- Kannada News Photo gallery Here is the tricks to know if someone reading Your WhatsApp messages secretly
Tech Tips: ನಿಮ್ಮ ವಾಟ್ಸ್ಆ್ಯಪ್ ಮೆಸೇಜ್ ಅನ್ನು ಬೇರೆಯವರು ಕದ್ದು ಓದುತ್ತಿರಬಹುದು: ತಿಳಿಯುವುದು ಹೇಗೆ?
WhatsApp Tricks: ಹ್ಯಾಕ್ ಆದ ವಾಟ್ಸ್ಆ್ಯಪ್ ಕೆಲವೊಮ್ಮೆ ದುರುಪಯೋಗ ಕೂಡಾ ಆಗಬಹುದು. ಹೀಗಾಗಿ ಬಳಕೆದಾರರ ವಾಟ್ಸ್ಆ್ಯಪ್ ಚಾಟ್ ಅನ್ನು ಯಾರಾದರೂ ರಹಸ್ಯವಾಗಿ ಓದುತ್ತಿದ್ದಾರೆಯೇ/ ವೀಕ್ಷಿಸುತ್ತಿದ್ದಾರೆಯೇ ಎನ್ನುವುದನ್ನು ತಿಳಿಯುವುದು ಮುಖ್ಯ.
Updated on:Jul 18, 2023 | 4:37 PM

ಮೆಟಾ ಒಡೆತನದ ವಾಟ್ಸ್ಆ್ಯಪ್ ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ಈಗಾಗಲೇ ಹಲವು ಫೀಚರ್ಗಳನ್ನು ಪರಿಚಯಿಸಿ ಪ್ರಸಿದ್ಧಿ ಪಡೆದುಕೊಂಡಿದೆ. ಇನ್ನೂ ಸಾಲು ಸಾಲು ಅಪ್ಡೇಟ್ಗಳು ಬರಲು ತಯಾರಾಗಿದೆ.

ಇದರ ನಡುವೆ ಬಳಕೆದಾರರ ಖಾತೆ ಸುರಕ್ಷತೆಗೆ ಕೆಲವು ಫೀಚರ್ಸ್ ಇದ್ದರೂ ಕೆಲವೊಮ್ಮೆ ವಾಟ್ಸ್ಆ್ಯಪ್ ಹ್ಯಾಕ್ ಆಗುವ ಸಾಧ್ಯತೆಗಳು ಇರುತ್ತವೆ. ಅನೇಕ ಬಾರಿ ಬಳಕೆದಾರರಿಗೆ ಗೊತ್ತಿಲ್ಲದೇ ಅವರ ವಾಟ್ಸ್ಆ್ಯಪ್ ಚಾಟ್ ಅನ್ನು ಬೇರೆಯವರು ಜಾಲಾಡುವ ಸಾಧ್ಯತೆಗಳಿವೆ.

ವಾಟ್ಸ್ಆ್ಯಪ್ ಖಾತೆಯನ್ನು ಇತರೆ ಡಿವೈಸ್‌ಗಳಲ್ಲಿ ಬಳಕೆ ಮಾಡಬಹುದಾಗಿದೆ. ಇದೊಂದು ಅನುಕೂಲಕರ ಫೀಚರ್ ಆಗಿದ್ದರೂ ಕೆಲವೊಮ್ಮೆ ಸಮಸ್ಯೆ ಎನಿಸಬಹುದು. ಕಂಪ್ಯೂಟರ್ಗಳಲ್ಲಿಯೂ ಈಗೀಗ ವಾಟ್ಸ್ಆ್ಯಪ್ ಬಳಸುತ್ತಿರುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ನಮ್ಮ ಖಾತೆ ಎಲ್ಲಿ ಲಾಗಿನ್ ಆಗಿರುತ್ತದೆ ಎಂಬುದು ಅರಿವಿಗೆ ಬರುವುದಿಲ್ಲ. ಹಾಗಾದ್ರೆ ನಿಮ್ಮ ವಾಟ್ಸ್ಆ್ಯಪ್ ಬೇರೆಯವರು ವೀಕ್ಷಿಸುತ್ತಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ?.

