Kannada News Photo gallery Poco recently launched Poco C51 phone sale started with just rs 5499 also you can get 50GB Free Airtel Data
Poco C51: ಬೆಲೆ ಕೇವಲ 5,499 ರೂ.: ಇಂದು ಈ ಸ್ಮಾರ್ಟ್‌ಫೋನ್ ಖರೀದಿಸಿದ್ರೆ 50GB ಡೇಟಾ ಫ್ರೀ
ಭಾರತದ ಟೆಲಿಕಾಂ ಕಂಪನಿ ಭಾರ್ತಿ ಏರ್ಟೆಲ್ ಜೊತೆ ಪೋಕೋ ಪಾಲುದಾರಿಕೆ ಮಾಡಿಕೊಂಡು ಕೈಗೆಟುವ ದರಕ್ಕೆ ಪೋಕೋ C51 ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಇದು 4ಜಿ ಬೆಂಬಲ ಪಡೆದುಕೊಂಡಿರುವ ಫೋನಾಗಿದೆ.
1 / 8
ಚೀನಾ ಮೂಲದ ಪ್ರಸಿದ್ಧ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಪೋಕೋ ಕಳೆದ ವಾರವಷ್ಟೆ ಹೊಸ ಪೋಕೋ C51 (Poco C51) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿತ್ತು. ಈ ಫೋನ್ ಇಂದಿನಿಂದ ಖರೀದಿಗೆ ಸಿಗುತ್ತಿದೆ.
2 / 8
ಭಾರತದ ಟೆಲಿಕಾಂ ಕಂಪನಿ ಭಾರ್ತಿ ಏರ್ಟೆಲ್ ಜೊತೆ ಪೋಕೋ ಪಾಲುದಾರಿಕೆ ಮಾಡಿಕೊಂಡು ಕೈಗೆಟುವ ದರಕ್ಕೆ ಪೋಕೋ C51 ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಇದು 4ಜಿ ಬೆಂಬಲ ಪಡೆದುಕೊಂಡಿರುವ ಫೋನಾಗಿದೆ.
3 / 8
ಈ ಫೋನನ್ನು ಖರೀದಿಸಿದರೆ ಏರ್ಟೆಲ್ ಬಳಕೆದಾರರು 50 GB ಉಚಿತ ಡೇಟಾ ಆಫರ್ ಪಡೆಯುತ್ತಾರೆ. ಈ ಆಫರ್ ಇಂದು ಲಭ್ಯವಿದ್ದು, ಎಷ್ಟು ದಿನಗಳ ವರೆಗೆ ಇರಲಿದೆ ಎಂಬ ಮಾಹಿತಿ ಬಹಿರಂಗವಾಗಿಲ್ಲ.
4 / 8
ಈ ಬಗ್ಗೆ ಪೋಕೋ ಇಂಡಿಯಾದ ಮುಖ್ಯಸ್ಥ ಹಿಮಾಂಶು ಟಂಡನ್ ಮಾತನಾಡಿ, “ಪೋಕೋ ಮತ್ತು ಏರ್ಟೆಲ್ ಮೈತ್ರಿ ಮಾಡಿಕೊಂಡು ಅತಿ ಕಡಿಮೆ ಬೆಲೆಗೆ ದೇಶಾದ್ಯಂತ ಪೋಕೋ C51 ಸ್ಮಾರ್ಟ್ಫೋನನ್ನು ಬಿಡುಗಡೆ ಮಾಡಿದೆ. ಏರ್ಟೆಲ್ನ ವಿಸ್ತಾರವಾದ ನೆಟ್‌ವರ್ಕ್ ಅನ್ನು ಆನಂದಿಸುವ ಜೊತೆಗೆ ಪೋಕೋ ಅತ್ಯಾಧುನಿಕ ತಂತ್ರಜ್ಞಾನದ ಪ್ರಯೋಜನಗಳನ್ನು ಸಹ ನೀಡುತ್ತದೆ,” ಎಂದು ಹೇಳಿದ್ದಾರೆ.
5 / 8
ಪೋಕೋ C51 4G ಸ್ಮಾರ್ಟ್‌ಫೋನ್ ಬೆಲೆ ಕೇವಲ 5999 ರೂ. ಆಗಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ. ಇದು ಭಾರತದ ಅತ್ಯಂತ ಕಡಿಮೆ ಬೆಲೆಯ 4G ಸ್ಮಾರ್ಟ್‌ಫೋನ್ ಎಂದು ಕಂಪನಿ ಹೇಳಿದೆ.
6 / 8
ಪೋಕೋ C51 ಸ್ಮಾರ್ಟ್‌ಫೋನ್ 6.52-ಇಂಚಿನ ಡಿಸ್ ಪ್ಲೇಯನ್ನು ಹೊಂದಿದೆ. ಇದು 7GB ಟರ್ಬೊ RAM (4GB LPDDR4X + 3GB ಟರ್ಬೊ RAM) ಮತ್ತು 64 GB ಆಂತರಿಕ ಸಂಗ್ರಹಣೆಯ ಶೇಖರಣಾ ಸಾಮರ್ಥ್ಯದೊಂದಿಗೆ ಬರುತ್ತದೆ.
7 / 8
ಈ ಫೋನ್ ಮೀಡಿಯಾಟೆಕ್ ಹೀಲಿಯೊ G36 SoC ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ದೀರ್ಘ ಸಮಯ ಚಾರ್ಜ್ ಉಳಿಯುತ್ತಂತೆ.
8 / 8
ಪೋಕೋ C51 ಸ್ಮಾರ್ಟ್ಫೋನ್ನಲ್ಲಿ 8 ಮೆಗಾ ಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 5 ಮೆಗಾ ಪಿಕ್ಸೆಲ್ ಮುಂಭಾಗ ಸೆಲ್ಫೀ ಕ್ಯಾಮೆರಾವನ್ನು ಒಳಗೊಂಡಿದೆ. ಈ ಫೋನ್ ಆಂಡ್ರಾಯ್ಡ್ 13 ನ ಇತ್ತೀಚಿನ ಆಂಡ್ರಾಯ್ಡ್ ಆವೃತ್ತಿಯಲ್ಲಿ ರನ್ ಆಗುತ್ತದೆ. ಫೋನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಅಕ್ಸೆಲೆರೊಮೀಟರ್ ಹೊಂದಿದೆ.