ಆಲೇಮನೆಗೆ ಮಲೆನಾಡ ಚಳಿಗಾಲದ ಹಬ್ಬವೆಂದು ಹೇಳಬಹುದು. ತಿಂಗಳುಗಳ ಕಾಲ ನೀರು-ಗೊಬ್ಬರದ ಪಾಲನೆಯೊಂದಿಗೆ ಬೆಳೆಸಿದ ಕಬ್ಬನ್ನು ಗಾಣದಲ್ಲಿ ಹಿಂಡಿ ಶುದ್ಧ ಬೆಲ್ಲ ಮಾಡಿ ಮಲೆನಾಡ ಹಳ್ಳಿಗಳ ಮನೆಮನೆಯಲ್ಲಿ ಆಲೇಮನೆ ಹಬ್ಬವಾಗಿ ಆಚರಿಸುವುದು ವಾಡಿಕೆ. ಇಂತಹ ಆಲೆಮನೆಯೆಂಬ ಅಪರೂಪದ ಹಬ್ಬ ಶಿರಸಿಯ ‘ತವರುಮನೆ‘ಯಲ್ಲಿ ಇತ್ತೀಚಿಗೆ ನಡೆದಿತ್ತು. ಪ್ರಸನ್ನ ಜಾಜಿಗುಡ್ಡೆ, ಶ್ರೀರಾಮ ಮತ್ತು ರಾಮ ವೈದ್ಯ ತೆಗೆದಿರುವ ಈ ಚಿತ್ರಗಳು ಆಲೆಮನೆಯ ಕಬ್ಬಿನ ಹಾಲು ಮತ್ತು ಬೆಲ್ಲದ ಸವಿರುಚಿಯನ್ನು ದಕ್ಕಿಸಿಕೊಡುವಷ್ಟು ಸೊಗಸಾಗಿವೆ.