ದಾವಣಗೆರೆಯಲ್ಲಿ ಅಪರೂಪದ ದೇವಸ್ಥಾನ; 6 ಕೋಟಿ ವೆಚ್ಚದಲ್ಲಿ ಹೊಯ್ಸಳ ಶೈಲಿಯ ಕಲ್ಲಿನ ದೇಗುಲ ನಿರ್ಮಾಣ ಮಾಡಿದ ಗ್ರಾಮಸ್ಥರು, ಏಕೆ?
TV9 Web | Updated By: ಆಯೇಷಾ ಬಾನು
Updated on:
Feb 17, 2023 | 9:35 AM
ದೇವಸ್ಥಾನಗಳನ್ನು ನಿರ್ಮಾಣ ಮಾಡಲು ಎಲ್ಲ ಕಡೆ ಭಕ್ತರಿಂದ ದೇಣಿಗೆ ಸಂಗ್ರಹ ಮಾಡಲಾಗುತ್ತೆ. ಆದ್ರೆ ಇಲ್ಲೊಂದು ಗ್ರಾಮದಲ್ಲಿ ಯಾರ ಸಹಯವನ್ನೂ ಪಡೆಯದೇ ಗ್ರಾಮಸ್ಥರೇ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅದ್ಭುತವಾದ ದೇವಸ್ಥಾನ ನಿರ್ಮಿಸಿದ್ದಾರೆ.
1 / 8
ದೇವಸ್ಥಾನಗಳನ್ನು ನಿರ್ಮಾಣ ಮಾಡಲು ಎಲ್ಲ ಕಡೆ ಭಕ್ತರಿಂದ ದೇಣಿಗೆ ಸಂಗ್ರಹ ಮಾಡಲಾಗುತ್ತೆ. ಆದ್ರೆ ಇಲ್ಲೊಂದು ಗ್ರಾಮದಲ್ಲಿ ಯಾರ ಸಹಯವನ್ನೂ ಪಡೆಯದೇ ಗ್ರಾಮಸ್ಥರೇ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅದ್ಭುತವಾದ ದೇವಸ್ಥಾನ ನಿರ್ಮಿಸಿದ್ದಾರೆ.
2 / 8
ಹೊಯ್ಸಳರ ಶೈಲಿಯಲ್ಲಿ ನಿರ್ಮಾಣವಾಗಿರುವ ಭವ್ಯವಾದ ದೇವಸ್ಥಾನ ಕಂಗೊಳಿಸುತ್ತಿದೆ. ಪ್ರತಿ ಕಲ್ಲಿನ ಮೇಲೂ ವಿಶೇಷ ಕೆತ್ತನೆಗಳನ್ನ ಕೆತ್ತಲಾಗಿದೆ. ನೆರೆದವರ ಮುಖದಲ್ಲಿ ಅದೇನೋ ಸಾಧಿಸಿದ ಭಾವ ಕಾಣ್ತಿದೆ. ಗ್ರಾಮಸ್ಥರ ಹಲವು ವರ್ಷಗಳ ಕನಸು ಕೊನೆಗೂ ಈಡೇರಿದೆ.
3 / 8
ದಾವಣಗೆರೆ ಜಿಲ್ಲೆ, ಹೊನ್ನಾಳಿ ತಾಲೂಕಿನ ಕುಳಗಟ್ಟೆ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಾಲಯ 2017 ರಲ್ಲಿ ಶಿಥಿಲಗೊಂಡಿತ್ತು. ಬೇರೆ ಮೂರ್ತಿ ಮಾಡಿಸಲು ಗ್ರಾಮಸ್ಥರು ಬೇರೆ ಬೇರೆ ಊರು ಸುತ್ತುತ್ತಿದ್ರಂತೆ.
