- Kannada News Photo gallery BS Yediyurappa attends Harshika Poonacha and Bhuvan Ponnanna marriage in Kodagu
ಹರ್ಷಿಕಾ-ಭುವನ್ ಮದುವೆಗೆ ಆಗಮಿಸಿ ಆಶೀರ್ವಾದ ಮಾಡಿದ ಬಿಎಸ್ ಯಡಿಯೂರಪ್ಪ; ಇಲ್ಲಿದೆ ಫೋಟೋ ಗ್ಯಾಲರಿ
ಚಂದನವನದ ಕ್ಯೂಟ್ ಕಪಲ್ ಆದಂತಹ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಅವರ ಮದುವೆ ಇಂದು (ಆಗಸ್ಟ್ 24) ನೆರವೇರಿದೆ. ಇವರ ವಿವಾಹ ಕಾರ್ಯಕ್ರಮಕ್ಕೆ ಅನೇಕ ಗಣ್ಯರು ಸಾಕ್ಷಿ ಆಗಿದ್ದಾರೆ. ಮದುವೆಯ ಕಲರ್ಫುಲ್ ಫೋಟೋಗಳು ಲಭ್ಯವಾಗಿವೆ. ಕೊಡವ ಸಂಪ್ರದಾಯದಂತೆ ಈ ವಿವಾಹ ನಡೆದಿದೆ.
Updated on:Aug 24, 2023 | 3:38 PM

ರಾಜಕೀಯ ಮತ್ತು ಸಿನಿಮಾ ಕ್ಷೇತ್ರದ ಅನೇಕರಿಗೆ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಅವರು ಆಮಂತ್ರಣ ನೀಡಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈ ವಿವಾಹ ಸಮಾರಂಭಕ್ಕೆ ಸಾಕ್ಷಿ ಆಗಿದ್ದಾರೆ. ನವ ದಂಪತಿಯನ್ನು ಅವರು ಆಶೀರ್ವದಿಸಿದ್ದಾರೆ. Photo Credit: Deepak Vijay Photography

ಹಲವು ವರ್ಷಗಳಿಂದ ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ಅವರು ಪ್ರೀತಿಸುತ್ತಿದ್ದರು. ಆದರೆ ತಮ್ಮ ಪ್ರೀತಿಯ ಬಗ್ಗೆ ಅವರು ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಈಗ ಎರಡೂ ಕುಟುಂಬದವರ ಒಪ್ಪಿಗೆ ಪಡೆದು ಈ ಪ್ರೇಮಪಕ್ಷಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿವೆ. Photo Credit: Deepak Vijay Photography

ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಅವರು ಮೂಲತಃ ಕೊಡಗಿನವರು. ಹಾಗಾಗಿ ಕೊಡವ ಸಂಪ್ರದಾಯದ ಪ್ರಕಾರವೇ ಈ ಮದುವೆ ನಡೆದಿದೆ. ಸರಳವಾಗಿ ಮತ್ತು ಸುಂದರವಾಗಿ ನಡೆದ ಈ ಮದುವೆಗೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದಾರೆ. Photo Credit: Deepak Vijay Photography

ಕೊಡವ ಸಂಪ್ರದಾಯದ ಉಡುಗೆ ಧರಿಸಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಅವರು ಮಿಂಚಿದ್ದಾರೆ. ಇಬ್ಬರ ಫೋಟೋಗಳು ಕಣ್ಮನ ಸೆಳೆಯುತ್ತಿವೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. Photo Credit: Deepak Vijay Photography

ಚಿತ್ರರಂಗದಲ್ಲಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಈಗ ಮದುವೆಯ ಸಲುವಾಗಿ ಅವರು ಸಿನಿಮಾದ ಕೆಲಸಗಳಿಗೆ ಬ್ರೇಕ್ ನೀಡಿದ್ದಾರೆ. ಅವರ ಕುಟುಂಬದಲ್ಲಿ ಮದುವೆಯ ಸಂಭ್ರಮ ಮನೆಮಾಡಿದೆ. Photo Credit: Deepak Vijay Photography

ಹರ್ಷಿಕಾ ಪೂಣಚ್ಚ ಅವರು ಕನ್ನಡ ಚಿತ್ರರಂಗ ಮಾತ್ರವಲ್ಲದೇ ತೆಲುಗು, ತಮಿಳು, ಭೋಜ್ಪುರಿ, ಕೊಂಕಣಿ, ಮಲಯಾಳಂ ಮುಂತಾದ ಭಾಷೆಯ ಸಿನಿಮಾಗಳಲ್ಲೂ ನಟಿಸಿದ್ದಾರೆ. ಹಾಗಾಗಿ ಪರಭಾಷೆಯಲ್ಲೂ ಅವರಿಗೆ ಸ್ನೇಹಿತರಿದ್ದಾರೆ. ಎಲ್ಲರಿಗೂ ಮದುವೆಯ ಆಮಂತ್ರಣ ನೀಡಲಾಗಿದೆ. Photo Credit: Deepak Vijay Photography

ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ಅವರು ಜೊತೆಯಾಗಿ ಹೊಸ ಪ್ರೊಡಕ್ಷನ್ ಕಂಪನಿ ಆರಂಭಿಸಿದ್ದಾರೆ. ಇದಕ್ಕೆ ‘ಭುವನಂ ಎಂಟರ್ಟೇನ್ಮೆಂಟ್’ ಎಂದು ಹೆಸರು ಇಡಲಾಗಿದೆ. ಈ ಸಿನಿಮಾ ಮೂಲಕ ಹರ್ಷಿಕಾ ಪೂಣಚ್ಚ ಅವರು ಮೊದಲ ಬಾರಿಗೆ ನಿರ್ಮಾಪಕಿ ಆಗಿದ್ದಾರೆ. Photo Credit: Deepak Vijay Photography
Published On - 3:34 pm, Thu, 24 August 23
























