ಆಟವನ್ನು ಅಭ್ಯಾಸ ಮಾಡುತ್ತಿದ್ದರು. ಅದು ಅವರಿಗೆ ಧ್ಯಾನ್ ಚಂದ್ ಎಂಬ ಹೆಸರನ್ನು ತಂದುಕೊಟ್ಟಿತು. ಮೇಜರ್ ಧ್ಯಾನ್ ಚಂದ್ ಅವರು 1956 ರಲ್ಲಿ ಭಾರತೀಯ ಸೇನೆಯ ಪಂಜಾಬ್ ರೆಜಿಮೆಂಟ್ ನಿಂದ ನಿವೃತ್ತರಾಧ ನಂತರ, ಭಾರತ ಸರ್ಕಾರವು ಅವರಿಗೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು ನೀಡಿ ಗೌರವಿಸಿದೆ.
8 / 8
ರಾಷ್ಟ್ರೀಯ ಕ್ರೀಡಾ ದಿನದ ಮಹತ್ವ: ಕ್ರೀಡೆಯ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಹಾಗೂ ದೈಹಿಕವಾಗಿ ಸಕ್ರಿಯವಾಗಿರಲು ಜನರನ್ನು ಪ್ರೋತ್ಸಾಹಿಸುವ ಸಲುವಾಗಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತದೆ. ಕ್ರೀಡೆಗಳ ಬಗ್ಗೆ ಅರಿವು ಮೂಡಿಸಲು ಮತ್ತು ಒಬ್ಬರ ಜೀವನದಲ್ಲಿ ಅದು ಹೇಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ತಿಳಿಸಲು ಈ ವಿಶೇಷ ದಿನ ಶೈಕ್ಷಣಿಕ ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತದೆ.