ಚೆಸ್ ವಿಶ್ವಕಪ್​ನಲ್ಲಿ ರನ್ನರ್​ಅಪ್ ಆದ ಪ್ರಜ್ಞಾನಂದಗೆ ಸಿಕ್ಕ ಒಟ್ಟು ಹಣವೆಷ್ಟು ಗೊತ್ತೇ?

|

Updated on: Aug 25, 2023 | 8:17 AM

FIDE World Cup 2023 Prize Money: FIDE ವರ್ಲ್ಡ್ ಕಪ್ 2023ರಲ್ಲಿ ಗುರುವಾರ ನಡೆದ ಟೈಬ್ರೇಕ್​ನ ಪಂದ್ಯದಲ್ಲಿ 1-0 ಅಂತರದಿಂದ ಜಯ ಸಾಧಿಸಿ ಕಾರ್ಲ್​ಸೆನ್ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದರು. ಭಾರತದ ಆರ್​. ಪ್ರಜ್ಞಾನಂದ ರನ್ನರ್​ಅಪ್​ ಆಗಿ ಹೊರಹೊಮ್ಮಿದರು. ಇವರಿಬ್ಬರಿಗೆ ಸಿಕ್ಕ ಹಣವೆಷ್ಟು ಗೊತ್ತೇ?, ಇಲ್ಲಿದೆ ನೋಡಿ ಮಾಹಿತಿ.

1 / 8
FIDE ವರ್ಲ್ಡ್ ಕಪ್ 2023 ಅನ್ನು ಗೆಲ್ಲುವಲ್ಲಿ ಭಾರತದ ಆರ್ ಪ್ರಜ್ಞಾನಂದ ವಿಫಲರಾಗಿದ್ದಾರೆ. ಅಝರ್​ಬೈಜಾನ್​ನ ಬಾಕುವಿನಲ್ಲಿ ನಡೆದ ಚೆಸ್ ವಿಶ್ವಕಪ್ ಫೈನಲ್‌ನಲ್ಲಿ ವಿಶ್ವ ನಂಬರ್ 1 ಮ್ಯಾಗ್ನಸ್ ಕಾರ್ಲ್‌ಸೆನ್ ಅವರು ಭಾರತೀಯ ಗ್ರ್ಯಾಂಡ್‌ಮಾಸ್ಟರ್‌ನ ಮೇಲೆ ಟೈಬ್ರೇಕ್​ನಲ್ಲಿ ಮೇಲುಗೈ ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದರು.

2 / 8
ಆರ್​.ಪ್ರಜ್ಞಾನಂದ ಹಾಗೂ ಕಾರ್ಲ್​ಸನ್ ನಡುವಿನ ತೀವ್ರ ಪೈಪೋಟಿಯಿಂದಾಗಿ ಮಂಗಳವಾರ ಹಾಗೂ ಬುಧವಾರ ಸತತ ಎರಡು ದಿನಗಳು ಡ್ರಾನಲ್ಲಿ ಅಂತ್ಯಕಂಡಿತ್ತು. ಹೀಗಾಗಿ ಗುರುವಾರ ಅಲ್ಪಾವಧಿಯ ಟೈ-ಬ್ರೇಕ್​ ಪಂದ್ಯವನ್ನು ನಡೆಸಲಾಗಿತ್ತು. ರಣರೋಚಕ ಪೈಪೋಟಿಗೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ವಿಶ್ವದ ನಂಬರ್ 1 ಚೆಸ್​ ತಾರೆಗೆ ಎಲ್ಲಾ ರೀತಿಯಲ್ಲೂ ಪೈಪೋಟಿ ನೀಡುವಲ್ಲಿ ಪ್ರಜ್ಞಾನಂದ ಯಶಸ್ವಿಯಾಗಿದ್ದರು. ಆದರೆ ಟೈಬ್ರೇಕ್​ನಲ್ಲಿ ಮೇಲುಗೈ ಸಾಧಿಸುವ ಮೂಲಕ ಕಾರ್ಲ್​ಸೆನ್ ವಿಶ್ವ ಚಾಂಪಿಯನ್ ಆದರು.

3 / 8
ಮಂಗಳವಾರ ನಡೆದ ಫೈನಲ್ ಪಂದ್ಯದ ಮೊದಲ ಗೇಮ್​ನಲ್ಲಿ ನಾರ್ವೆಯ ಕಾರ್ಲ್​ಸೆನ್ ಅವರನ್ನು ಆರಂಭದಲ್ಲೇ ಒತ್ತಡಕ್ಕೆ ಸಿಲುಕಿಸುವಲ್ಲಿ ಪ್ರಜ್ಞಾನಂದ ಯಶಸ್ವಿಯಾಗಿದ್ದರು. ಆದರೆ, ಮೊದಲ ಗೇಮ್​ನ ಅಂತಿಮ ಸುತ್ತಿನಲ್ಲಿ ಜಾಣ್ಮೆಯ ನಡೆಗಳ ಮೂಲಕ ಕಾರ್ಲ್​ಸೆನ್ ಪಂದ್ಯದಲ್ಲಿ ಹಿಡಿತ ಸಾಧಿಸಿದರು. ಇದರೊಂದಿಗೆ ಮೊದಲ ಸುತ್ತು 35 ಚಲನೆಗಳ ನಂತರ ಡ್ರಾದಲ್ಲಿ ಕೊನೆಗೊಂಡಿತ್ತು.