4 / 8
ಆಗ ಗ್ರಾಮದ ವ್ಯಕ್ತಿಯೊಬ್ಬರ ಮೈಮೇಲೆ ದೇವರು ಬಂದು ನಿಮ್ಮ ಊರಿನಲ್ಲಿ ನನ್ನ ವಿಗ್ರಹವಿದೆ. ಅದನ್ನೇ ಪ್ರತಿಷ್ಠಾಪಿಸಿ ಎಂದಿಂತ್ತಂತೆ. ಬಳಿಕ ಗ್ರಾಮಸ್ಥರೆಲ್ಲ ದೇವಾಲಯ ಮರು ನಿರ್ಮಾಣ ಮಾಡಲು ಮುಂದಾಗಿದ್ರಂತೆ.
5 / 8
ಇದಕ್ಕಾಗಿ ಯಾವುದೇ ರಾಜಕಾರಣಿಗಳ ಬಳಿಗೆ ಅಥವಾ ಬೇರೆಲ್ಲೂ ಹಣಕಾಸಿಗೆ ಕೈಚಾಚಬಾರದು ಅಂತ ನಿರ್ಧರಿಸಿದ್ರಂತೆ. ಅದರಂತೆ ಗ್ರಾಮಸ್ಥರೆ ಇಂತಿಷ್ಟು ಅಂತ ಹಣ ಹೊಂದಿಸಿಕೊಂಡು ಬರೊಬ್ಬರಿ 6 ಕೋಟಿ ವೆಚ್ಚದಲ್ಲಿ ಅದ್ಭುತವಾದ ಹೊಯ್ಸಳ ಶೈಲಿಯ ಕಲ್ಲಿನ ದೇವಾಲಯ ನಿರ್ಮಿಸಿದ್ದಾರೆ.
6 / 8
1,500 ಮನೆಗಳಿರುವ ಕುಳಗಟ್ಟೆ ಗ್ರಾಮದಲ್ಲಿ ಪ್ರತಿ ಮನೆಯವರು 30 ಸಾವಿರದಿಂದ 5 ಲಕ್ಷದವರೆಗೂ ದಾನ ನೀಡಿದ್ದಾರೆ. ನಿರ್ಮಾಣಕ್ಕೆ 5 ವರ್ಷ ಕಾಲಾವಕಾಶ ತೆಗೆದುಕೊಂಡಿದ್ದಾರೆ.
7 / 8
ಈ ಆಂಜನೇಯ ಸ್ವಾಮಿ ವಿಶೇಷತೆ ಏನೆಂದ್ರೆ ವಿಗ್ರಹದ ಹಿಂದೆ 19 ದೊಡ್ಡ ಗುಂಡಿಗಳಿವೆಯಂತೆ. ಹೀಗಾಗಿ ಇದನ್ನು ಒಳಕಲ್ಲು ಹನುಮಂತಪ್ಪ ಅಂತಾನೂ ಕರೀತಾರೆ. ಇನ್ನು ಈ ದೇವಸ್ಥಾನ ಪಕ್ಕದಲ್ಲಿ ತಿಮ್ಮಪ್ಪನ ದೇವಸ್ಥಾನ, ನವಗ್ರಹ, ವಿಘ್ನೇಶ್ವರ ದೇವಾಲಯ ಸೇರಿದಂತೆ ಹಲವು ದೇವಾಲಯಗಳನ್ನು ನಿರ್ಮಾಣ ಮಾಡಲಾಗಿದೆ.
8 / 8
ಒಟ್ನಲ್ಲಿ ರಾಜಕಾರಣಿಗಳ ಸಹಾಯವಿಲ್ಲದೇ ಕೋಟ್ಯಂತರ ರೂ ವೆಚ್ಚದಲ್ಲಿ ಸುಂದರ ಮತ್ತು ವೈಭವದ ಕಲ್ಲಿನ ದೇವಸ್ಥಾನ ನಿರ್ಮಿಸಿರೋದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ವರದಿ: ಬಸವರಾಜ್ ದೊಡ್ಮನಿ, ಟಿವಿ9, ದಾವಣಗೆರೆ
Published On - 9:35 am, Fri, 17 February 23