ಕೆಲವೊಮ್ಮೆ ಬಳಕೆದಾರರ ತಪ್ಪಿನಿಂದಲೇ ಬೇರೆಯವರು ಅವರ ವಾಟ್ಸ್ಆ್ಯಪ್ ಚಾಟ್/ ಮೀಡಿಯಾ ಫೈಲ್ಸ್ ವೀಕ್ಷಿಸುತ್ತಾರೆ. ಅಂದರೆ ಬಳಕೆದಾರರ ತಪ್ಪಿನಿಂದಲೇ ಅವರ ವಾಟ್ಸ್ಆ್ಯಪ್ ಹ್ಯಾಕ್ ಆಗುವ ಚಾನ್ಸ್ ಇರುತ್ತವೆ.

ಹ್ಯಾಕ್ ಆದ ವಾಟ್ಸ್ಆ್ಯಪ್ ಕೆಲವೊಮ್ಮೆ ದುರುಪಯೋಗ ಕೂಡಾ ಆಗಬಹುದು. ಹೀಗಾಗಿ ಬಳಕೆದಾರರ ವಾಟ್ಸ್ಆ್ಯಪ್ ಚಾಟ್ ಅನ್ನು ಯಾರಾದರೂ ರಹಸ್ಯವಾಗಿ ಓದುತ್ತಿದ್ದಾರೆಯೇ/ ವೀಕ್ಷಿಸುತ್ತಿದ್ದಾರೆಯೇ ಎನ್ನುವುದನ್ನು ತಿಳಿಯುವುದು ಮುಖ್ಯ.

ಬಳಕೆದಾರರ ವಾಟ್ಸ್ಆ್ಯಪ್ ಚಾಟ್ ಅನ್ನು ಯಾರಾದರೂ ರಹಸ್ಯವಾಗಿ ಓದುತ್ತಿದ್ದಾರೆಯೇ/ ವೀಕ್ಷಿಸುತ್ತಿದ್ದಾರೆಯೇ ಎನ್ನುವುದನ್ನು ತಿಳಿಯಲು ಯಾವುದೇ ಥರ್ಡ್‌ಪಾರ್ಟಿ ಆಪ್ ಅಗತ್ಯ ಇಲ್ಲ. ಬದಲಿಗೆ ಬಳಕೆದಾರರು ಅವರ ವಾಟ್ಸ್ಆ್ಯಪ್ನಲ್ಲಿಯೇ ಈ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಮೊದಲಿಗೆ ನಿಮ್ಮ ವಾಟ್ಸ್ಆ್ಯಪ್ ಅಪ್ಲಿಕೇಶನ್ ಅನ್ನು ತೆರೆಯಿರಿ. ನಂತರ ಬಲ ಭಾಗದಲ್ಲಿ ಕಾಣಿಸುವ ಮೂರು ಡಾಟ್ ಸೆಲೆಕ್ಟ್ ಮಾಡಿರಿ. ಬಳಿಕ ಅಲ್ಲಿ ಕಾಣುಸಿವ ವಾಟ್ಸ್ಆ್ಯಪ್ ವೆಬ್ / ಲಿಂಕ್ ಡಿವೈಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನೀವು ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ವಾಟ್ಸ್ಆ್ಯಪ್ ತೆರೆಯದಿದ್ದರೂ ಲಿಂಕ್ ಆಗಿದೆ ಎನ್ನುವುದನ್ನು ತೋರಿಸುತ್ತಿದ್ದರೆ ನಿಮ್ಮ ವಾಟ್ಸ್ಆ್ಯಪ್ ಚಾಟ್ ಅನ್ನು ಬೇರೆಯವರು ಓದುತ್ತಿದ್ದಾರೆ ಎಂದರ್ಥ.
Published On - 4:37 pm, Tue, 18 July 23