4 / 8
ಬುಧವಾರ ನಡೆದ 2ನೇ ಗೇಮ್​ನಲ್ಲಿ ಕಪ್ಪು ಕಾಯಿಗಳೊಂದಿಗೆ ಚದುರಂಗ ಚಲನೆ ಆರಂಭಿಸಿದ್ದ ಪ್ರಜ್ಞಾನಂದ ಆರಂಭದಲ್ಲೇ ಸಮಬಲದ ಹೋರಾಟ ನಡೆಸಿದ್ದರು. ಕಾರ್ಲ್​ಸೆನ್ ಜಾಣ ಚಲನೆಗೆ ಅತ್ಯುತ್ತಮ ಚೆಕ್​ ನಡೆಗಳ ಮೂಲಕ ಪ್ರಜ್ಞಾನಂದ ಪ್ರತ್ಯುತ್ತರ ನೀಡಿದ್ದರು. ಪರಿಣಾಮ 22 ನಡೆಗಳ ನಂತರ ಕೂಡ ಪಂದ್ಯವು ಸಮತೋಲಿತವಾಗಿತ್ತು.

5 / 8
ಗುರುವಾರ ನಡೆದ ಟೈಬ್ರೇಕ್​ನ ಮೊದಲ ಸುತ್ತಿನ ಫಸ್ಟ್ ಗೇಮ್​ನ 47 ಮೂವ್​ಗಳ ಬಳಿಕ ಟೈಬ್ರೇಕ್​ನ ಮೊದಲ ಗೇಮ್​ನಲ್ಲಿ ಜಯ ಸಾಧಿಸುವಲ್ಲಿ ಯಶಸ್ವಿಯಾದ ಕಾರ್ಲ್‌ಸೆನ್ 1-0 ಮುನ್ನಡೆ ಸಾಧಿಸಿದರು.

6 / 8
ಟೈಬ್ರೇಕ್​ನ 2ನೇ ಗೇಮ್​ ಅನ್ನು ಆರಂಭಿಸಿದ್ದ ಪ್ರಜ್ಞಾನಂದ ಪ್ರಾರಂಭದಲ್ಲೇ ಹಿನ್ನಡೆ ಅನುಭವಿಸಿದರು. ಅಲ್ಲದೆ ಪ್ರತಿ ಚಲನೆಗೂ ಹೆಚ್ಚಿನ ಸಮಯ ತೆಗೆದುಕೊಂಡರು. ಈ ಹಂತದಲ್ಲಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಕಾರ್ಲ್​​ಸೆನ್ ಮ್ಯಾಚ್​ ಅನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಮೂಲಕ 1-0 ಅಂತರದಿಂದ ಜಯ ಸಾಧಿಸಿ ಕಾರ್ಲ್​ಸೆನ್ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದರು.

7 / 8
FIDE ಚೆಸ್ ವಿಶ್ವಕಪ್ 2023 ರ ಒಟ್ಟು ಬಹುಮಾನದ ಮೊತ್ತವು USD 1,834,000 ಆಗಿದೆ. ಈ ಹಣವನ್ನು 206 ಆಟಗಾರರ ನಡುವೆ ಹಂಚಲಾಗುತ್ತದೆ. ಫೈನಲ್​ನಲ್ಲಿ ಜಯ ಗಳಿಸಿದ ಪ್ಲೇಯರ್​ಗೆ USD 110,000 ಭಾರೀ ವೇತನದ ಚೆಕ್ ಅನ್ನು ನೀಡಲಾಗುತ್ತದೆ.

8 / 8
ಸದ್ಯ ರನ್ನರ್​ಅಪ್​ ಆಗಿ ಹೊರಹೊಮ್ಮಿರುವ ಭಾರತದ ಆರ್​.ಪ್ರಜ್ಞಾನಂದ ಅವರಿಗೆ 80 ಸಾವಿರ ಅಮೆರಿಕ ಡಾಲರ್ ಅಂದರೆ, ಅಂದಾಜು 66.13 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ. ವಿಶ್ವಕಪ್ ಗೆದ್ದ ನಾರ್ವೆಯ ಮ್ಯಾಗ್ನಸ್​ ಕಾರ್ಲ್​ಸನ್ ಅವರು 110 ಸಾವಿರ ಡಾಲರ್​ (ಅಂದಾಜು​ 90.90 ಲಕ್ಷ ರೂಪಾಯಿ) ಪಡೆದುಕೊಂಡಿದ್ದಾರೆ.